ಕಾಂಚೀಪುರಂ (ತಮಿಳುನಾಡು) ಇಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಚರ್ಚ್‌ಅನ್ನು ಧ್ವಂಸ ಮಾಡಿ ! – ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ

ಕರ್ತವ್ಯಲೋಪಕ್ಕಾಗಿ ಸರಕಾರಿ ಅಧಿಕಾರಿಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಆದೇಶ

ಸ್ಮಶಾನಭೂಮಿಯನ್ನು ಅತಿಕ್ರಮಿಸಿ ಚರ್ಚ್ ಕಟ್ಟಿದ ನಿರ್ಮಿಸಿದ ಪಾದ್ರಿ !

  • ಈ ರೀತಿಯ ಅತಿಕ್ರಮಣ ಮಾಡಿ ಕಟ್ಟಿದ ಚರ್ಚ್‌ಅನ್ನು ಕೆಡವಲು ನ್ಯಾಯಾಲಯಕ್ಕೆ ಆದೇಶ ನೀಡಬೇಕಾದರೆ, ಆಡಳಿತ ಏಕೆ ಬೇಕು ?
  • ಪಾದ್ರಿ ಎಂದರೆ ‘ಕಾನೂನಿನ ರಕ್ಷಕ’, ’ಶಾಂತಿದೂತ’ ಎಂದು ದೇಶದ ಜನರಲ್ಲಿ ಉದ್ದೇಶಪೂರ್ವಕವಾಗಿ ಚಿತ್ರಣವನ್ನು ಬಿಂಬಿಸಲಾಗಿದೆ; ಆದರೆ ಅದು ಹೇಗೆ ತಪ್ಪೆಂಬುದು ಈ ಘಟನೆಯಿಂದ ಕಾನೂನುಬದ್ಧವಾಗಿ ಸಾಬೀತಾಗುತ್ತದೆ ! ಈ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಏನಾದರೂ ಮಾತನಾಡುವರೇ ?
  • ತಮಿಳುನಾಡಿನಲ್ಲಿ ಕ್ರೈಸ್ತರ ಓಲೈಕೆ ಮಾಡುವ ಡಿಎಂಕೆ ಸರಕಾರ ಅಧಿಕಾರದಲ್ಲಿರುವುದರಿಂದ ಅಲ್ಲಿನ ಪಾದ್ರಿಗಳು ಕಾನೂನುಬಾಹಿರ ಕೃತ್ಯ ಎಸಗುತ್ತಿದ್ದಾರೆ, ಇದರಲ್ಲಿ ಅಚ್ಚರಿಯೇನಿದೆ ?

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡು ರಾಜ್ಯದ ಕಾಂಚಿಪುರಂ ಜಿಲ್ಲಾಧಿಕಾರಿಗೆ ಮುಂದಿನ ೪ ವಾರಗಳಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಚರ್ಚ್‌ಅನ್ನು ಕೆಡಹುವಂತೆ ಆದೇಶ ನೀಡಿದೆ. ಜೊತೆಗೆ ವಿಭಾಗೀಯ ಕಂದಾಯ ಅಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಕರ್ತವ್ಯಲೋಪ ಎಸಗಿದ ಬಗ್ಗೆ ತನಿಖೆ ನಡೆಸುವಂತೆ ಮತ್ತು ಅದರ ಆಧಾರದಲ್ಲಿ ಎಲ್ಲಾ ತಪ್ಪಿತಸ್ಥರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲು ಆದೇಶಿಸಿದೆ. ಅರ್ಜಿದಾರರಾದ ಎಂ. ಮುರುಗೇಸನ್ ಇವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಸ್ಮಶಾನಭೂಮಿಯ ಮೇಲೆ ಬಲವಂತವಾಗಿ ಚರ್ಚ್ ಕಟ್ಟಿಸಿದ ಪಾದ್ರಿ !

ದಾಖಲೆಗಳ ಮಾಹಿತಿಯನ್ನು ಪಡೆದು ಉಭಯ ಪಕ್ಷಗಳ ಯುಕ್ತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪಾದ್ರಿ ಸಿ. ಸಾಥ್ರೈಕ ಈತನು ಗ್ರಾಮಸ್ಥರ ಹಾಗೂ ಸ್ಥಳೀಯ ಅಧಿಕಾರಿಗಳ ವಿರೋಧದ ನಡುವೆಯೂ ಸರಕಾರಿ ಜಾಗದಲ್ಲಿನ ಸ್ಮಶಾನಭೂಮಿಯ ಮೇಲೆ ಅತಿಕ್ರಮಣ ಮಾಡಿ ಚರ್ಚ್ ನಿರ್ಮಿಸಿದ್ದಾನೆ ಎಂದು ಹೇಳಿತು.