ರೈತರ ಮೃತ್ಯುವಿನ ಯಾವುದೇ ನೋಂದಣಿ ಇಲ್ಲದ ಕಾರಣ ನಷ್ಟ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ! – ಕೇಂದ್ರೀಯ ಕೃಷಿ ಸಚಿವಾಲಯದಿಂದ ಸ್ಪಷ್ಟೀಕರಣ

ರೈತರ ಆಂದೋಲನದಲ್ಲಿ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ನಷ್ಟಪರಿಹಾರ ನೀಡುವಂತೆ ಒತ್ತಾಯ

ನವ ದೆಹಲಿ – ಕೃಷಿ ವಿಷಯದ ಕಾನೂನು ಹಿಂಪಡೆಯುವ ಆಂದೋಲನದಲ್ಲಿ ರೈತರ ಮೃತ್ಯುವಿನ ಪ್ರಕರಣದಲ್ಲಿ ಅವರ ಕುಟುಂಬದವರಿಗೆ ನಷ್ಟ ಪರಿಹಾರ ನೀಡಬೇಕು, ಈ ಒತ್ತಾಯದ ಬಗ್ಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಿದೆ. ಕೆಂದ್ರಿಯ ಕೃಷಿ ಸಚಿವ ನರೇಂದ್ರ ತೋಮಾರ್ ಇವರು, ಸರಕಾರದಲ್ಲಿ ರೈತರ ಆಂದೋಲನದಿಂದ ಮೃತಪಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೃಷಿ ಸಚಿವಾಲಯದಲ್ಲಿ ಈ ರೀತಿಯ ಯಾವುದೇ ನೋಂದಣಿ ಇಲ್ಲ. ಆದ್ದರಿಂದ ಅವರ ಸಂಬಂಧಿಕರಿಗೆ ನಷ್ಟ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಗಲಾಟೆಯಿಂದ ಸಂಸತ್ತಿನ ಕಾರ್ಯಕಲಾಪ ಮಧ್ಯಾಹ್ನ ೧೨ ಗಂಟೆಯ ವರೆಗೆ ಸ್ಥಗಿತ

ಸಂಸತ್ತಿನಲ್ಲಿ ಗಲಾಟೆ ನಡೆಸಿ ಕಾರ್ಯಕಲಾಪವನ್ನು ನಡೆಸಲು ಅಡ್ಡಿ ಪಡೆಸುವ ಸಂಸದರನ್ನು ಅಮಾನತ್ತುಗೊಳಿಸಿ ಅವರಿಂದ ವ್ಯರ್ಥವಾದ ಸಮಯ ಮತ್ತು ನಷ್ಟ ಪರಿಹಾರ ವಸೂಲಿ ಮಾಡಬೇಕು !

ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದ ಮೂರನೆಯದಿನ ಎಂದರೆ ಡಿಸೆಂಬರ್ ೧ ರಂದು ಎರಡು ಸಂಸತ್ತಿನಲ್ಲಿ ಕಾರ್ಯಕಲಾಪದ ಆರಂಭದಲ್ಲಿಯೇ ಗಲಾಟೆ ಆರಂಭವಾಯಿತು. ಮಳೆಗಾಲದ ಅಧಿವೇಶನದಲ್ಲಿ ಗಲಾಟೆ ನಡೆಸುವ ವಿರೋಧಿ ಪಕ್ಷದ ೧೨ ಸಂಸದರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಅಮಾನತ್ತು ಮಾಡಿರುವುದರಿಂದ ವಿರೋಧಿ ಪಕ್ಷದಿಂದ ಗಲಾಟೆ ಮಾಡಲಾಗುತ್ತಿತ್ತು. ಆದ್ದರಿಂದ ಎರಡು ಸಂಸತ್ತಿನಲ್ಲಿ ಮಧ್ಯಾಹ್ನ ೧೨ ಗಂಟೆಯವರೆಗೆ ಸ್ಥಗಿತ ಪಡಿಸಲಾಯಿತು. ಸಂಸದರ ಅಮಾನತ್ತನ್ನು ರದ್ದು ಪಡಿಸುವಂತೆ ವಿರೋಧಿಗಳು ಒತ್ತಾಯಿಸುತ್ತಿದ್ದರು ಹಾಗೂ ‘ಅಮಾನತ್ತಾದ ಸಂಸದರು ಕ್ಷಮೆಯಾಚಿಸಬೇಕೆಂದು’ ಸಭಾಪತಿಯವರಿಂದ ಹೇಳಲಾಗುತ್ತಿದೆ. ವಿರೋಧಿ ಪಕ್ಷದವರು ‘ಸಂಸದರು ಕ್ಷಮೆಯಾಚಿಸುವುದಿಲ್ಲ’, ಎಂದು ಹೇಳಿದ್ದಾರೆ.