‘ಟ್ವಿಟರ್’ನಲ್ಲಿ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡಲು ಸಾಧ್ಯವಿಲ್ಲ ! – ‘ಟ್ವಿಟರ್’ನ ಹೊಸ ನಿಯಮ

ನವ ದೆಹಲಿ – ‘ಟ್ವಿಟರ್’ ಸಂಸ್ಥೆಯು ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ. ಅದಕ್ಕನುಸಾರ ಈಗ ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಖಾತೆದಾರರು ಬೇರೆ ಖಾತೆದಾರರ ಛಾಯಾಚಿತ್ರ ಮತ್ತು ವಿಡಿಯೋವನ್ನು ಅವರ ಅನುಮತಿಯಿಲ್ಲದೆ ‘ಶೇರ್’ ಮಾಡಬಹುದಿತ್ತು. ಶೋಷಣೆಯ ವಿರುದ್ಧ ನಿಯಮವನ್ನು ಇನ್ನಷ್ಟು ಪ್ರಬಲ ಮಾಡುವುದು ಮತ್ತು ಮಹಿಳಾ ಖಾತೆದಾರರಿಗೆ ಸುರಕ್ಷೆಯ ನೀಡುವುದೇ ಈ ಹೊಸ ನಿಯಮದ ಮುಖ್ಯ ಉದ್ದೇಶವಾಗಿದೆ ಎಂದು ಟ್ವಿಟರ್‌ನಿಂದ ಹೇಳಲಾಗಿದೆ. ಟ್ವಿಟರ್‌ನ ಈ ನಿಯಮ ಸಾಮಾನ್ಯ ನಾಗರಿಕರಿಗಾಗಿ ಇದೆ; ಆದರೆ ಹೆಸರಾಂತ ವ್ಯಕ್ತಿಗಳಿಗಾಗಿ ಇಲ್ಲ ಎಂದು ಹೇಳಿದೆ.

೧. ಟ್ವಿಟರ್ ಈ ಬಗ್ಗೆ ವಿಶ್ಲೇಷಿಸುತ್ತಾ, ಖಾಸಗಿ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡುವುದರಿಂದ ಯಾವುದಾದರೂ ವ್ಯಕ್ತಿಯ ಗೌಪ್ಯತೆ ಉಲ್ಲಂಘಿಸಿದಂತಾಗಬಹುದು. ಆದ್ದರಿಂದ ಭಾವನೆ ಮತ್ತು ಶಾರೀರಿಕ ನಷ್ಟ ಆಗಬಹುದು. ಈ ವಿಷಯದ ದುರುಪಯೋಗವಾಗುವುದರಿಂದ ಖಾಸಗಿ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ವಿಶೇಷವಾಗಿ ಮಹಿಳೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ತೊಂದರೆ ಆಗಬಹುದು, ಎಂದಿದೆ.

೨. ಟ್ವಿಟರ್ ಈ ಮೊದಲು ಖಾತೆದಾರರಿಗೆ ಇತರರ ವೈಯಕ್ತಿಕ ಮಾಹಿತಿ ಅಂದರೆ, ಅವರ ವಿಳಾಸ ಅಥವಾ ಸ್ಥಳ, ಗುರುತಿನ ಚೀಟಿಗಳು, ಆರ್ಥಿಕ ಮಾಹಿತಿ ಮತ್ತು ವೈದ್ಯಕೀಯ ಮಾಹಿತಿಯನ್ನು ‘ಶೇರ್’ ಮಾಡುವುದನ್ನು ನಿರ್ಬಂಧಿಸಿತ್ತು ಎಂದು ಹೇಳಿದೆ.