ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪನವರಿಂದ ‘ವೀರಸಾವರ್ಕರ ರಥಯಾತ್ರೆ’ಗೆ ಚಾಲನೆ

ರಥಯಾತ್ರೆಯ ಮೂಲಕ ಸ್ವಾತಂತ್ರ್ಯವೀರ ಸಾವರ್ಕರರವರ ದೇಶಭಕ್ತಿಯ ಪ್ರಚಾರ ಮಾಡುವರು !

ಬೆಂಗಳೂರು – ಭಾಜಪ ಮುಖಂಡ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯೆಡಿಯೂರಪ್ಪ ಇವರು ಅಗಸ್ಟ ೨೩ರಂದು ನಗರದ ಮೈಸೂರು ಪ್ಯಾಲೇಸ್‌ನ ಕೋಟೆ ಆಂಜನೇಯ ಮಂದಿರದಿಂದ ‘ವೀರ ಸಾವರ್ಕರ ರಥಯಾತ್ರೆ’ಗೆ ಚಾಲನೆ ನೀಡಿದರು. ಅವರು, “ಇಂತಹ ರಥಯಾತ್ರೆಯ ಮೂಲಕ ವೀರ ಸಾವರ್ಕರರಂತಹ ಜನರ ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿರುವ ಯೋಗದಾನ ಮತ್ತು ಬಲಿದಾನದ ವಿಷಯದಲ್ಲಿ ಜನರನ್ನು ಜಾಗೃತಗೊಳಿಸಲಾಗುವುದು.” ಈ ರಥಯಾತ್ರೆ ಅಗಸ್ಟ ೩೦ ವರೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೋಗಲಿದೆ.

ಯೆಡಿಯೂರಪ್ಪ ತಮ್ಮ ಮಾತನ್ನು ಮುಂದುವರಿಸಿ, ‘ಸ್ವಾತಂತ್ರ್ಯವೀರ ಸಾವರ್ಕರ ಸ್ವಾತಂತ್ರ್ಯ ಸೈನಿಕರಾಗಿರಲಿಲ್ಲ’, ಎಂದು ಬಿಂಬಿಸುವುದು ಸರಿಯಲ್ಲ. ಯಾರಿಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆ ತಿಳಿದಿಲ್ಲವೋ, ಅವರು ಈ ರೀತಿ ಹೇಳಿಕೆ ನೀಡುತ್ತಾರೆ. ವಿರೋಧಿ ಪಕ್ಷದ ಮುಖಂಡರಾಗಿರುವ ಸಿದ್ಧರಾಮಯ್ಯನವರು ಸಾವರ್ಕರರ ವಿಷಯದಲ್ಲಿ ತಪ್ಪಾಗಿ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಯೋಗ್ಯವಲ್ಲ. ಒಂದು ವೇಳೆ ಅವರು ಇಂತಹ ಹೇಳಿಕೆ ನೀಡುತ್ತಿದ್ದರೆ, ರಾಜ್ಯದ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ, ನಾವು ಜನರ ಮಧ್ಯೆ ಹೋಗಿ ಸ್ವಾತಂತ್ರ್ಯವೀರ ಸಾವರ್ಕರರ ದೇಶಭಕ್ತಿಯ ಶಾಂತಿಯುತವಾಗಿ ಪ್ರಸಾರ ಮಾಡುವವರಿದ್ದೇವೆ ಎಂದು ಹೇಳಿದರು.