ಹಿಂದೂ ಜನಜಾಗೃತಿ ಸಮಿತಿಯು ಪೊಲೀಸರಿಗೆ ನೀಡಿದ ಮನವಿಯ ನಂತರ ಚಿತ್ರವನ್ನು ತೆಗೆದುಹಾಕಿದ‘ಅಮೆಜಾನ್’ !

‘ಅಮೆಜಾನ್’ನಲ್ಲಿ ಭಗವಾನ್ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರಗಳ ಮಾರಾಟ

ಪೊಲೀಸರಿಗೆ ಮನವಿ ನೀಡುತತಿರುವ ಹಿಂದುತ್ವನಿಷ್ಠರು

ಬೆಂಗಳೂರು – ಆನ್‌ಲೈನ್ ಸಾಹಿತ್ಯ ಮಾರಾಟ ಸಂಸ್ಥೆ ‘ಅಮೆಜಾನ್’ ಈ ಹಿಂದುದ್ವೇಷಿ ಜಾಲತಾಣದಿಂದ ‘ಇಕೊಲಾಜಿ ಹಿಂದೂ ಗಾಡ್ಸ್ ಫೈನ್ ಆರ್ಟ್’ ಈ ಚಿತ್ರಗಳಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಭಗವಾನ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರವನ್ನು ಮಾರಾಟ ಮಾಡುತ್ತಿದೆ. ಇವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಮನವಿ ನೀಡಲಾಯಿತು. ಇದರಿಂದ ಅಮೆಜಾನ್ ಈ ಚಿತ್ರವನ್ನು ಮಾರಾಟದಿಂದ ತೆಗೆದುಹಾಕಿದೆ.

ಸಮಿತಿಯು ತನ್ನ ಬೇಡಿಕೆಯಲ್ಲಿ, ಕೋಟಿಗಟ್ಟಲೆ ಹಿಂದೂಗಳು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬೃಹತ್ಪ್ರಮಾಣದಲ್ಲಿ ಸಂಭ್ರಮದಿಂದ ಆಚರಿಸುತ್ತಿರುವಾಗ ಅಮೆಜಾನ್‌ನಿಂದ ಭಗವಾನ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೯೫, ೨೯೫ ಎ ಮತ್ತು ೨೯೮ ರ ಅಡಿಯಲ್ಲಿ ಇದು ಗಂಭೀರ ಅಪರಾಧವಾಗಿದೆ.

ಅಮೆಜಾನ್ ಈ ಹಿಂದೆಯೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧ ಮಾಡಿದೆ. ಈ ಮೂಲಕ ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಅಮೆಜಾನ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತಿದೆ. ಈ ವೇಳೆ ಶ್ರೀ. ನವೀನ ಗೌಡ, ಶ್ರೀ. ನೀಲೇಶ್ವರ, ಹಿಂದೂ ಮುಖಂಡರಾದ ಶ್ರೀ. ಪುರುಷೋತ್ತಮ, ಸುಭಾಷ್ ಮತ್ತಿತರರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ದೇವತೆಗಳ ವಿಡಂಬನೆಯ ವಿರುದ್ಧ ತತ್ಪರತೆಯಿಂದ ಕೃತಿ ಮಾಡಿದ ಹಿಂದೂ ಜನಜಾಗೃತಿ ಸಮಿತಿಗೆ ಅಭಿನಂದನೆಗಳು ! ಇತರ ಹಿಂದುತ್ವನಿಷ್ಠ ಸಂಘಟನೆಗಳು ಕೂಡ ಇದರಿಂದ ಪಾಠ ಕಲಿತು ದೇವರ ವಿಡಂಬನೆಯನ್ನು ತಡೆಯಬೇಕು !