‘ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ನಮಾಜಗಾಗಿ ಪ್ರತ್ಯೇಕ ಕೋಣೆ ನೀಡಿ !’ (ಅಂತೆ)

ಶಾಲೆಯಲ್ಲಿ ಶ್ರೀ ಗಣೇಶ ಚತುರ್ಥಿ ಆಚರಣೆಗೆ ವಿರೋಧಿಸುತ್ತಾ ‘ವಕ್ಫ ಬೋರ್ಡ್’ನ ಬೇಡಿಕೆ

ಬೆಂಗಳೂರು (ಕರ್ನಾಟಕ) – ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರು ರಾಜ್ಯದ ಶಾಲೆಗಳಲ್ಲಿ ಶ್ರೀ ಗಣೇಶ ಚತುರ್ಥಿ ಆಚರಣೆ ಮಾಡುವಂತೆ ಕರೆ ನೀಡಿದ್ದಾರೆ. ಇದಕ್ಕೆ ಮುಸಲ್ಮಾನ ಸಂಘಟನೆಗಳಿಂದ ವಿರೋಧಿಸಲಾಗುತ್ತಿದೆ. ಈಗ ‘ವಕ್ಫ ಬೋರ್ಡ್’ ಕೂಡ ವಿರೋಧಿಸುತ್ತಾ ಶೈಕ್ಷಣಿಕ ಸಂಸ್ಥೆಗಳಲ್ಲಿ ನಮಾಜಗಾಗಿ ಪ್ರತ್ಯೇಕ ಕೋಣೆ ಮತ್ತು ಮುಸಲ್ಮಾನರ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನೊಂದು ಕಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಪ್ರದೇಶಾಧ್ಯಕ್ಷ ಆತಾವುಲ್ಲ ಪುಂಜಾಲಕಟ್ಟೆ ಇವರು ಶಿಕ್ಷಣ ಸಚಿವ ಬಿ.ಎಸ್. ನಾಗೇಶರವರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಿಂದಲೂ ಶಾಲೆಯಲ್ಲಿ ಆಚರಿಸಲಾಗುತ್ತಿದೆ ಶ್ರೀ ಗಣೇಶೋತ್ಸವ ! – ಬಿ.ಸಿ. ನಾಗೇಶ

ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಇವರು ಒಂದು ಪತ್ರಿಕಾಗೋಷ್ಠಿಯಲ್ಲಿ, ಶ್ರೀ ಗಣೇಶ ಚತುರ್ಥಿ ಇದು ಧಾರ್ಮಿಕ ಕಾರ್ಯಕ್ರಮವವಲ್ಲ. ಈ ಹಬ್ಬ ಜನರನ್ನು ಸಂಘಟಿತಗೊಳಿಸುತ್ತದೆ. ಸ್ವಾತಂತ್ರ್ಯದ ಮೊದಲಿನಿಂದಲೂ ಶಾಲೆಗಳಲ್ಲಿ ಶ್ರೀ ಗಣೇಶೋತ್ಸವ ಆಚರಿಸಲಾಗುತ್ತಿತ್ತು. ಇದು ಆ ಸಮಯದ ಸ್ವಾತಂತ್ರ್ಯ ಆಂದೋಲನದ ಒಂದು ಶಸ್ತ್ರವಾಗಿತ್ತು. ಲೋಕಮಾನ್ಯ ತಿಲಕರ ಕರೆಯ ನಂತರ ಶಾಲೆ, ವಸತಿಗೃಹಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶ್ರೀ ಗಣೇಶೋತ್ಸವ ಆಚರಣೆ ಪ್ರಾರಂಭವಾಯಿತು. ಆದ್ದರಿಂದ ನಾವು ಹೊಸದೆಂದು ಅದಕ್ಕೆ ಅನುಮತಿ ನೀಡಿದ್ದೇವೆ ಎಂದೇನೂ ಇಲ್ಲ. ಈ ಹಬ್ಬ ಪರಂಪರೆಯ ಪ್ರಕಾರ ನಡೆಯುತ್ತಿದೆ; ಆದರೆ ಇದರಿಂದ ಶಾಲೆಗಳಲ್ಲಿ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ, ಎಂದು ನಾಗೇಶ ಅವರು ಸ್ಪಷ್ಟಪಡಿಸಿದರು.

ಬಿ.ಸಿ. ನಾಗೇಶ ಇವರ ಹೇಳಿಕೆಯ ಬಗ್ಗೆ ಮುಸಲ್ಮಾನ ಸಂಘಟನೆಗಳು ಅದನ್ನು ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚುವ ವಸ್ತ್ರ) ಜೊತೆ ಜೋಡಿಸಲು ಪ್ರಯತ್ನಿಸುತ್ತಿದೆ. ‘ಹಿಜಾಬ್ ನಿಷೇಧ’, ಹಾಗಾದರೆ ಶ್ರೀ ಗಣೇಶ ಚತುರ್ಥಿಗೆ ಅನುಮತಿ ಏಕೆ ?’, ಎಂಬ ಪ್ರಶ್ನೆ ಕೇಳಲಾಗುತ್ತಿದೆ.

ನಮಾಜ್‌ಗೆ ಕೋಣೆ ನೀಡಲು ಶ್ರೀರಾಮ ಸೇನೆಯಿಂದ ವಿರೋಧ

ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರು, ಇಂದು ‘ವಕ್ಫ ಬೋರ್ಡ್’ ಶಾಲೆಗಳಲ್ಲಿ ನಮಾಜಗಾಗಿ ಒತ್ತಾಯಿಸುತ್ತಿದ್ದಾರೆ, ನಾಳೆ ಅವರು ಶುಕ್ರವಾರದ ರಜೆಗೆ ಒತ್ತಾಯಿಸಬಹುದು. ಆದ್ದರಿಂದ ಸರಕಾರವು ಶಾಲೆಗಳಿಗೆ ಇಸ್ಲಾಮಿಕರಣ ಮಾಡಲು ಅನುಮತಿ ನೀಡಬಾರದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ಸ್ವಾತಂತ್ರ್ಯದ ನಂತರ ಇಲ್ಲಿಯವರೆಗಿನ ಸರಕಾರಗಳು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದರ ಪರಿಣಾಮವಾಗಿದೆ !