ಶಬ್ದ ಮಾಲೀನ್ಯ ನಿಯಮಗಳ ಪಾಲನೆ ಮಾಡಲು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಧ್ವನಿವರ್ಧಕದಿಂದ ಅಜಾನ ನೀಡುವ ಪ್ರಕರಣ !

ಬೆಂಗಳೂರು – ಧ್ವನಿವರ್ಧಕದಿಂದ ಅಜಾನ ನೀಡುವುದರಿಂದ ಬೇರೆ ಧರ್ಮದವರ ಮೂಲಭೂತ ಅಧಿಕಾರದ ಉಲ್ಲಂಘನೆ ಆಗುತ್ತಿಲ್ಲವೇ, ಎಂದು ಹೇಳುತ್ತಾ ಕರ್ನಾಟಕ ಉಚ್ಚ ನ್ಯಾಯಾಲಯವು ಮಸೀದಿಗಳಿಗೆ ಧ್ವನಿವರ್ಧಕದಿಂದ ಅಜಾನ ನಿಲ್ಲಿಸುವಂತೆ ಆದೇಶ ನೀಡಲು ನಿರಾಕರಿಸಿದೆ; ಆದರೆ ನ್ಯಾಯಾಲಯವು ಅಧಿಕಾರಿಗಳಿಗೆ ಧ್ವನಿವರ್ಧಕದ ಶಬ್ದ ಮಾಲೀನ್ಯಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಕ್ರಮ ಕೈಗೊಂಡು ಅದರ ವರದಿ ಮಂಡಿಸಲು ಆದೇಶಿಸಿದೆ.

ಬೆಂಗಳೂರಿನ ನಿವಾಸಿ ಮಂಜುನಾಥ ಎಸ್. ಹಲಾವರ ಇವರು ದಾಖಲಿಸಿರುವ ಅರ್ಜಿಯ ಕುರಿತು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ‘ಅಜಾನ ನೀಡುವುದು ಇದು ಮುಸಲ್ಮಾನರ ಒಂದು ಅವಶ್ಯಕ ಧಾರ್ಮಿಕ ಪದ್ಧತಿ ಇದ್ದರೂ, ಅದು ಅಜಾನನ ಧ್ವನಿಯಿಂದ ಬೇರೆ ಧರ್ಮದವರಿಗೆ ತೊಂದರೆ ಆಗುತ್ತದೆ’, ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ನ್ಯಾಯಾಲಯವು ತನ್ನ ಆದೇಶದಲ್ಲಿ, ‘ಭಾರತೀಯ ಸಂವಿಧಾನದ ಕಲಂ ೨೫ ಮತ್ತು ೨೬ ಇವು ಸಹಿಷ್ಣತೆಯ ತತ್ವದ ಮೂರ್ತರೂಪವಾಗಿದೆ, ಅದು ಭಾರತೀಯ ಸಭ್ಯತೆಯ ವೈಶಿಷ್ಟವಾಗಿದೆ. ಸಂವಿಧಾನದ ಕಲಂ ೨೫(೧) ರಲ್ಲಿ ಜನರಿಗೆ ಅವರ ಧರ್ಮ ಸ್ವೀಕರಿಸಲು ಮತ್ತು ಪ್ರಚಾರ ಮಾಡುವ ಮೂಲಭೂತ ಅಧಿಕಾರ ನೀಡಲಾಗಿದೆ; ಆದರೆ ಮೇಲಿನ ಅಧಿಕಾರ ಇದು ಪೂರ್ಣ ಅಧಿಕಾರ ಅಲ್ಲದೆ ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಈ ವಿಷಯವಾಗಿ ಭಾರತೀಯ ಸಂವಿಧಾನದ ಭಾಗ ೩ ರಲ್ಲಿ ಬೇರೆ ನಿಬಂಧನೆಗಳ ಪ್ರಕಾರ ನಿರ್ಬಂಧದ ಅಧೀನವಾಗಿದೆ.’ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇಂತಹ ಆದೇಶ ನ್ಯಾಯಾಲಯಕ್ಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಮತ್ತು ಪೊಲೀಸ ಇಲಾಖೆ ನಿದ್ರಿಸುತ್ತಿದೆಯೇ ?