ಕರ್ನಾಟಕದ ಮದರಸಾಗಳ ಮೇಲೆ ನಿಗಾ ಇಡಲು ರಾಜ್ಯ ಸರಕಾರ ಸ್ವತಂತ್ರ ಸಮಿತಿ ಸ್ಥಾಪಿಸಲಿದೆ

ಬೆಂಗಳೂರು – ಕರ್ನಾಟಕದ ಭಾಜಪ ಸರಕಾರ ರಾಜ್ಯದ ಮದರಸಾಗಳ ಮೇಲೆ ನಿಗಾ ವಹಿಸಲು ಒಂದು ಸಮಿತಿ ಸ್ಥಾಪಿಸುವ ಸಿದ್ಧತೆಯಲ್ಲಿದೆ. ಕಳೆದ ವಾರದಲ್ಲಿ ಸರಕಾರ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯವೆಂದು ಆದೇಶ ನೀಡಿತ್ತು. ಇದರಲ್ಲಿ ಮದರಸಗಳ ಸಮಾವೇಶ ಇರಲಿಲ್ಲ. ಅವುಗಳಿಗೂ ಸಹ ಈ ವ್ಯಾಪ್ತಿಯಲ್ಲಿ ತರಲು ಒಂದು ಸಮಿತಿ ಸ್ಥಾಪಿಸುವ ಬಗ್ಗೆ ಸರಕಾರ ವಿಚಾರ ಮಾಡುತ್ತಿದೆ. ಕರ್ನಾಟಕ ವಕ್ಫ ಬೋರ್ಡ್ ಬಳಿ ೯೦೦ ಮದರಸಾಗಳ ನೋಂದಣಿ ಇದೆ. ಪ್ರತಿಯೊಂದು ಮದರಸಾಗೆ ವಕ್ಫ ಬೋರ್ಡ್ ನಿಂದ ವರ್ಷಕ್ಕೆ ೧೦ ಲಕ್ಷ ರೂಪಾಯ ನೀಡುತ್ತದೆ.