ಸ್ವಾತಂತ್ರ್ಯವೀರ ಸಾವರ್ಕರ ಇವರ ಭಿತ್ತಿಪತ್ರಕ್ಕೆ ಮುಟ್ಟಿದರೆ ಕೈ ಕತ್ತರಿಸಿ ಬಿಡುವೆವು ! – ಶ್ರೀರಾಮ ಸೇನೆಯ ಎಚ್ಚರಿಕೆ

ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ

ಶ್ರೀರಾಮ ಸೇನೆಯ ಪ್ರಮುಖ ಶ್ರೀ. ಪ್ರಮೋದ ಮುತಾಲಿಕ

ಬೆಳಗಾವಿ – ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕದ ಕುರಿತು ವಿವಾದ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಈ ಫಲಕಗಳಿಗೆ ವಿರೋಧಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಶಿವಮೊಗ್ಗದ ಭಾಜಪದ ಶಾಸಕ ಕೆ.ಎಸ್. ಈಶ್ವರಪ್ಪ ಇವರು ಮುಸಲ್ಮಾನ ಯುವಕರಿಗೆ ನಿಯಂತ್ರಣದಲ್ಲಿ ಇರುವ ಕರೆ ನೀಡಿದ್ದರು.

ಈಗ ಶ್ರೀರಾಮ ಸೇನೆಯ ಪ್ರಮುಖ ಶ್ರೀ. ಪ್ರಮೋದ ಮುತಾಲಿಕ ಇವರು ‘ಸಂಪೂರ್ಣ ರಾಜ್ಯದಲ್ಲಿ ವೀರ ಸಾವರ್ಕರ ಮತ್ತು ಬಾಲಗಂಗಾಧರ ತಿಲಕ ಇವರ ೧೫ ಸಾವಿರ ಭಿತ್ತಿಪತ್ರಗಳು ಹಚ್ಚಲಾಗುವುದೆಂದು ಹೇಳಿದ್ದಾರೆ. ಸ್ವಾತಂತ್ರ್ಯವೀರ ಸಾವರ್ಕರ ಇವರು ಮುಸಲ್ಮಾನರ ವಿರೋಧಿ ಅಲ್ಲ ಅವರು ಬ್ರಿಟಿಷರ ವಿರೋಧಿ ಇದ್ದರು. ಅವರು ಸ್ವಾತಂತ್ರ್ಯ ಹೋರಾಟದ ಸೇನಾನಿ ಆಗಿದ್ದರು. ಮುಸಲ್ಮಾನ ಅಥವಾ ಕಾಂಗ್ರೆಸ್‌ನವರು ಸಾವರ್ಕರರ ಭಿತ್ತಿಪತ್ರಗಳಿಗೆ ಮುಟ್ಟಿದರೆ ಅವರ ಕೈ ಕತ್ತರಿಸುವೆವು’, ಎಂಬ ಎಚ್ಚರಿಕೆ ನೀಡಿದ್ದಾರೆ.