ಪಾಕಿಸ್ತಾನಕ್ಕಾಗಿ ಬೇಹುಗರಿಕೆ ಮಾಡುತ್ತಿದ್ದ ಪೊಲೀಸ್ ಪೇದೆಯ ಬಂಧನ

ಸೈನ್ಯದಿಂದ ನಿವೃತ್ತನಾದ ನಂತರ ಪೊಲೀಸ್ ದಳದಲ್ಲಿ ಭರ್ತಿಯಾದ ಸುರೇಂದ್ರ ಎಂಬ ಪೊಲೀಸ್ ಪೇದೆಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆತ ಪಲವಲನಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನೇಮಕಗೊಂಡಿದ್ದ.

ಸಂಚಾರ ನಿಷೇಧದಿಂದ ಮುಚ್ಚಲ್ಪಟ್ಟಿರುವ ಸಿರಸಾ (ಹರಿಯಾಣಾ) ದ ‘ರೈಸ್ ಮಿಲ್’ಗೆ ವಿದ್ಯುತ್ ಇಲಾಖೆಯು ೯೦ ಕೋಟಿ ರೂಪಾಯಿ ವಿದ್ಯುತ್ ಬಿಲ್ ನೀಡಿದೆ !

ಸಂಚಾರ ನಿಷೇಧದಿಂದ ಮುಚ್ಚಿದ್ದ ಸಿರಸಾದ ಕಲಾಂವಲಿ ಪ್ರದೇಶದ ‘ಗಣೇಶ ರೈಸ್ ಮಿಲ್’ಗೆ ವಿದ್ಯುತ್ ವಿತರಣಾ ಇಲಾಖೆ ೯೦ ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಕಳುಹಿಸಿದೆ. ಇದು ತಾಂತ್ರಿಕ ದೋಷದಿಂದಾಯಿತು ಎಂದು ವಿದ್ಯುತ್ ವಿತರಣಾ ಇಲಾಖೆಯು ಒಪ್ಪಿಕೊಂಡಿದೆ.

ರೆವಾರಿ(ಹರಿಯಾಣ) ದಲ್ಲಿ ೧೦ ವರ್ಷದ ಬಾಲಕಿಯ ಮೇಲೆ ೭ ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ಮಕ್ಕಳ ಕೈಯಲ್ಲಿ ಸ್ಮಾರ್ಟ್‍ಫೋನ್ ಬಂದಾಗಿನಿಂದ, ಅದನ್ನು ಅನೈತಿಕ ವಿಷಯಗಳಿಗೆ ಎಷ್ಟು ಬಳಸಲಾಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರಿಗೆ ಸರಿಯಾದ ಸಂಸ್ಕಾರವನ್ನು ನೀಡಲು ವೈಫಲ್ಯ ಉಂಟಾದುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಧರ್ಮಶಿಕ್ಷಣವು ಎಷ್ಟು ಅಗತ್ಯವಾಗಿದೆ ಎಂದು ಸ್ಪಷ್ಟವಾಗುತ್ತದೆ !

ತನ್ನ ಸಹೋದರನಿಗೆ ಆಮ್ಲಜನಕದ ಸಿಲಿಂಡರ್ ಸಿಗಲಿಲ್ಲವೆಂದು ಮಂತ್ರಿಗಳಿಗೆ ಬೆದರಿಕೆ ಹಾಕಿದ ಸೈನಿಕನ ವಿರುದ್ಧ ಅಪರಾಧ ದಾಖಲು

ಕೊರೊನಾ ಪೀಡಿತ ತನ್ನ ತಮ್ಮನಿಗೆ ಆಮ್ಲಜನಕದ ಸಿಲಿಂಡರ್ ಸಿಗಲಿಲ್ಲ ಎಂದು ಓರ್ವ ಸೈನಿಕನು ಗುರುಗ್ರಾಮದ ಸಂಸದ ಮತ್ತು ಕೇಂದ್ರ ಸಚಿವ ಇಂದ್ರಜಿತ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದನು, ಆದ್ದರಿಂದ ಆ ಸೈನಿಕನ ವಿರುದ್ಧ ರಾಮಪುರಾ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ರಾತ್ರಿಯಿಡೀ ಆಮ್ಲಜನಕ ವಾಹನವನ್ನು ತಡೆ ಹಿಡಿದು ನಿಲ್ಲಿಸಿದುದೇ ಕೊರೋನಾ ರೋಗಿಯ ಮರಣವಾಗಿದೆ ಎಂದು ಹೇಳಿಕೆ.

ಪೊಲೀಸರು ಇಲ್ಲಿ ರಾತ್ರಿಯಿಡೀ ಆಮ್ಲಜನಕವನ್ನು ಸಾಗಿಸುವ ವಾಹನವನ್ನು ನಿಲ್ಲಿಸಿದ್ದರಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಜಿಂದ(ಹರಿಯಾಣಾ) ಇಲ್ಲಿಯ ಸರಕಾರಿ ಆಸ್ಪತ್ರೆಯಿಂದ ೧ ಸಾವಿರದ ೭೦೦ ಕೊರೋನಾ ಲಸಿಕೆಯ ಡೋಸ ಕಳ್ಳತನ !

ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಒಟ್ಟು ೧ ಸಾವಿರದ ೭೧೦ ಡೋಸ್ ಕಳ್ಳತನವಾಗಿದೆ. ಇವುಗಳಲ್ಲಿ ೧ ಸಾವಿರದ ೨೭೦ ಕೊವಿಶಿಲ್ಡ್ ಹಾಗೂ ೪೪೦ ಕೊವ್ಯಾಕ್ಸಿನ್‌ನ ಒಳಗೊಂಡಿವೆ.