ಶ್ರೀ ದುರ್ಗಾದೇವಿಯನ್ನು ಅವಮಾನಿಸುವ ಜಾಹೀರಾತನ್ನು ತೆಗೆದುಹಾಕಿದ ‘ಸ್ಯಾಟೋ ಟಾಯಲೆಟ್ಸ ಏಶಿಯಾ’ ಸಂಸ್ಥೆ !

ಹಿಂದೂ ಜನಜಾಗೃತಿ ಸಮಿತಿ ಹಾಗೂ ಧರ್ಮಾಭಿಮಾನಿ ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ

ಹಿಂದೂಗಳೇ, ಈ ವಿಷಯದ ಬಗ್ಗೆ ಭಗವಂತನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಪಡಿಸಿರಿ ! ಹಿಂದೂ ಧರ್ಮಕ್ಕಾಗುತ್ತಿರುವ ಪ್ರತಿಯೊಂದು ರೀತಿಯ ಅವಮಾನವನ್ನು ವಿರೋಧಿಸುವಾಗ ಕಾನೂನು ಬದ್ಧ ಮಾರ್ಗದಿಂದ ಆಂದೋಲನ ನಡೆಸುವುದು, ನಮ್ಮ ಧರ್ಮಕರ್ತವ್ಯವಾಗಿದೆ; ಅದನ್ನು ನಿಭಾಯಿಸಿದರೆ ನಮ್ಮ ಸಾಧನೆಯಾಗುವುದು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಈ  ಚಿತ್ರವನ್ನು ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ

ಗುರುಗ್ರಾಮ (ಹರಿಯಾಣಾ) – ಇಲ್ಲಿನ ‘ಸ್ಯಾಟೋ ಟಾಯಲೆಟ್‌ಸ ಏಶಿಯಾ’ (SATO Toilets Asia) ಎಂಬ ಹೆಸರಿನ ಸಂಸ್ಥೆಯು ಸ್ಯಾನಿಟರಿ ವಸ್ತುಗಳ (ಆರೋಗ್ಯವನ್ನು ಚೆನ್ನಾಗಿಡುವ ಬಗ್ಗೆ ಉಪಯುಕ್ತ ವಸ್ತುಗಳ) ಉತ್ಪಾದನೆಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಅದರಲ್ಲಿ ಸಾಬೂನು, ಸ್ಯಾನಿಟಾಯಝರ, ಹ್ಯಾಂಡ ವಾಶ ಇತ್ಯಾದಿಗಳ ಸಮಾವೇಶವಿದೆ. ಇದರ ಪ್ರಸಾರಕ್ಕಾಗಿ ಕಂಪನಿಯು ಒಂದು ಜಾಹೀರಾತನ್ನು ತಯಾರಿಸಿ ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಈ ಜಾಹೀರಾತಿನಲ್ಲಿ ಶ್ರಿ ದುರ್ಗಾದೇವಿಯನ್ನು ತೋರಿಸಲಾಗಿದೆ ಅವಳ ಕೈಯಲ್ಲಿ ಅವಳ ಕೈಯಲ್ಲಿ ಸಾಬೂನು, ಸ್ಯಾನಿಟಾಐಝರ ಇತ್ಯಾದಿ ವಸ್ತುಗಳನ್ನು ತೋರಿಸಲಾಗಿದೆ. ‘ಶ್ರೀ ದುರ್ಗಾದೇವಿಯು ಶಸ್ತ್ರಾಸ್ತ್ರಗಳ ಮೂಲಕ ದುಷ್ಟರ ನಾಶ ಮಾಡುತ್ತಾಳೆ, ಅದೇ ರೀತಿ ಉತ್ಪಾದನೆಗಳ ಮೂಲಕ ಕೀಟಾಣುಗಳನ್ನು ನಾಶ ಮಾಡುತ್ತಾಳೆ’, ಎಂಬ ಸಂದೇಶವನ್ನು ಆ ಜಾಹೀರತಿನ ಮೂಲಕ ನೀಡಲಾಗಿತ್ತು. ಆ ಜಾಹೀರಾತಿನ ಮಾಹಿತಿಯು ಹಿಂದುತ್ವನಿಷ್ಠರಿಗೆ ತಿಳಿದ ತಕ್ಷಣ ಅವರು ಹಿಂದೂ ಜನಜಾಗೃತಿ ಸಮಿತಿಗೆ ಈ ವಿಷಯವಾಗಿ ಹೇಳಿದರು. ಸಮಿತಿಯು ಸಾಮಾಜಿಕ ಮಾದ್ಯಮಗಳ ಮೂಲಕ ಜಾಗೃತಿ ಮೂಡಿಸುವ ಪೋಸ್ಟಗಳನ್ನು ಪ್ರಸಾರ ಮಾಡುತ್ತಾ ಆ ಜಾಹೀರಾತುಗಳನ್ನು ಕಾನೂನುಬದ್ಧ ಮಾರ್ಗದಲ್ಲಿ ವಿರೋಧಿಸಲು ಕರೆ ನೀಡಿತ್ತು. ಧರ್ಮಾಭಿಮಾನಿಗಳು ವಿರೋಧಿಸಿದ ಬಳಿಕ ಕೆಲವು ಗಂಟೆಗಳ ನಂತರ ಸಂಸ್ಥೆಯು ಆ ಜಾಹೀರಾತನ್ನು ತೆಗೆದು ಹಾಕಿತು.