ಗುರುಗ್ರಾಮ (ಹರಿಯಾಣ) ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪೊಲೀಸರ ಅನುಮತಿ

ಸಾಮಾಜಿಕ ಮಾಧ್ಯಮಗಳಿಂದ ಟೀಕೆ

ವಿರೋಧಿಸಿದ ಹಿಂದೂಗಳೊಂದಿಗೆ ಒಪ್ಪಂದ ಮಾಡಿಸಿ ನಮಾಜ ಪಠಣಕ್ಕೆ ಅನುಮತಿ

* ಸಾರ್ವಜನಿಕ ಸ್ಥಳದಲ್ಲಿ ಯಾವುದೇ ವಿಷಯವನ್ನು ಮಾಡುವ ಮೊದಲು ಆಡಳಿತದ ಅನುಮತಿ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಒಂದು ವೇಳೆ ಪ್ರತಿ ಶುಕ್ರವಾರ ನಮಾಜಪಠಣಕ್ಕಾಗಿ ಅನುಮತಿ ಪಡೆದುಕೊಂಡಿದ್ದಲ್ಲಿ ಹಿಂದೂಗಳೂ ತಮಗೂ ಪ್ರತೀ ದಿನ ವಿವಿಧ ದೇವತೆಗಳ ಪೂಜೆ ಮಾಡಲು ಹಾಗೂ ಸ್ತೋತ್ರ ಪಠಿಸಲು ಅನುಮತಿ ಕೇಳಿದರೆ ಅದು ತಪ್ಪಾಗಬಾರದು ! -ಸಂಪಾದಕರು 

* ‘ಕೆಲವು ಮುಸಲ್ಮಾನರು ಮೊದಲು ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪ್ರಾರಂಭಿಸುತ್ತಾರೆ ಹಾಗೂ ನಿಧಾನವಾಗಿ ಆ ಸ್ಥಳದ ಮೇಲೆ ನಿಯಂತ್ರಣ ಪಡೆದುಕೊಂಡು ಅಲ್ಲಿ ಅಕ್ರಮವಾಗಿ ಮಸೀದಿಯನ್ನೋ ಅಥವಾ ದರ್ಗಾ ಕಟ್ಟುತ್ತಾರೆ’, ಎಂಬುದು ದೇಶದ ಎಲ್ಲೆಡೆಗಳಲ್ಲಿನ ಅನುಭವವಾಗಿದೆ. ಆದರೂ ಈ ರೀತಿ ಅನುಮತಿ ನೀಡುವುದು, ಭಾಜಪ ಸರಕಾರವಿರುವ ರಾಜ್ಯದಲ್ಲಿ ಅಪೇಕ್ಷಿತವಲ್ಲ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು 

* ಕೊರೊನಾದ ಕಾರಣವನ್ನು ಮುಂದಿರಿಸಿ ಹಿಂದೂಗಳಿಗೆ ಶ್ರೀಗಣೇಶಚತುರ್ಥೀ, ಕಾವಡ ಯಾತ್ರೆ, ಶ್ರೀಕೃಷ್ಣಜನ್ಮಾಷ್ಟಮಿ, ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳನ್ನು ಆಚರಿಸಲು ನಿರ್ಬಂಧ ಹೇರುವ ಸರಕಾರೀ ವ್ಯವಸ್ಥೆಯು ಮುಸಲ್ಮಾನರಿಗೆ ಮಾತ್ರ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಅನುಮತಿ ನೀಡುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು 

ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸುತ್ತಿರುವ ಮುಸಲ್ಮಾನರು

ಗುರುಗ್ರಾಮ (ಹರಿಯಾಣ) – ಇಲ್ಲಿ ಕೆಲವು ದಿನಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲಾಗುತ್ತಿತ್ತು. ಅದಕ್ಕೆ ಹಿಂದೂಗಳು ವಿರೋಧಿಸಿದ ಬಳಿಕ ಹಿಂದೂ ಹಾಗೂ ಮುಸಲ್ಮಾನರ ನಡುವೆ ಒಪ್ಪಂದವಾಗಿ ನಮಾಜಪಠಣಕ್ಕೆ ಅನುಮತಿ ನೀಡಲಾಯಿತು. ಈ ವಿಷಯವಾಗಿ ಗುರುಗ್ರಾಮ ಪೊಲೀಸರು ಟ್ವಿಟ್ ಮಾಡಿ ‘ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸುವ ವಿಷಯವಾಗಿ ಹಿಂದೂ ಹಾಗೂ ಮುಸಲ್ಮಾನರ ನಡುವೆ ಚರ್ಚೆ ನಡೆಸಿ ನಮಾಜ ಪಠಿಸಲು ಅನುಮತಿ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಧಾರ್ಮಿಕ ಸದ್ಭಾವನೆ ಹಾಗೂ ಶಾಂತಿಯನ್ನು ಪಾಲಿಸುವುದು ನಮ್ಮ ಹೊಣೆಯಾಗಿದೆ” ಎಂದು ಹೇಳಿದರು. (ಹಿಂದೂಬಹುಸಂಖ್ಯಾತ ದೇಶದಲ್ಲಿ ಅಲ್ಪಸಂಖ್ಯಾತರ ಕೃತಿಯಿಂದ ಉದ್ವಿಗ್ನವಾಗುವ ವಾತಾವರಣವನ್ನು ಶಾಂತ ಹಾಗೂ ಸೌಹಾರ್ದವಾಗಿಸಲು ಯಾವಾಗಲೂ ಹಿಂದೂಗಳೇ ಹಿಂದೆ ಸರಿಯಬೇಕಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು)

ಈ ಟ್ವಿಟ್‍ಗೆ ಸಾಮಾಜಿಕ ಮಾಧ್ಯಮಗಳ ಪೊಲೀಸರ ಮೇಲೆ ಟೀಕೆಯಾಗುತ್ತಿದೆ. ‘ಜನರಿಂದ ವಿರೋಧವಿರುವಾಗ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸುವುದು ಸರಿಯೆಂದು ಪೊಲೀಸರು ಹೇಗೆ ನಿರ್ಧರಿಸಬಹುದು?’ ಎಂಬ ಪ್ರಶ್ನೆಯನ್ನು ವಿಚಾರಿಸಲಾಗುತ್ತಿದೆ. ಕೆಲವರು ಇದರ ಬಗ್ಗೆ ವಿರೋಧಿಸುವಾಗ ಮಸೀದಿಯಲ್ಲಿ ನಮಾಜ ಪಠಿಸುವುದು ಸಾಧ್ಯವಿಲ್ಲವೇ? ಒಪ್ಪಂದ ಮಾಡಿಕೊಂಡು ಸಾರ್ವಜನಿಕ ಸ್ಥಳವನ್ನು ಅತಿಕ್ರಮಣ ಮಾಡುವುದು ಸರಿಯೇ? ಒಂದು ವೇಳೆಯೇನಾದರೂ ಆಡಳಿತವು ಈ ರೀತಿಯ ಅನುಮತಿ ನೀಡುತ್ತದೆ ಎಂದಾದಲ್ಲಿ, ನಾಳೆ ಹನುಮಾನ ಚಾಲೀಸಾ ಹಾಗೂ ಪೂಜೆ ಮಾಡಲು ಪ್ರಾರಂಭಿಸಬೇಕು. ಇಸ್ಲಾಮೀ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಣವನ್ನು ಅಯೋಗ್ಯವೆಂದು ಪರಿಗಣಿಸಲಾಗಿದೆ. ‘ಜೊತೆಗೆ ಯಾವ ಹಿಂದೂಗಳು ಒಪ್ಪಂದ ಮಾಡಿಕೊಂಡರೋ, ಅವರು ಇತರ ಎಲ್ಲ ಹಿಂದೂಗಳೊಂದಿಗೆ ಚರ್ಚೆ ಮಾಡಿದ್ದರೇನು?’, ಎಂಬ ಅನೇಕ ಪ್ರಶ್ನೆಗಳನ್ನು ಮಂಡಿಸಲಾಗುತ್ತಿದೆ.