ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ರವಿಕುಮಾರ ದಾಹಿಯಾ ಇವರಿಂದ ಭಗವಾನ ಶಿವನಿಗೆ ಜಲ ಅಭಿಷೇಕ ಮತ್ತು ರುದ್ರಾಭಿಷೇಕ !

ಭಾರತದಲ್ಲಿ ಎಷ್ಟು ಹಿಂದೂ ಕ್ರೀಡಾಪಟುಗಳು ಈಶ್ವರನ ಭಕ್ತಿ ಮಾಡುತ್ತಾರೆ ? ಅಥವಾ ವಿಜಯದ ನಂತರ ಅವರು ದೇವರ ಚರಣಗಳಲ್ಲಿ ಶರಣಾಗತರಾಗುತ್ತಾರೆ ?

ಕುಸ್ತಿಪಟು ರವಿಕುಮಾರ್ ದಾಹಿಯಾ

ಸೋನಿಪತ (ಹರಿಯಾಣ) – ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ ದಾಹಿಯಾ ತನ್ನ ಊರಿಗೆ ಮರಳಿದ್ದಾರೆ. ದಾಹಿಯಾ ಅವರಿಗೆ ಶಿವನ ಮೇಲೆ ಅಪಾರ ಶ್ರದ್ಧೆಯಿದೆ. ಒಲಿಂಪಿಕ್ಸ್ ಸ್ಪರ್ಧೆಗಾಗಿ ಟೋಕಿಯೊಗೆ ತೆರಳುವ ಮೊದಲು, ದಾಹಿಯಾ ಅವರು ಶಿವನಲ್ಲಿ “ಒಲಿಂಪಿಕ್ಸ್‌ನಲ್ಲಿ ಪದಕ ಸಿಗಬೇಕು” ಎಂದು ಹರಕೆ ಹೊತ್ತಿದ್ದರು. ಅದರಂತೆ, ಅವರು ಪದಕವನ್ನು ಪಡೆದರು. ಈ ಸಂದರ್ಭದಲ್ಲಿ, ಅವರು ತಮ್ಮ ಕುಟುಂಬದವರೊಂದಿಗೆ ಹರಿದ್ವಾರಕ್ಕೆ ಹೋಗಿ ಶಿವನಿಗೆ ಗಂಗಾಜಲದಿಂದ ಜಲಾಭಿಷೇಕ ಮತ್ತು ರುದ್ರಾಭಿಷೇಕ ಮಾಡಿ ಸಂಕಲ್ಪವನ್ನು ಪೂರ್ಣ ಗೊಳಿಸಿದರು.

ರವಿಕುಮಾರ ದಾಹಿಯಾ ಅವರ ಕುಟುಂಬಕ್ಕೆ ಶಿವ ಮತ್ತು ಆಂಜನೇಯ ಇವರ ಮೇಲೆ ಅಪಾರ ಶ್ರದ್ಧೆಯಿದೆ. ದಾಹಿಯಾ ಒಲಿಂಪಿಕ್ಸ್‌ಗೆ ಹೋದಾಗ, ಕುಟುಂಬವು ಅವರ ವಿಜಯಕ್ಕಾಗಿ ಸಂಕಲ್ಪ ಮಾಡಿ ಅಖಂಡ ಜ್ಯೋತಿಯನ್ನು ಬೆಳಗಿಸಿತ್ತು. “ಮುಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಿಗಬೇಕು” ಎಂದು ರವಿಯವರು ಶಿವನಲ್ಲಿ ಹರಕೆ ಕೇಳಿಕೊಂಡಿದ್ದಾರೆ ಎಂದು ದಾಹಿಯಾ ಅವರ ಸಹೋದರ ಪಂಕಜ್ ಹೇಳಿದ್ದಾರೆ. ರವಿಕುಮಾರರು ದಾಹಿಯಾ ಶಿವನ ದರ್ಶನ ಪಡೆದು ಶಿವನಿಗೆ ಜಲಾಭಿಷೇಕ ಮತ್ತು ರುದ್ರಾಭಿಷೇಕ ಮಾಡುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿವೆ.