|
|
ಮೇವಾತ (ಹರಿಯಾಣ) – ರಾಜ್ಯದಲ್ಲಿ ಮತಾಂಧರಿಂದ ಆಯೋಜನಾಬದ್ಧವಾಗಿ ಬಡ ಹಿಂದುಗಳ ಮತಾಂತರವಾಗುತ್ತಿರುವ ಘಟನೆಯು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹರಿಯಾಣ ರಾಜ್ಯದಲ್ಲಿನ ಮೇವಾತ ಜಿಲ್ಲೆಯಲ್ಲಿರುವ ಬರೋಟನಲ್ಲಿ ಮೌಲಾನರು ಹಣದ ಆಮಿಷ ಒಡ್ಡಿ ಮನೋಜ್ ಕುಮಾರ ಎಂಬ ಹೆಸರಿನ ಓರ್ವ ಹಿಂದೂ ಯುವಕನನ್ನು ಮತಾಂತರಿಸಿದ್ದಾರೆ. ಅನಂತರ ಇಬ್ಬರು ಮೌಲಾನಾ ಸಹಿತ 4 ಮತಾಂಧರು ಅವನು ಗೋಮಾಂಸ ತಿನ್ನುತ್ತಿಲ್ಲ ಎಂಬುದನ್ನು ನೋಡಿ ಅವನನ್ನು ಥಳಿಸಿದರು. ಹಾಗೆಯೇ ಹಿಂದೂ ದೇವತೆಗಳ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ‘ಮೂರ್ತಿ ಪೂಜೆಯಲ್ಲಿ ಶಕ್ತಿ ಇಲ್ಲ’ ಎಂಬ ಹೇಳಿಕೆ ನೀಡಿದರು. ಈ ನಾಲ್ಕು ಜನರ ವಿರುದ್ಧ ದೂರನ್ನು ನೋಂದಾಯಿಸಲಾಗಿದೆ. ಪೊಲೀಸರು ಇವರಲ್ಲಿ ಅಬೂ ಬಕರನನ್ನು ಬಂಧಿಸಿದ್ದಾರೆ, ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.
‘मूर्ति पूजा में कोई दम नहीं है’ : अबू बकर समेत 4 ने करवाया हिंदू युवक का धर्म परिवर्तन, गोमाँस न खाने पर पीटा#Mewat #ReligiousConversion https://t.co/XDc8TfaVFV
— ऑपइंडिया (@OpIndia_in) August 23, 2021
1. ‘ದೈನಿಕ ಪಂಜಾಬ್ ಕೇಸರಿ’ಯ ಅನುಸಾರ ಸಂತ್ರಸ್ತ ಮನೋಜ್ ಕುಮಾರನು ಕೊಟ್ಟ ಮಾಹಿತಿಯಂತೆ ಎಪ್ರಿಲ್ 2020ರಲ್ಲಿ ಅಬೂ ಬಕರ್, ಮೌಲಾನಾ ದಿಲಶಾದ್, ಮೌಲಾನಾ ಮುಬಿನ್, ಮಾಸ್ಟರ್ ಸೋಹರಬ್ ಮುಂತಾದವರು ಹಣದ ಆಮಿಷವೊಡ್ಡಿ ಆತನನ್ನು ಮತಾಂತರಿಸಿದ್ದರು. ಆ ಸಮಯದಲ್ಲಿ ದಿಲಶಾದ್ ಇವನು ಕಾಗದ ಪತ್ರಗಳನ್ನು ಸಿದ್ಧಪಡಿಸಿ ಆತನಿಗೆ ಮತಾಂತರವಾಗಲು ಹೇಳಿದ್ದನು, ಹಾಗೆಯೇ ಹಿಂದೂ ದೇವತೆಗಳ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ‘ಮೂರ್ತಿ ಪೂಜೆಯಲ್ಲಿ ಶಕ್ತಿ ಇಲ್ಲ’ ಎಂದು ಹೇಳಿದ್ದನು.
2. ಮನೋಜನು ‘ಎಲ್ಲರೂ ಸೇರಿ ಎಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದ್ದರೆಂದರೆ ತನಗೆ ಮತಾಂತರ ಮಾಡಲೇಬೇಕಾಯಿತು. ಮತಾಂತರದ ನಂತರ ಸ್ವಲ್ಪ ಹಣ ಕೊಡಲಾಯಿತು, ಮದುವೆ ಮಾಡಿಸಿಕೊಡುವ ಆಶ್ವಾಸನೆಯನ್ನು ನೀಡಲಾಯಿತು’ ಎಂದು ಹೇಳಿದನು.
3. ಮತಾಂತರದ ನಂತರ ಅವನನ್ನು ಸಲಂಬಾ ಎಂಬ ಊರಿನಲ್ಲಿ ವಾಸಿಸಲು ಹೇಳಿದರು. ಅನಂತರ ಅವನಿಗೆ ಇತರ ಹಿಂದೂಗಳನ್ನು ಸಹ ಮತಾಂತರಿಸಲು ಹೇಳಿದರು. ಆರೋಪಿಗಳು ಅವನಿಗೆ ಗೋಮಾಂಸ ತಿನ್ನಲು ಒತ್ತಾಯಿಸಿದರೂ ಅವನು ಒಪ್ಪಲಿಲ್ಲ. ಆದ್ದರಿಂದ ಅವನನ್ನು ಥಳಿಸಲಾಯಿತು.
4. ಅವನಿಗೆ ಮತಾಂತರದ ನಿಜ ಸ್ವರೂಪವು ಗಮನಕ್ಕೆ ಬಂದ ನಂತರ ಅವನು ತನ್ನ ತಂದೆಗೆ ಈ ಬಗ್ಗೆ ತಿಳಿಸಿದನು. ಆರೋಪಿಗಳು ಆತನನ್ನು ಭೇಟಿಯಾಗಲು ಬಂದ ತಂದೆಯವರನ್ನೇ ಮತಾಂತರ ಮಾಡಲು ಪ್ರಯತ್ನಿಸಿದರು. ಮನೋಜನು ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ನೇರವಾಗಿ ಪೊಲೀಸ್ ಅಧೀಕ್ಷಕರ ಬಳಿ ದೂರನ್ನು ನೋಂದಾಯಿಸಿದನು. ಮನೋಜನು ಹೇಳಿದಂತೆ ‘ಆರೋಪಿಗಳು ದಾವತ- ಎ – ಇಸ್ಲಾಂ’ ಮತ್ತು ‘ಗ್ಲೋಬಲ್ ಪೀಸ್ ‘ ಎಂಬ ಕೇಂದ್ರಗಳನ್ನು ನಡೆಸುತ್ತಾರೆ. ಇವುಗಳ ಮೂಲಕ ಬಡ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ.’