ಹೀಗಿದ್ದರೆ ಭಾರತದಲ್ಲಿನ ಮುಸಲ್ಮಾನರು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮುಕ್ತಗೊಳಿಸಲು ಏಕೆ ವಿರೋಧಿಸಿದರು? ಭಗವಾನ ಶ್ರೀರಾಮನಂತೆಯೇ ಭಗವಾನ ಶ್ರೀಕೃಷ್ಣ ಮತ್ತು ಭಗವಾನ ಶಿವ ಇವರು ಸಹ ಸಂಪೂರ್ಣ ಜಗತ್ತಿನವರಾಗಿದ್ದಾರೆ, ಹೀಗಿರುವಾಗ ಅವರ ಕಾಶಿ ಮತ್ತು ಮಥುರಾದಲ್ಲಿನ ದೇವಸ್ಥಾನಗಳ ಜಾಗವನ್ನು ಮುಸಲ್ಮಾನರು ಹಿಂದೂಗಳಿಗೆ ಏಕೆ ಹಿಂತಿರುಗಿಸುತ್ತಿಲ್ಲ? ಫಾರೂಕ್ ಅಬ್ದುಲ್ಲಾರವರು ಇದಕ್ಕಾಗಿ ಏಕೆ ಪ್ರಯತ್ನಿಸುತ್ತಿಲ್ಲ ? ಶ್ರೀರಾಮನು ಸಂಪೂರ್ಣ ಜಗತ್ತಿನವರಾಗಿದ್ದಾರೆ ಎಂದು ಹೇಳುವುದು ಮಾತಿನ ಮಲ್ಲ ? ಎಂದು ತಿಳಿಯಬೇಕೇ ? – ಸಂಪಾದಕರು
ಜೀಂದ (ಹರಿಯಾಣ) – ಪ್ರಭು ಶ್ರೀರಾಮರು ಕೇವಲ ಹಿಂದೂಗಳ ದೇವರಷ್ಟೇ ಅಲ್ಲ, ಅವರು ಸಂಪೂರ್ಣ ಜಗತ್ತಿನವರಾಗಿದ್ದಾರೆ. ಭಾಜಪವು ಶ್ರೀರಾಮನ ಮೇಲೆ ತನ್ನ ಅಧಿಕಾರವನ್ನು ತೋರಿಸುವಾಗ ಪ್ರಭು ಶ್ರೀರಾಮನು ಕೇವಲ ಅವರಿಗಾಗಿಯೇ ಇದ್ದಾನೆ ಮತ್ತು ಇತರರಿಗಲ್ಲ ಎಂಬಂತೆ ಹೇಳುತ್ತಿದೆ. ಪ್ರಭು ಶ್ರೀರಾಮನು ಕೇವಲ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾಗಿ ಮಾತ್ರವಲ್ಲ ಅವರು ಸಂಪೂರ್ಣ ಜಗತ್ತಿನವರಾಗಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸನ ನೇತಾರ ಫಾರೂಕ್ ಅಬ್ದುಲ್ಲಾ ರವರು ಹೇಳಿದ್ದಾರೆ. ಅವರು ಮಾಜಿ ಉಪಮುಖ್ಯಮಂತ್ರಿ ದೇವಿಲಾಲರವರ 108 ನೇ ಜಯಂತಿಯ ನಿಮಿತ್ತ ಆಯೋಜಿಸಲಾದ ಸಮಾರಂಭವನ್ನು ಸಂಬೋಧಿಸುವಾಗ ಈ ರೀತಿ ಹೇಳಿದರು.
“भगवान राम संपूर्ण जगाचे, फक्त भाजपा किंवा आरएसएसचे नाही”, फारूख अब्दुल्लांनी साधला निशाणा!#LordShreeRam #FarooqAbdullahhttps://t.co/jk2rqhEJro < येथे वाचा सविस्तर वृत्त pic.twitter.com/sbwccLNkQg
— LoksattaLive (@LoksattaLive) September 26, 2021
ಫಾರೂಕ್ ಅಬ್ದುಲ್ಲಾ ರವರು ಈ ರೀತಿಯಲ್ಲಿ ಹೇಳಿದ್ದಾರೆ,
1. ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ 2 ವರ್ಷಗಳ ನಂತರವೂ ಒಬ್ಬನೇ ಒಬ್ಬ ವ್ಯಕ್ತಿಗೆ ನೌಕರಿ ದೊರೆತಿಲ್ಲ. ಕೇಂದ್ರವು ಕಾಶ್ಮೀರದಲ್ಲಿ 50000 ಉದ್ಯೋಗಾವಕಾಶಗಳ ಆಶ್ವಾಸನೆ ನೀಡಿತ್ತು. ಹೀಗೆ ಏನೂ ಆಗಿಲ್ಲ. (ಸ್ವಾತಂತ್ರ್ಯ ನಂತರದಿಂದ ಕಳೆದ 2 ವರ್ಷಗಳ ಮೊದಲಿನ ತನಕ ಆಡಳಿತ ನಡೆಸಿದವರಲ್ಲಿ ಫಾರೂಕ್ ಅಬ್ದುಲ್ಲಾರವರು ಸೇರಿದ್ದರು, ಅವರು ಕಾಶ್ಮೀರಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ಹೇಳಬೇಕು ! – ಸಂಪಾದಕರು)
2. ಕಾಶ್ಮೀರವು ಯಾವಾಗ ಭಾರತದ ಭಾಗವಾಗಿರಲಿಲ್ಲ ? ನಾವು ಗಾಂಧಿಯವರ ಭಾರತವನ್ನು ಆಯ್ಕೆ ಮಾಡಿದ್ದೆವು, ಜಿನ್ನಾ ರವರ ಪಾಕಿಸ್ತಾನವನ್ನಲ್ಲ. ನಾವು ಭಾರತದಲ್ಲಿಯೇ ಇದ್ದು ಭಾರತದಲ್ಲಿಯೇ ಸಾಯುತ್ತೇವೆ ಎಂದು ಹೇಳಿದ್ದೆವು. (‘ಭಾರತದಲ್ಲಿಯೇ ಇದ್ದು ಭಾರತ ಮತ್ತು ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿಶ್ವಾಸಘಾತ ಮಾಡುವ’ ಮಾನಸಿಕತೆಯನ್ನು ಅಬ್ದುಲ್ಲಾ ಕುಟುಂಬದವರು ಮತ್ತು ಇತರ ಮತಾಂಧರು ಹೊಂದಿದ್ದಾರೆ. ಇದೇ ಇತಿಹಾಸ ಮತ್ತು ವರ್ತಮಾನವೂ ಆಗಿದೆ ! – ಸಂಪಾದಕರು)
3. ಅಟಲ್ ಬಿಹಾರಿ ವಾಜಪೇಯಿಯವರು’ ನಾವು ಮಿತ್ರರನ್ನು ಬದಲಾಯಿಸಬಹುದು ಆದರೆ ನೆರೆಹೊರೆಯವರನ್ನಲ್ಲ’ ಎಂದು ಹೇಳಿದ್ದರು. (ಭಾರತಕ್ಕೆ ನೆರೆಹೊರೆಯವರನ್ನು ಬದಲಾಯಿಸುವ ಶಕ್ತಿಯೂ ಇದೆ; ಆದರೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಆಗುತ್ತಿಲ್ಲ, ಇದು ಭಾರತೀಯರ ದುರ್ದೈವ ! – ಸಂಪಾದಕರು)
4. ನಾವು ನಮ್ಮ ನೆರೆಯವರೊಂದಿಗೆ ಜಗಳಗಳನ್ನು ನಿಲ್ಲಿಸಬೇಕು. ನೆರೆಯವರೊಂದಿಗೆ ಮೈತ್ರಿಪೂರ್ಣ ಸಂಬಂಧವಿದ್ದರೆ ನಾವು ಸಮೃದ್ಧವಾಗಿ ಇರಬಹುದು. ಇಂದು ನಮ್ಮ ಮಿತ್ರರು ಎಲ್ಲಿದ್ದಾರೆ ? ನೇಪಾಳ, ಭೂತಾನ ಅಥವಾ ಬಾಂಗ್ಲಾದೇಶಗಳು ನಮ್ಮ ಮಿತ್ರರೇ ? ಇಂದು ಅಫಘಾನಿಸ್ತಾನವು ನಮ್ಮ ಮಿತ್ರನಾಗಿದೆಯೇನು? ಕಿರಿಯ ಸಹೋದರನನ್ನು ಜೊತೆಗೆ ಕರೆದುಕೊಂಡಾಗಲೇ ಮನೆಯು ಸಮೃದ್ಧವಾಗುತ್ತದೆ ಎಂಬುದನ್ನು ಹಿರಿಯ ಸಹೋದರನು ತಿಳಿದುಕೊಳ್ಳಬೇಕು. (ಭಾರತವು ಮಿತೃತ್ವದ ಸಂಬಂಧದಿಂದ ವರ್ತಿಸಲು ಪ್ರಯತ್ನಿಸಿದೆ, ಆದರೆ ನೆರೆಯ ರಾಷ್ಟ್ರಗಳು ವಿಶ್ವಾಸಘಾತ ಮಾಡಿವೆ, ಇದು ವಸ್ತುಸ್ಥಿತಿಯಾಗಿದೆ. ಫಾರೂಕ್ ಅಬ್ದುಲ್ಲಾ ರವರು ಉದ್ದೇಶಪೂರ್ವಕವಾಗಿ ಇದನ್ನು ಹೇಳಲು ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)