ಗುರುಗ್ರಾಮ್ (ಹರಿಯಾಣಾ)ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಪಠಣಕ್ಕೆ ವಿರೋಧಿಸಿದ 30 ಹಿಂದೂಗಳನ್ನು ವಶಕ್ಕೆ ಪಡೆದ ಪೊಲೀಸರು !

37 ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಅನುಮತಿ ನೀಡಿದ ಪೊಲೀಸರು !

* ವಾಸ್ತವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಿಸಲು ಪೊಲೀಸರು ಅನುಮತಿ ಹೇಗೆ ನೀಡಿದ್ದರು ? ಇದರಿಂದ ನಾಗರಿಕರಿಗಾಗುವ ಅನಾನುಕೂಲದ ಬಗ್ಗೆ ಏನು ? ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸುವ ಇಂತಹ ಪೊಲೀಸರು ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡುವರು ?- ಸಂಪಾದಕರು 

* ಹರಿಯಾಣಾದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳಿಗೇ ಇವುಗಳನ್ನು ವಿರೋಧಿಸಬೇಕಾಗುತ್ತಿದೆ ?- ಸಂಪಾದಕರು 

ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಈ ನಮಾಜು ಪಠಣಕ್ಕೆ ವಿರೋಧ

ಗುರುಗ್ರಾಮ್ (ಹರಿಯಾಣಾ) – ಇಲ್ಲಿಯ ಪೊಲೀಸರು ಪ್ರತಿ ಶುಕ್ರವಾರ ನಮಾಜುಪಠಣ ಮಾಡಲು ಒಟ್ಟು 37 ಸಾರ್ವಜನಿಕ ಸ್ಥಳಗಳಿಗೆ ಅನುಮತಿ ನೀಡಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಈ ನಮಾಜು ಪಠಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ, ಅಕ್ಟೋಬರ್ 29 ರಂದು ಈ ವಿರೋಧದಿಂದ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಯಿತು. ನಮಾಜು ಪಠಣದ ಸಮಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ನಮಾಜಿನ ಸ್ಥಳಕ್ಕೆ ಆಗಮಿಸಿ ಘೋಷಣೆ ಕೂಗಲಾರಂಭಿಸಿದರು. ಇದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಪೊಲೀಸರು 30 ಮಂದಿಯನ್ನು ವಶಕ್ಕೆ ಪಡೆದರು. ಹೆಚ್ಚು ಕಡಿಮೆ ಕಳೆದ 5 ವಾರಗಳಿಂದ ಈ ರೀತಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ‘ಹಿಂದೂಗಳು ನಮಾಜು ಪಠಣಕ್ಕೆ ಅನುಮತಿ ನೀಡಿದ್ದರು; ಅದಕ್ಕಾಗಿಯೇ ನಾವು ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಗಾಗಿ ಅವಕಾಶ ನೀಡುತ್ತಿದ್ದೇವೆ’, ಎಂದು ಪೊಲೀಸರು ತಿಳಿಸಿದ್ದಾರೆ. ಈ ಹೇಳಿಕೆಗೆ ಹಿಂದೂಗಳು ವಿರೋಧ ವ್ಯಕ್ತಪಡಿಸಿದ ನಂತರ, ಪೊಲೀಸರು ಅಂತಹ ಆಶಯದ ಟ್ವೀಟ್ ಹಿಂಪಡೆದಿದ್ದರು.