‘ಉತ್ತರಪ್ರದೇಶದ ವಿಧಾನಸಭೆಯ ಚುನಾವಣೆಯ ಮೊದಲು ಭಾಜಪ ಹಾಗೂ ಸಂಘ ಸೇರಿ ಯಾರಾದರೊಬ್ಬ ದೊಡ್ಡ ಮುಖಂಡರ ಕೊಲೆ ನಡೆಸುವರು !(ಅಂತೆ)

ರೈತ ಮುಖಂಡರಾದ ರಾಕೇಶ ಟಿಕೈತರವರ ದಾವೆ !

ರೈತ ಆಂದೋಲನಕ್ಕೆ ಕೇಂದ್ರ ಸರಕಾರವು ಮಹತ್ವ ಕೊಡದ ಕಾರಣ ಟಿಕೈತರಿಗೆ ನಿರಾಶೆಯಾಗಿದೆ. ಅವರ ಸಂಯಮ ಸಡಿಲವಾಗುತ್ತಿದೆ. ಆದ್ದರಿಂದ ಅವರು ಈ ರೀತಿಯ ದಾವೆ ಮಾಡಲು ಪ್ರಾರಂಭಿಸಿದ್ದಾರೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಸಿರಸಾ (ಹರಿಯಾಣಾ) – ರೈತ ಆಂದೋಲನವನ್ನು ಕೊನೆಗೊಳಿಸಲು ಕೇಂದ್ರ ಸರಕಾರದಿಂದ ಪ್ರಯತ್ನಿಸಲಾಯಿತು. ಈ ಆಂದೋಲನದ ಸಮಯದಲ್ಲಿ ಹಿಂದು-ಸಿಕ್ಖ ಇರಬಹುದು ಅಥವಾ ಹಿಂದು-ಮುಸಲ್ಮಾನರು ಇರಬಹುದು ಇವರಲ್ಲಿ ಪರಸ್ಪರ ಜಗಳವಾಡಿಸಲು ಪ್ರಯತ್ನಿಸಲಾಯಿತು. ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಹಾಗೂ ರಾ. ಸ್ವ. ಸಂಘದವರು ಸೇರಿ ಯಾರಾದರೊಬ್ಬ ದೊಡ್ಡ ಹಿಂದೂ ಮುಖಂಡರ ಕೊಲೆಯನ್ನು ಮಾಡಿಸುತ್ತಾರೆ. ಅನಂತರ ಹಿಂದೂ ಹಾಗೂ ಮುಸಲ್ಮಾನರೆಂಬ ಭೇದಭಾವದ ಆಧಾರದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಾರೆ ಎಂದು ರೈತ ಮುಖಂಡ ರಾಕೇಶ ಟಿಕೈತರು ಇಲ್ಲಿ ದಾವೆ ಮಾಡಿದರು. ೨ ದಿನಗಳ ಹಿಂದೆ ಹರಿಯಾಣದಲ್ಲಿನ ಕರನಾಲದಲ್ಲಿ ರೈತರ ಮೇಲೆ ನಡೆಸಲಾದ ಲಾಠೀಚಾರ್ಜ್‌ಗೆ ಸಂಬಂಧಪಟ್ಟ ಪೊಲೀಸರ ಮೇಲೆ ಕಲಮ್ ೩೦೨ರ ಅಂತರ್ಗತವಾಗಿ ಅಪರಾಧವನ್ನು ನೋಂದಾಯಿಸಬೇಕೆಂಬ ಬೇಡಿಕೆಯನ್ನು ಸಹ ಅವರು ಈ ಸಮಯದಲ್ಲಿ ಮಾಡಿದರು.

ಬೇಡಿಕೆ ಒಪ್ಪಿಗೆಯಾಗದ ತನಕ ರೈತರ ಆಂದೋಲನ ಮುಂದುವರೆಯಲಿದೆ !

ಟಿಕೈತರು ಮುಂದೆ ಹೀಗೆಂದರು, ಹರಿಯಾಣಾದ ಮುಖ್ಯಮಂತ್ರಿಗಳಾದ ಮನೋಹರಲಾಲ ಖಟ್ಟರರವರು ಮೊದಲಿನಿಂದಲೂ ರೈತರ ಆಂದೋಲನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಿಯವರೆಗೂ ನಮ್ಮ ಬೇಡಿಕೆಗಳು ಮಾನ್ಯತೆ ಸಿಗುವುದಿಲ್ಲವೋ ಅಲ್ಲಿಯವರೆಗೂ ನಾವು ಆಂದೋಲನವನ್ನು ಮಾಡುತ್ತಿರುತ್ತೇವೆ. ರೈತ ಆಂದೋಲನದ ಕೇಂದ್ರವು ದೆಹಲಿಯ ಬದಲು ಹರಿಯಾಣದತ್ತ ಹೊರಳಬೇಕು, ಎಂದು ಮುಖ್ಯಮಂತ್ರಿ ಖಟ್ಟರ ಇವರು ಪ್ರಯತ್ನಿಸುತ್ತಿದ್ದಾರೆ; ಆದರೆ ನಾವು ಕೇಂದ್ರ ಸರಕಾರದೊಂದಿಗೆ ಹೋರಾಡಲು ಸಜ್ಜಾಗಿದ್ದೇವೆ.