ಮೆರಠ (ಉತ್ತರಪ್ರದೇಶ)ನಲ್ಲಿ ‘ಗ್ಲೋಬಲ ಪೀಸ ಸೆಂಟರ’ನ ಅಧಕ್ಷ ಮೌಲಾನಾ (ಇಸ್ಲಾಮೀ ಅಭ್ಯಾಸಕ) ಕಲೀಮ ಸಿದ್ದಿಕಿಯ ಬಂಧನದ ಪ್ರಕರಣೆಮೌಲಾನಾ ಸಿದ್ದಿಕಿ ಹಾಗೂ ಅವನ 5 ಸಹಚರರ ವಿರುದ್ಧ ಅಪರಾಧ ದಾಖಲು |
* ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅಲ್ಪಸಂಖ್ಯಾತರು ಹಿಂದೂಗಳ ಮತಾಂತರ ಮಾಡುತ್ತಾರೆ, ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನ, ಬಾಂಗಲಾದೇಶದಂತಹ ಮತಾಂಧಬಹುಳ ದೇಶಗಳಲ್ಲಿ ಹಿಂದೂಗಳ ವಂಶವಿಚ್ಛೇದನೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು, ಇದೊಂದೇ ಪರ್ಯಾಯವಾಗಿದೆ , ಎಂಬುದನ್ನು ತಿಳಿಯಿರಿ ! – ಸಂಪಾದಕರು
ಫರೀದಾಬಾದ (ಹರಿಯಾಣಾ) – ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಿದ ಪ್ರಕರಣದಲ್ಲಿ ವಿನೋದ ಎಂಬ ವ್ಯಕ್ತಿಯು ಮೌಲಾನಾ ಸಿದ್ದಿಕೀ ಹಾಗೂ ಅವನ 5 ಸಹಕಾರಿಗಳ ವಿರುದ್ಧ ಇಲ್ಲಿನ ಸೆಕ್ಟರ– 5 ರ ಪೊಲೀಸು ಠಾಣೆಯಲ್ಲಿ ತಕರಾರು ದಾಖಲಿಸಿದ್ದಾನೆ. ಈ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿ ವರದಿಯನ್ನು ನೋಂದಿಸಿಕೊಳ್ಳಲಾಗಿದ್ದು ಮುಂದಿನ ಅನ್ವೇಷಣೆ ನಡೆಯುತ್ತಿದೆ. ವಿನೋದನ ಮತಾಂತರವಾದಾಗ ಅವನು ಒಂಭತ್ತನೇಯ ತರಗತಿಯಲ್ಲಿ ಓದುತ್ತಿದ್ದನು.
Faridabad youth lodges FIR against Maulana Kaleem Siddiqui alleging forced conversion to Islam when he was a minorhttps://t.co/I05dG4ak1E
— OpIndia.com (@OpIndia_com) September 24, 2021
1. ಮತಾಂತರದ ಪ್ರಕರಣದಲ್ಲಿ ಭಯೋತ್ಪದನಾ ವಿರೋಧಿ ದಳವು ಸೆಪ್ಟೆಂಬರ 21 ರಂದು ಮೌಲಾನಾ ಕಲೀಮ ಸಿದ್ದಿಕಿ ಎಂಬುವವನನ್ನು ಬಂಧಿಸಿತು. ಅವನನ್ನು 10 ದಿನಗಳ ಪೊಲೀಸರ ಸ್ವಾಧೀನಕ್ಕೆ ಒಪ್ಪಿಸಲಾಗಿದೆ. ಭಯೋತ್ಪಾದನಾ ವಿರೋಧಿ ದಳವು ನೀಡಿ ಮಾಹಿತಿಯಂತೆ ಮೌಲಾನಾ ಸಿದ್ದೀಕಿಯು ಮದರಸಾ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಮೂಲಕ ಇಡೀ ದೇಶದಲ್ಲಿ ಮತಾಂತರದ ರ್ಯಾಕೆಟ (ಬಲೆ ಬೀಸುವುದು) ನಡೆಸುತ್ತಿದ್ದನು. ಅದಕ್ಕಾಗಿ ಅವನಿಗೆ ಹವಾಲಾ ಮಾರ್ಗದಲ್ಲಿ ಆರ್ಥಿಕ ಸಹಾಯ ಕೂಡ ಸಿಗುತ್ತಿತ್ತು. ಅದರಿಂದಲೇ ಸಿದ್ದೀಕಿಯು ವಿನೋದನ ಮತಾಂತರ ಮಾಡಿದ್ದನು.
2. ವಿನೋದನು ನೀಡಿದ ಮಾಹಿತಿಗೆ ಅನುಸಾರವಾಗಿ, ಅವನು ಫರೀದಾಬಾದನಲ್ಲಿನ ಸೆಕ್ಟರ್-17 ರಲ್ಲಿ ಪ್ರೇಮನಗರದಲ್ಲಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದನು. ಅವರ ನೆರೆಯಲ್ಲಿ ಮತಾಂಧರು ವಾಸಿಸುತ್ತಿದ್ದರು. ಅವರು ಯಾವಾಗಲೂ ಇಸ್ಲಾಮನ ಹಿರಿಮೆಯಲ್ಲಿ ಮಾತನಾಡಿ ಹಿಂದೂ ಧರ್ಮವನ್ನು ಖಂಡಿಸುತ್ತಿದ್ದರು.
3. ಒಂದು ಸುದ್ಧಿಯಂತೆ ವಿನೋದನು ಮತಾಂತರವಾದಾಗ ಅಂದರೆ ವರ್ಷ 2014-15 ರಲ್ಲಿ ಅವನು ಒಂಭತ್ತನೇಯ ತರಗತಿಯಲ್ಲಿ ಕಲಿಯುತ್ತಿದ್ದನು. ಶಾಲೆಗೆ ಹೋಗುವಾಗ-ಬರುವಾಗ ಗ್ಯಾಸ ಒಲೆ ಹಾಗೂ ಹೊಲಿಯುವ ಯಂತ್ರದ ರಿಪೇರಿ ಕೆಲಸ ಮಾಡುವ ಶಹಜಾದನು ಅವನನ್ನು ಬಳಿಗೆ ಕರೆದು ಅವನಿಗೆ ತಿನ್ನಲು-ಕುಡಿಯಲು ಏನಾದರೂ ಕೊಡುತ್ತಿದ್ದನು. ಅದೇ ಸಮಯದಲ್ಲಿ ಅವನು ವಿನೋದನೊಂದಿಗೆ ಇಸ್ಲಾಮ ಬಗ್ಗೆ ಚರ್ಚೆ ಮಾಡುತ್ತಿದ್ದನು. ಶಹಜಾದನು ‘ನೀನು ಮುಸಲ್ಮಾನನಾದರೆ, ನರಕಕ್ಕೆ ಹೋಗುವುದರಿಂದ ತಪ್ಪಿಸಿಕೊಳ್ಳಬಹುದು’ ಎಂದು ಹೇಳುತ್ತಿದ್ದನು.
4. ಒಂದು ದಿನ ಅವನನ್ನು ದಹಲಿಯ ಶಾಹೀನಬಾಗನಲ್ಲಿನ ಒಂದು ಮಸೀದಿಗೆ ಕರೆದೊಯ್ದು ಅಲ್ಲಿ ಅವನನ್ನು ಮೌಲಾನಾ ಸಿದ್ದೀಕಿಯ ಭೇಟಿ ಮಾಡಿಸಿಕೊಡಲಾಯಿತು. ಅನಂತರ ಮೌಲಾನಾನು ಅವನನ್ನು ತಬ್ಬಿಕೊಂಡನು ಹಾಗೂ ಅವನನ್ನು ಮತಾಂತರಗೊಳಿಸಿ ಅವನಿಗೆ ‘ನೂರ ಮಹಂಮದ’ ಎಂದು ಹೆಸರಿಟ್ಟನು. ಅನಂತರ ಅವನಿಗೆ ಇಸ್ಲಾಮನ ಬಗ್ಗೆ ಶಿಕ್ಷಣೆ ನೀಡಲು ಗುಜರಾತ ಹಾಗೂ ಉತ್ತರಪ್ರದೇಶಕ್ಕೆ ಕಳುಹಿಸಿಕೊಡಲಾಯಿತು.
5. ವಿನೋದನು ನುಡಿದನು, ಅವನು ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಫರೀದಾಬಾದಿನಲ್ಲಿ ಗುಪ್ತವಾಗಿ 2 ವರ್ಷ ಸಮಯ ಕಳೆದನು. ವರ್ಷ 2020ರಲ್ಲಿ ಅವನಿಗೆ ತನ್ನ ಸಹೋದರಿಯ ವಿವಾಹದ ಬಗ್ಗೆ ತಿಳಿದು ಬಂದಾಗ ಅವನು ತನ್ನ ಕುಟುಂಬದವರನ್ನು ಭೇಟಿಯಾಗಲು ಹೋದನು.