ಮತಾಂತರಕ್ಕಾಗಿ ನ್ಯಾಯಾಲಯದ ಚೇಂಬರ್ ಬಳಸುತ್ತಿದ್ದ ಮತಾಂಧ ನ್ಯಾಯವಾದಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ ದೆಹಲಿ ಬಾರ್ ಕೌನ್ಸಿಲ್ !

ಕಡಕಡುಮಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿ ಇಕ್ಬಾಲ್ ಮಲಿಕ್ ಅವರ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಪರಿಣಾಮವಾಗಿ, ಅವನ ಪರವಾನಗಿ ರದ್ದಾಗಿರುವ ತನಕ ಅವನಿಗೆ ಕಾನೂನು ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ

ಐಎಸ್‌ಐಗೆ ಗೌಪ್ಯ ದಾಖಲೆಗಳನ್ನು ಒದಗಿಸಿದ್ದಕ್ಕಾಗಿ ಭಾರತೀಯ ಸೇನೆಯ ಇಬ್ಬರು ಸೈನಿಕರ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ದ ಆರೋಪದ ಮೇಲೆ ಪಂಜಾಬ್ ಪೊಲೀಸರು ಸೇನೆಯ ಹರಪ್ರೀತ್ ಸಿಂಗ್ (೨೩) ಮತ್ತು ಗುರ್ಭೇಜ್ ಸಿಂಗ್ (೨೩) ಇವರಿಬ್ಬರನ್ನು ಬಂಧಿಸಿದ್ದಾರೆ.

ದೀರ್ಘಕಾಲದ ವರೆಗೆ ಕೆಲಸ ಮಾಡುವವರಿಗೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯ ಹೆಚ್ಚು ! – ವಿಶ್ವ ಆರೋಗ್ಯ ಸಂಸ್ಥೆ

ಈ ವರದಿಯ ಪ್ರಕಾರ ಹೆಚ್ಚು ಕಾಲ ಕೆಲಸ ಮಾಡುವುದರಿಂದ ಪುರುಷರ ಮೇಲೆ ಜಾಸ್ತಿ ಪರಿಣಾಮವಾಗುತ್ತದೆ. ಅದರಂತೆ ೪೫ ರಿಂದ ೭೪ ವಯಸ್ಸಿನೊಳಗಿನ ಪುರುಷರು ಪ್ರತಿ ವಾರದಲ್ಲಿ ೫೫ ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದರು, ಅವರ ಸಾವಿನ ಸಂಖ್ಯೆ ಶೇ. ೭೨ ರಷ್ಟು ನೊಂದಾಯಿಸಲ್ಪಟ್ಟಿದೆ.

ಜಿಹಾದಿ ಭಯೋತ್ಪಾದಕರ ನಂತರ ಈಗ ನಕ್ಸಲರಿಂದ ಡ್ರೋನ್‍ನ ಉಪಯೋಗ !

ಜಿಹಾದಿ ಭಯೋತ್ಪಾದಕರಿಂದ ಜಮ್ಮುವಿನಲ್ಲಿ ಸೈನ್ಯ ನೆಲೆ ಮತ್ತು ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನಗಳಾದ ಬೆನ್ನಲ್ಲೇ ಈಗ ನಕ್ಸಲರಿಂದಲೂ ಕೂಡ ಭದ್ರತಾ ಪಡೆಗಳ ಮಾಹಿತಿಯನ್ನು ಸಂಗ್ರಹಿಸಲು ಡ್ರೋನ್‍ಅನ್ನು ಉಪಯೋಗಿಸಲು ಪ್ರಯತ್ನವಾಗುತ್ತಿರುವುದು ಬೆಳಕಿಗೆ ಬಂದಿದೆ.

ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ

ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ.

ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು ! – ತಜ್ಞರ ಅಂದಾಜು

ಭಾರತೀಯರು ಕೊರೊನಾದ ನಿಯಮಗಳನ್ನು ಪಾಲಿಸದಿದ್ದರೆ ಕೊರೊನಾದ ೩ ನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು; ಆದರೆ ಎರಡನೇ ಅಲೆಯಲ್ಲಿ ಪ್ರತಿದಿನ ಎಷ್ಟು ರೋಗಿಗಳ ಸಂಖ್ಯೆ ನಮೂದಾಗಿತ್ತೋ ಅದರ ತುಲನೆಯಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೊರೊನಾದ ಕುರಿತು ಸರಕಾರಿ ಗುಂಪಿನ ವಿಜ್ಞಾನಿಯು ಹೇಳಿದ್ದಾರೆ.

ಭಾರತ ವಿರೋಧಿ ಮತ್ತು ಮೋದಿ ವಿರೋಧಿ ವಿಚಾರಸರಣಿಯ ವರದಿಗಾರರು ಬೇಕಾಗಿದ್ದಾರೆ ! – ‘ನ್ಯೂಯಾರ್ಕ್ ಟೈಮ್ಸ್’ನ ಜಾಹಿರಾತು

ಅಮೇರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಈ ದೈನಿಕವು ವರದಿಗಾರರು ಬೇಕಾಗಿದ್ದಾರೆ ಎಂದು ಜಾಹೀರಾತನ್ನು ನೀಡುತ್ತಾ ಅದರಲ್ಲಿ ‘ಭಾರತ ವಿರೋಧೀ ಮತ್ತು ಮೋದಿ ವಿರೋಧಿ’ ವಿಚಾರಸರಣಿಯವರು ಅರ್ಹರಾಗಿದ್ದಾರೆ ಎಂದು ಅರ್ಹತೆಯನ್ನು ನೀಡಿದೆ. ಜುಲೈ ೧ ರಂದು ಈ ಜಾಹಿರಾತನ್ನು ಪ್ರಕಟಿಸಲಾಯಿತು. ದಕ್ಷಿಣ ಏಶಿಯಾ ಉದ್ಯೋಗದ ಬಗ್ಗೆ ವರದಿಯನ್ನು ಸಂಕಲನ ಮಾಡುವ ಕೆಲಸಕ್ಕಾಗಿ ಈ ಜಾಹೀರಾತನ್ನು ನೀಡಲಾಗಿತ್ತು ದೆಹಲಿಯಿಂದ ಕೆಲಸ ಮಾಡಬೇಕಾಗಲಿದೆ ಎಂದು ಅದರಲ್ಲಿ ಹೇಳಲಾಗಿದೆ.

ಹಿಂದಿನ ಆದೇಶದಿಂದ ಪ್ರಭಾವಕ್ಕೊಳಗಾಗದೆ ಆರೋಪಿ ಮೋಹನ್ ನಾಯಕ್ ಇವರ ಜಾಮೀನು ಅರ್ಜಿ ಇತ್ಯರ್ಥಗೊಳಿಸಿ

ಸರ್ವೋಚ್ಚ ನ್ಯಾಯಾಲಯವು ನಾಯಕ ಅವರ ಜಾಮೀನಿನ ಮೇಲೆ ಅಪರಾಧವನ್ನು ರದ್ದು ಪಡಿಸಿದ ತೀರ್ಪಿನಿಂದ ಪ್ರಭಾವಕ್ಕೊಳಗಾಗದೇ ಇತ್ಯರ್ಥ ಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಆದೇಶ ನೀಡಿದೆ. ಅದೇ ರೀತಿ ಈ ಅರ್ಜಿಯ ಬಗ್ಗೆ ಉತ್ತರ ನೀಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.

ಪಠ್ಯಪುಸ್ತಕದಲ್ಲಿ ತಪ್ಪಾದ ಇತಿಹಾಸವನ್ನು ಬದಲಾಯಿಸುವ ಸಂಸದೀಯ ಸಮಿತಿಯು ಈ ಬಗೆಗಿನ ಸೂಚನೆಯನ್ನು ಕೋರುವ ದಿನಾಂಕವನ್ನು ಜುಲೈ ೧೫ ರ ತನಕ ಮುಂದುವರಿಸಿದೆ !

ಈ ಸಮಿತಿಯ ಅಧ್ಯಕ್ಷ ಮತ್ತು ಶಾಸಕ ವಿನಯ ಸಹಸ್ರಬುದ್ಧೆ ಇವರು ಮಾತನಾಡಿ, ಭಾರತೀಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಮೊದಲು ದೇಶಕ್ಕೆ ಸ್ಥಾನವನ್ನು ನೀಡಬೇಕು. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮತ್ತು ೧೯೯೮ ರಲ್ಲಿಯ ಪೋಖರಣ ಪರಮಾಣು ಪರೀಕ್ಷಣೆಗೂ ಪಠ್ಯ ಪುಸ್ತಕದಲ್ಲಿ ಸ್ಥಾನ ನೀಡಬೇಕು.

‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ.