85 Britain Sharia Courts : ಬ್ರಿಟನ್‌ಲ್ಲಿ ನಡೆಯುತ್ತಿವೆ 85 ಶರಿಯತ್ ನ್ಯಾಯಾಲಯಗಳು !

ಜಾತ್ಯತೀತ ಸಂಘಟನೆಗಳು ಎರಡನೇ ಧಾರ್ಮಿಕ ನ್ಯಾಯಾಂಗ ಸ್ಥಾಪನೆಗೆ ಕಳವಳ ವ್ಯಕ್ತಪಡಿಸಿವೆ

ಲಂಡನ (ಬ್ರಿಟನ್) – ಬ್ರಿಟನ್‌ಲ್ಲಿ ಪ್ರಸ್ತುತ 85 ಶರಿಯತ್ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಬ್ರಿಟನ್ ಪಶ್ಚಿಮದ ಇಸ್ಲಾಮಿಕ್ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ ಎಂದು ಮಾಧ್ಯಮಗಳು ಹೇಳುತ್ತವೆ. ಬ್ರಿಟನ್‌ನಲ್ಲಿ ವಾಸಿಸುವ ಮುಸ್ಲಿಮರ ಮೇಲೆ ಈ ಶರಿಯತ್ ನ್ಯಾಯಾಲಯಗಳು ಹೆಚ್ಚಿನ ಪ್ರಭಾವ ಬೀರಿದೆ. ಈ ನ್ಯಾಯಾಲಯಗಳು ಮದುವೆ, ವಿಚ್ಛೇದನ ಮತ್ತು ಕೌಟುಂಬಿಕ ವಿಷಯಗಳ ಕುರಿತು ತಮ್ಮ ನಿರ್ಧಾರಗಳನ್ನು ನೀಡುತ್ತವೆ. `ನ್ಯಾಶನಲ್ ಸೆಕ್ಯುಲರ್ ಸೊಸೈಟಿ’ಯು ನ್ಯಾಯಾಂಗ ವ್ಯವಸ್ಥೆಗೆ ಸಮಾನಾಂತರವಾದ ಎರಡನೇ ಧಾರ್ಮಿಕ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

1982 ರಿಮದ ಬ್ರಿಟನ್ ನಲ್ಲಿ ಶರಿಯತ್ ನ್ಯಾಯಾಲಯ ಆರಂಭ

ಮಾಧ್ಯಮ ವರದಿಗಳ ಪ್ರಕಾರ, ಬ್ರಿಟನ್‌ನಲ್ಲಿ ಮೊದಲ ಶರಿಯತ್ ನ್ಯಾಯಾಲಯವನ್ನು 1982 ರಲ್ಲಿ ಸ್ಥಾಪಿಸಲಾಯಿತು ಮತ್ತು ಇಂದು 85 ನ್ಯಾಯಾಲಯಗಳಿವೆ. ಬ್ರಿಟನ್‌ನಲ್ಲೂ ‘ನಿಕಾಹ್ ಮುತಾಹ’ (ಸಂತೋಷದ ಮದುವೆ) ಮಾಡುವ ಪದ್ಧತಿ ಬ್ರಿಟನ್ ನಲ್ಲಿ ಶರವೇಗದಲ್ಲಿ ಹೆಚ್ಚುತ್ತಿದೆ. ನಿಕಾಹ್ ಮುತಾಹ್ ಅಡಿಯಲ್ಲಿ, ತಾತ್ಕಾಲಿಕ ವಿವಾಹವು 3 ದಿನಗಳಿಂದ ಒಂದು ವರ್ಷದವರೆಗೆ ಇರುತ್ತದೆ. ಇದನ್ನು ಮಹಿಳಾ ವಿರೋಧಿ ಆಚರಣೆ ಎಂದು ಪರಿಗಣಿಸಲಾಗಿದೆ.

ಬ್ರಿಟನ್ ನಲ್ಲಿ ಒಂದು ಲಕ್ಷ ನೋಂದಣಿಯಾಗದ ವಿವಾಹಗಳು

ಶರಿಯತ್ ನ್ಯಾಯಾಲಯಗಳು ಇಸ್ಲಾಮಿಕ್ ವಿದ್ವಾಂಸರ ಸಮಿತಿಯಿಂದ ಕೂಡಿದೆ. ಇದರಲ್ಲಿ ಹೆಚ್ಚಾಗಿ ಪುರುಷರು ಇರುತ್ತಾರೆ. ಇದು ಅನೌಪಚಾರಿಕ ಸಂಸ್ಥೆಯಾಗಿದ್ದು, ಇದು ಧಾರ್ಮಿಕ ವಿಷಯಗಳಲ್ಲಿ ಮತ್ತು ನಿಕಾಹ್, ತಲಾಖ್ (ವಿಚ್ಛೇದನ) ಮತ್ತು ‘ಖುಲಾ’ (ಪತ್ನಿಯಿಂದ ಪತಿಗೆ ವಿಚ್ಛೇದನ) ಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತದೆ. ಬ್ರಿಟನ್‌ನಲ್ಲಿ 1 ಲಕ್ಷ ವಿವಾಹಗಳು ಸಿವಿಲ್ ಅಧಿಕಾರಿಗಳೊಂದಿಗೆ ನೋಂದಾಯಿಸಲ್ಪಟ್ಟಿಲ್ಲ. ಈ ನಿಕಾಹ್ ಶರಿಯತ್ ನ್ಯಾಯಾಲಯಗಳಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಭವಿಷ್ಯದಲ್ಲಿ ಗಂಭೀರ ಪರಿಣಾಮಗಳು ಉಂಟಾಗಬಹುದು ! – ನ್ಯಾಷನಲ್ ಸೆಕ್ಯುಲರ್ ಸೊಸೈಟಿ

ನ್ಯಾಷನಲ್ ಸೆಕ್ಯುಲರ್ ಸೊಸೈಟಿ ಎಂಬ ಸಂಸ್ಥೆಯು ‘ಭವಿಷ್ಯದಲ್ಲಿ ಇದರ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು’, ಎಂದು ಹೇಳಿದೆ. ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀಫನ್ ಇವಾನ್ಸ್ ಇವರು ಎಚ್ಚರಿಕೆಯನ್ನು ನೀಡುತ್ತಾ, ಶರಿಯತ್ ನ್ಯಾಯಾಲಯಗಳು ಎಲ್ಲರಿಗೂ ಒಂದೇ ಕಾನೂನು ಎಂಬ ತತ್ವವನ್ನು ದುರ್ಬಲಗೊಳಿಸುತ್ತವೆ ಮತ್ತು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ರಿಟನ್‌ನಲ್ಲಿ ಮುಸ್ಲಿಮರ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ ಎಂಬುದು ಗಮನಾರ್ಹವಾಗಿದೆ.

ಸಂಪಾದಕೀಯ ನಿಲುವು

ಪ್ರಜಾಸತ್ತಾತ್ಮಕ ಜಾತ್ಯತೀತ ಬ್ರಿಟನ್‌ನ ಪರಿಸ್ಥಿತಿ ಹೀಗಿದ್ದರೆ, ಭಾರತದಲ್ಲಿ ಹೇಗಿರಬಹುದು ಎನ್ನುವುದು ಗಮನಕ್ಕೆ ಬರುತ್ತದೆ !