ಅನೇಕ ರಾಜಕೀಯ ಪಕ್ಷ ಮತ್ತು ಸರಕಾರ ಇವುಗಳಿಂದ ಬಂದ್‍ಗೆ ಬೆಂಬಲ
‘ಬಂದ್ ಮಾಡುವುದು ಅಂದರೆ ದೇಶದ ಅಬ್ಜಗಟ್ಟಲೆ ರೂಪಾಯಿಗಳ ನಷ್ಟ ಮಾಡಿದಂತೆ ಆಗಿದೆ ! ‘ಬಂದ್’ನ ಕರೆ ನೀಡುವ ಇಂತಹ ಸಂಘಟನೆಗಳು ಮತ್ತು ಅದನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಮೇಲೆ ದೇಶ ಹಾನಿ ಮಾಡಿದಕ್ಕಾಗಿ ನಿಷೇಧವನ್ನು ಹೇರಬೇಕು !- ಸಂಪಾದಕರು
ನವದೆಹಲಿ – ಕೇಂದ್ರ ಸರಕಾರದ ಕೃಷಿ ಕಾನೂನು ವಿರೋಧದಲ್ಲಿ ರೈತ ಸಂಘಟನೆಗಳು ಸಪ್ಟೆಂಬರ್ 27 ರಂದು ‘ಭಾರತ ಬಂದ್’ನ ಕರೆ ನೀಡಿವೆ. ಒಟ್ಟು 40 ಸಂಘಟನೆಗಳು ಕರೆ ನೀಡಿವೆ. ಬೆಳಿಗ್ಗೆ 6 ರಿಂದ 4 ರವರೆಗೆ ಈ ‘ಬಂದ್’ ಇರಲಿದೆ. ಈ ‘ಬಂದ್’ನಿಂದ ತುರ್ತು ಸೇವೆಗಳನ್ನು ಹೊರತುಪಡಿಸಲಾಗಿದೆ. ಪಂಜಾಬ್‍ನ ಮುಖ್ಯಮಂತ್ರಿ ಚರಣ ಜಿತ್ ಸಿಂಹ ಚನ್ನಿ ಇವರು ಈ ‘ಬಂದ್’ಗೆ ಬೆಂಬಲ ನೀಡಿದ್ದಾರೆ, ಹಾಗೂ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಬಸಪ, ಆಂಧ್ರಪ್ರದೇಶ ಸರಕಾರ, ತೃಣಮೂಲ ಕಾಂಗ್ರೆಸ್, ಮಾಕಪ, ಜನತಾದಳ ಸಂಯುಕ್ತ, ತಮಿಳುನಾಡಿನಲ್ಲಿನ ಆಡಳಿತಾರೂಢ ದ್ರಮುಕ(ದ್ರವಿಡ ಮುನ್ನೇತ್ರ ಕಳಘಂ) ಇವರು ಬೆಂಬಲ ನೀಡಿದ್ದಾರೆ.
Bharat Bandh on September 27: SKM appeals for peace, political parties extend support#BharatBandh #FarmersProstest #FarmLaws https://t.co/FUXmUTllTY
— Zee News English (@ZeeNewsEnglish) September 26, 2021