ಪ್ರಧಾನಮಂತ್ರಿ ಮೋದಿಯವರಿಂದ ‘ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ‘ಮಿಶನ’ಗೆ ಚಾಲನೆ

ದೇಶದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ಸಿಗಲಿದೆ ‘ಆರೋಗ್ಯ ಪರಿಚಯಪತ್ರ’ !

ನವ ದೆಹಲಿ – ಕಳೆದ 7 ವರ್ಷಗಳಲ್ಲಿ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸುದೃಢಗೊಳಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅದು ಈಗ ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಇಂದು ಅಂತಹ ಒಂದು ಅಭಿಯಾನವನ್ನು ಪ್ರಾರಂಭಿಸಲಾಗಿದೆ, ಅದರಲ್ಲಿ ಭಾರತದ ಆರೋಗ್ಯ ಸೌಲಭ್ಯಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಸಾಮಥ್ರ್ಯವಿದೆ, ಎಂದು ಹೇಳುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಪ್ರಧಾನಮಂತ್ರಿ ಡಿಜಿಟಲ ಆರೋಗ್ಯ ಮಿಶನ್’ನ ಹೊಸ ಹಂತಕ್ಕೆ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸಿಂಗ್‍ನ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಈ ಮೂಲಕ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ‘ಆರೋಗ್ಯ ಪರಿಚಯ ಪತ್ರ (ಹೆಲ್ತ್ ಕಾರ್ಡ್) ನೀಡಲಾಗುವುದು.

ಪ್ರಧಾನಮಂತ್ರಿ ಮೋದಿಯವರು ನುಡಿದರು, ಇದರ ಅಂತರ್ಗತ ಪ್ರತಿಯೊಬ್ಬ ನಾಗರಿಕನ ಬಳಿ ‘ಆರೋಗ್ಯ ಪರಿಚಯಪತ್ರ’ವಿರಲಿದೆ. ಈ ಪರಿಚಯಪತ್ರವು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು ಅದು ಆಧಾರ ಕಾರ್ಡ್‍ನಂತೆ ಕಾಣಿಸುವುದು. ಈ ಕಾರ್ಡ್‍ನ ಮೇಲೆ ‘ಆಧಾರ’ನಂತೆ ಕ್ರಮಸಂಖ್ಯೆಯಿರಲಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸಂಬಂಧಿತ ವ್ಯಕ್ತಿಯ ಪರಿಚಯವು ತಿಳಿದು ಬರುವುದು, ಇಂದು ನಮ್ಮ ದೇಶದಲ್ಲಿ 130 ಕೋಟಿ ಆಧಾರ ಸಂಖ್ಯೆಗಳು, 118 ಕೋಟಿ ಸಂಚಾರೀ ದೂರವಾಣಿ ಬಳಕೆದಾರರು, 80 ಕೋಟಿ ಇಂಟರನೆಟ್ ಬಳಕೆದಾರರು ಹಾಗೂ 43 ಕೋಟಿ ಜನಧನ ಬ್ಯಾಂಕ್ ಖಾತೆಗಳಿವೆ. ಈ ರೀತಿ ಜಗತ್ತಿನಲ್ಲಿ ಎಲ್ಲಿಯೂ ಕೂಡ ಇಲ್ಲ.

ಈ ರೀತಿ ತಯಾರಿಸಿ ತಮ್ಮ ‘ಆರೋಗ್ಯ ಪರಿಚಯಪತ್ರ’ !

ಆರೋಗ್ಯ ಪರಿಚಯಪತ್ರವನ್ನು ತಯಾರಿಸಲು ಕೇಂದ್ರಸರಕಾರದ ‘ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ’ದ ಜಾಲತಾಣದಿಂದ https://healthid.ndhm.gov.in/register ಈ ಸಂಪರ್ಕಕ್ಕೆ ಭೇಟಿ ನೀಡಿರಿ. ಅಲ್ಲಿ ನಾಗರಿಕರು ಸ್ವತಃ ತಮ್ಮ ನೋಂದಣಿ ಮಾಡಿಕೊಳ್ಳಬಹುದು ಹಾಗೂ ಅದರ ಮೂಲಕ ತಮ್ಮ ಪರಿಚಯಪತ್ರವನ್ನು ತಯಾರಿಸಿಕೊಳ್ಳಬಹುದು. ಈ ಪರಿಚಯಪತ್ರದಿಂದ ರೋಗಿಗಳು ಡಾಕ್ಟರ್‍ರವರ ಬಳಿ ಹೋಗುವಾಗ ಆರೋಗ್ಯ ವಿಷಯದ ಮೊದಲಿನ ಕಾಗದಪತ್ರಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ. ಡಾಕ್ಟರ್‍ಗಳಿಗೂ ಆ ಕ್ರಮಸಂಖ್ಯೆಯ ಸಹಾಯದಿಂದ ರೋಗಿಗಳ ‘ಡಾಟಾ’ (ವೈದ್ಯಕೀಯ ಮಾಹಿತಿ) ಸಿಗುವುದು. ಆ ಆಧಾರದಲ್ಲಿ ಅವರು ರೋಗಿಗಳ ಮೇಲೆ ಮುಂದಿನ ಶುಶ್ರೂಷೆಯನ್ನು ನಡೆಸುವರು. ಅದೇ ರೀತಿ ಸಂಬಂಧಿತ ವ್ಯಕ್ತಿಗೆ ಯಾವ ಸರಕಾರೀ ಯೋಜನೆಗಳ ಲಾಭ ಸಿಗಲಿದೆ ಇದು ಸಹ ಅದರಿಂದ ಗೊತ್ತಾಗುತ್ತದೆ.

ಆ ಪರಿಚಯಪತ್ರಕ್ಕಾಗಿ ಸಂಬಂಧಿತ ವ್ಯಕ್ತಿಯ ವೈಯಕ್ತಿಕ ಸಂಚಾರವಾಣಿ ಕ್ರಮಾಂಕ ಹಾಗೂ ಆಧಾರ ಕಾರ್ಡ್ ಕ್ರಮಸಂಖ್ಯೆಯನ್ನು ಪಡೆದುಕೊಳ್ಳಲಾಗುವುದು. ಅದರ ಸಹಾಯದಿಂದ ‘ಮೊಬೈಲ್ ಹೆಲ್ತ ಕಾರ್ಡ್’ ತಯಾರಿಸಲಾಗುವುದು. ಅದಕ್ಕಾಗಿ ಸರಕಾರವು ಒಂದು ಆರೋಗ್ಯ ವ್ಯವಸ್ಥೆಯನ್ನು ತಯಾರಿಸುವುದು ಮತ್ತು ಅದು ಆ ವ್ಯಕ್ತಿಯ ‘ಡೆಟಾ’ ಸಂಗ್ರಹಿಸಲಿದೆ. ಯಾರಿಗೆ ಆರೋಗ್ಯ ಪರಿಚಯಪತ್ರ ಬೇಕಾಗಿದೆಯೋ, ಅವರ ಮಾಹಿತಿ ಜಮಾ ಮಾಡುವ ಅನುಮತಿಯನ್ನು ಆರೋಗ್ಯ ವ್ಯವಸ್ಥೆಗೆ ನೀಡಲಾಗುವುದು.