ದೆಹಲಿಯ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳಿಂದ ಗುಂಡು ಹಾರಿಸಿ ಒಬ್ಬ ಗೂಂಡಾನ ಕೊಲೆ

ಪೊಲೀಸರ ಗುಂಡುಹಾರಾಟದಲ್ಲಿ ಇಬ್ಬರು ದಾಳಿಕೋರ ಗೂಂಡಾಗಳು ಹತ

ಗೂಂಡಾಗಳು ಹಾಡುಹಗಲೇ ನ್ಯಾಯಾಲಯದಲ್ಲಿ ಪೊಲೀಸರ ಉಪಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಕೊಲೆ ಮಾಡುವಷ್ಟು ಧೈರ್ಯ ತೋರಿಸುತ್ತಾರೆ, ಹೀಗಿರುವಾಗ ತರಬೇತಿ ಪಡೆದ ಆಧುನಿಕ ಶಸ್ತ್ರಗಳಿಂದ ಸಜ್ಜಾಗಿರುವ ಜಿಹಾದಿ ಉಗ್ರಗಾಮಿಗಳು ದೇಶದ ರಾಜಧಾನಿಯ ಮೇಲೆ ಯಾವಾಗ ಬೇಕಾದರೂ ಹಾಗೂ ಎಲ್ಲಿ ಬೇಕಾದರೂ ದಾಳಿ ಮಾಡಿ ಯಾರನ್ನೂ ಕೊಲೆ ಮಾಡಬಹುದು, ಇದೆಲ್ಲಾ ಪೊಲೀಸರಿಗೆ ನಾಚಿಕೆಗೇಡು !- ಸಂಪಾದಕರು 

ನವ ದೆಹಲಿ – ದೇಶದ ರಾಜಧಾನಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳು ಜಿತೇಂದ್ರ ಯಾನೆ ಗೊಗೀ ಎಂಬ ಕುಖ್ಯಾತ ಗೂಂಡಾನನ್ನು ಗುಂಡಿಕ್ಕಿ ಕೊಂದಿದ್ದಾರೆ. ಆಗ ನ್ಯಾಯಾಲಯದಲ್ಲಿ ಸುರಕ್ಷೆಗೆಂದು ನೇಮಿಸಲಾದ ಪೊಲೀಸರು ಗೊಗೀಯನ್ನು ಕೊಂದ ಆ ಇಬ್ಬರು ಗೂಂಡಾಗಳನ್ನು ಗುಂಡಿಕ್ಕಿ ಕೊಂದರು. ಹತರಾದ ಆ ಇಬ್ಬರು ಗೂಂಡಾಗಳ ಹೆಸರು ಇನ್ನೂ ತಿಳಿದುಬಂದಿಲ್ಲ. ಇವರಿಬ್ಬರೂ ನ್ಯಾಯವಾದಿಗಳ ವೇಷದಲ್ಲಿ ನ್ಯಾಯಾಲಯಕ್ಕೆ ಬಂದಿದ್ದರು. ಜಿತೇಂದ್ರ ಯಾನೆ ಗೊಗೀ ಕಳೆದ 2 ವರ್ಷಗಳಿಂದ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿದ್ದನು. ಅವನನ್ನು ಖಟ್ಲೆಯ ವಿಚಾರಣೆಗೋಸ್ಕರ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ ಈ ಘಟನೆ ನಡೆಯಿತು. ಗೊಗೀಯ ಕೊಲೆ ಮಾಡಿದವರು ಟಿಲ್ಲೂ ಗುಂಪಿನ ಗೂಂಡಾಗಳಾಗಿದ್ದರು. ಕೊಲೆಯಾದ ಇಬ್ಬರು ಗೂಂಡಾಗಳ ಪೈಕಿ ಒಬ್ಬನ ಮೇಲೆ 50 ಸಾವಿರದ ಬಹುಮಾನವಿತ್ತು.