‘ಅಮೆಜಾನ’ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ ! – ‘ಪಾಂಚಜನ್ಯ’ ನಿಯತಕಾಲಿಕೆಯ ಟೀಕೆ

ನವ ದೆಹಲಿ – ‘ಅಮೆಜಾನ್’ ಈ ಸಂಸ್ಥೆ ಎಂದರೆ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿಯಾಗಿದೆ, ಎಂದು ಪಾಂಚಜನ್ಯ ನಿಯತಕಾಲಿಕೆಯು ಟೀಕಿಸಿದೆ. ‘ಪಾಂಚಜನ್ಯ’ದ ಹಿಂದಿನ ಸಂಚಿಕೆಯಲ್ಲಿ ‘ಇನ್ಫೋಸಿಸ್’ ಸಂಸ್ಥೆಯನ್ನು ಟೀಕಿಸುತ್ತಾ ಅದು ನಕ್ಸಲರಿಗೆ ಸಹಾಯಮಾಡುತ್ತದೆ ಎಂದು ಆರೋಪಿಸಿತ್ತು; ಆದರೆ ಆ ಸಮಯದಲ್ಲಿ ಈ ವಿಷಯವಾಗಿ ಯಾವುದೇ ಸಾಕ್ಷಾಧಾರ ಇಲ್ಲವೆಂದು ನಿಯತಕಾಲಿಕೆ ಸ್ಪಷ್ಟಪಡಿಸಿತು.

‘ಪಾಂಚಜನ್ಯ’ದ ಸಂಪಾದಕ ಹಿತೇಶ ಶಂಕರ ಇವರು `ಪಾಂಚಜನ್ಯ’ದ ಹೊಸ ಸಂಚಿಕೆಯ ಮುಖಪುಟವನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ‘ಅಮೆಜಾನ್’ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಜೆಫ್ ಬೇಜೊಸ ಇವರ ಛಾಯಾಚಿತ್ರ ಕಾಣುತ್ತಿದೆ. ಆ ಸಂಚಿಕೆಯ ಶೀರ್ಷಿಕೆ ‘#ಅಮೆಜಾನ್ : ಈಸ್ಟ್ ಇಂಡಿಯಾ ಕಂಪನಿ 2.0‘ ಎಂದು ಬರೆದಿದ್ದು ಕಾಣುತ್ತಿದೆ. ಹಾಗೆ ‘ಈ ಸಂಸ್ಥೆಯು ಏನು ತಪ್ಪು ಮಾಡಿದೆ ಎಂದು ಅದಕ್ಕೆ ಲಂಚ ಕೊಡುವ ಪರಿಸ್ಥಿತಿ ಬಂದಿದೆ ? ಜನರು ಈ ಸಂಸ್ಥೆಯನ್ನು ಭಾರತದಲ್ಲಿನ ಹೊಸ ಉದ್ಯಮಿಗಳಿಗೆ ಆರ್ಥಿಕ ಸ್ವಾತಂತ್ರ್ಯಕ್ಕೆ ಮತ್ತು ಸಂಸ್ಕೃತಿಗೆ ಅಪಾಯಕಾರಿ ಎಂದು ಏಕೆ ಪರಿಗಣಿಸುತ್ತಾರೆ ?’, ಈ ರೀತಿಯ ವಾಕ್ಯಗಳನ್ನು ಬರೆಯಲಾಗಿದೆ. ಕಳೆದ ವಾರದಲ್ಲಿ ಭಾರತ ಸರಕಾರವು ಭಾರತದಲ್ಲಿ ‘ಅಮೆಜಾನ್’ನ ಕಾನೂನು ಪ್ರತಿನಿಧಿಗಳು ಸರಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟಿದ್ದಾರೆಂಬ ಆರೋಪದ ವಿಚಾರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.