ಕಾರ್ಮಿಕರ ಸಂಘಟನೆಗಳಿಂದ ವಿರೋಧ
ನವ ದೆಹಲಿ – ದೇಶದ ಜನಸಾಮಾನ್ಯರಿಗೂ (ನಾಗರಿಕರೂ) ರೈಲ್ವೇ ಆಸ್ಪತ್ರೆಯಲ್ಲಿ ಶುಶ್ರೂಷೆ ಸಿಗುವ ಸಾಧ್ಯತೆ ಕಂಡುಬರುತ್ತಿದೆ. ಕೇಂದ್ರ ಸರಕಾರವು ಈ ಸಂದರ್ಭದಲ್ಲಿ ಪ್ರಸ್ತಾಪನೆಯನ್ನು ತಯಾರಿಸಿ ಉತ್ತರ-ಮಧ್ಯ ರೈಲ್ವೆ ವಿಭಾಗ ಸೇರಿದಂತೆ ಎಲ್ಲಾ ವಿಭಾಗೀಯ ಕಛೇರಿಗಳಿಗೆ ಕಳುಹಿಸಿದೆ. ದೇಶದಾದ್ಯಂತ ಒಟ್ಟು 125 ಆಸ್ಪತ್ರೆಗಳಿವೆ. ಅದೇ ರೀತಿ 586 ಹೆಲ್ತ್ ಯುನಿಟ್ ಹಾಗೂ ಪಾಲಿಕ್ಲಿನಿಕ್ (ಬಹುಚಿಕಿತ್ಸಾ ಕೇಂದ್ರ)ಗಳಿವೆ. ಅಲ್ಲಿ ಕೇವಲ ರೈಲ್ವೆ ಕೆಲಸಗಾರರಿಗೆ ಹಾಗೂ ಅವರ ಕುಟುಂಬದವರಿಗೆ ಶುಶ್ರೂಷೆ ನೀಡಲಾಗುತ್ತದೆ. ರೈಲ್ವೆ ಸಿಬ್ಬಂದಿ ಸಂಘಟನೆಗಳು ಈ ಪ್ರಸ್ತಾಪವನ್ನು ವಿರೋಧಿಸಿದೆ. `ಜನಸಾಮಾನ್ಯರಿಗೆ ಶುಶ್ರೂಷೆ ನೀಡುವುದಾದರೆ, ಅದರಿಂದ ರೈಲ್ವೆ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಗಳಿಗೆ ಅದರಿಂದ ಅಡಚಣೆಯಾಗಬಹುದು’, ಎಂಬುದು ಸಂಘಟನೆಗಳ ಹೇಳಿಕೆಯಾಗಿದೆ.