ಶ್ರೀರಾಮ ಮಂದಿರದ ಹೋರಾಟದ ಕಥೆ ಶೀಘ್ರದಲ್ಲೇ ದೂರದರ್ಶನದಲ್ಲಿ !

ಅಯೋಧ್ಯೆ – ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳ 500 ವರ್ಷಗಳ ಹಿಂದಿನ ಹೋರಾಟದ ಕಥೆ ಶೀಘ್ರದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿ ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ ವತಿಯಿಂದ 5 ಭಾಗಗಳ ಕಿರುಚಿತ್ರವನ್ನೂ ತಯಾರಿಸಿದೆ. ಇದರ ಪ್ರತಿಯೊಂದು ಭಾಗವು 30ರಿಂದ 40 ನಿಮಿಷಗಳ ಅವಧಿಯದ್ದಾಗಿದ್ದು, ಕೇಂದ್ರ ಸರಕಾರದ ಅನುಮತಿ ದೊರೆತ ನಂತರ ಈ ಕಿರುಚಿತ್ರ ಬಿಡುಗಡೆಯಾಗಲಿದೆ. ಈ ಕಿರುಚಿತ್ರದಲ್ಲಿ ಹಿಂದೂಗಳು ಶ್ರೀರಾಮ ಮಂದಿರಕ್ಕಾಗಿ 500 ವರ್ಷಗಳಿಂದ ನಡೆಸಿದ ಹೋರಾಟ ಹಾಗೆಯೇ ಸ್ವಾತಂತ್ರ್ಯದ ನಂತರ ನ್ಯಾಯಾಲಯದ ಹೋರಾಟಗಳಲ್ಲಿ ಹಿಂದೂಗಳು ನೀಡಿದ ದಾಖಲೆಗಳನ್ನು ಸಮಾಜದ ಎದುರಿಗೆ ತರಲು ಕಿರುಚಿತ್ರವನ್ನು ತಯಾರಿಸಲಾಗಿದೆಯೆಂದು’, ಟ್ರಸ್ಟ್ ಹೇಳಿದೆ. ಕೆಲವು ದಿನಗಳ ಹಿಂದೆ ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ಕೂಡ ಈ ಮಾಹಿತಿ ನೀಡಿದ್ದರು.