ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಭಿಕ್ಷಾಟನೆ, ಮನುಷ್ಯ ಕಳ್ಳ ಸಾಗಾಣಿಕೆ ಮಾಡುತಿದ್ದರಿಂದ ನಿಷೇಧ
ಇಸ್ಲಾಮಾಬಾದ್ (ಪಾಕಿಸ್ತಾನ) – ಸಂಯುಕ್ತ ಆರಾಬ್ ಅಮರಾತ್, ಸೌದಿ ಅರೇಬಿಯಾ ಮತ್ತು ಇತರ ಅನೇಕ ಕೊಲ್ಲಿ ದೇಶಗಳು ಪಾಕಿಸ್ತಾನದ ಜನರಿಗೆ ವೀಸಾ ನೀಡಲು ಸ್ಪಷ್ಟವಾಗಿ ನಿರಾಕರಿಸಿ ಅವುಗಳ ಮೇಲೆ ಅನಿಶ್ಚಿತ ಕಾಲಾವಧಿಗಳಿಗಾಗಿ ನಿಷೇಧ ಹೇರಿದೆ. ಕೊಲ್ಲಿ ದೇಶ ಮತ್ತು ಅದರಲ್ಲಿನ ಪ್ರಮುಖ ನಗರಗಳು ಲಕ್ಷಾಂತರ ಪಾಕಿಸ್ತಾನಿ ಪ್ರವಾಸಿಗಳು ಮತ್ತು ಉದ್ಯೋಗ ಹುಡುಕುವವರೆಗೆ ಇಷ್ಟದ ಸ್ಥಳಗಳಾಗಿವೆ. ಪ್ರವಾಸ ನಿಷೇಧ ಮತ್ತು ವೀಸಾ ಅರ್ಜಿ ನಿರಾಕರಣೆ ಇದರಂತಹ ಹೆಚ್ಚುತ್ತಿರುವ ಘಟನೆಯಿಂದ ಪಾಕಿಸ್ತಾನದ ಪ್ರತಿಷ್ಠೆ ಕಳಂಕಿತವಾಗಿದೆ. ಇದಲ್ಲದೆ ಅಮಿರತ್ ಪಾಕಿಸ್ತಾನದಲ್ಲಿ ವೀಸ ಅರ್ಜಿದಾರರಿಗೆ ಪೊಲೀಸರು ನೀಡುವ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಲು ಕೂಡ ಅನಿವಾರ್ಯಗೊಳಿಸಿದೆ.
ಪಾಕಿಸ್ತಾನಿಗಳ ಮೇಲೆ ಯಾವ ಕಾರಣಗಳಿಗಾಗಿ ನಿಷೇಧ ಹೇರಲಾಗಿದೆ ?
೧. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತ ಪ್ರಯಾಣಿಕರು ವಿದೇಶಕ್ಕೆ ಹೋಗಿ ಅಲ್ಲಿ ಮಾದಕ ಪದಾರ್ಥ ಮತ್ತು ಮನುಷ್ಯ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ. ಕೆಲವರು ಅಕ್ರಮವಾಗಿ ವಿದೇಶದಲ್ಲಿ ವಾಸ ಮಾಡುತ್ತಿದ್ದಾರೆ.
೨. ಕೊಲ್ಲಿ ದೇಶಗಳಲ್ಲಿ ಪಾಕಿಸ್ತಾನಿ ಭಿಕ್ಷುಕರ ಸಂಖ್ಯೆ ಕೂಡ ಗಣನೀಯವಾಗಿದೆ. ಪಾಕಿಸ್ತಾನಿ ಭಿಕ್ಷುಕರ ಬಂಧನದ ಘಟನೆಗಳು ಹೆಚ್ಚುತ್ತಿರುವುದರಿಂದ ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ.
೩. ಕೊಲ್ಲಿ ದೇಶಗಳಲ್ಲಿನ ಅನೇಕ ಕಂಪನಿಗಳಲ್ಲಿ ಪಾಕಿಸ್ತಾನಕ್ಕೆ ದೂರು ನೀಡಿದೆ ಅದರಲ್ಲಿ, ಅವರು ಕಳಿಸಿರುವ ಜನರಿಗೆ ಅಗತ್ಯ ಇರುವ ಕೌಶಲ್ಯ ಇಲ್ಲದಿರುವುದರಿಂದ ಅವರು ಸಂಬಂಧಿಸಿದ ಉದ್ಯೋಗದ ಅಗತ್ಯಗಳು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಮದು ಹೇಳಿದೆ.
೪. ಇಸ್ಲಾಮಾಬಾದ್ ನಲ್ಲಿ ‘ವಿಂಚಿ ಟೂರ್ಸ್ ಅಂಡ್ ಟ್ರಾವೆಲ್ಸ್’ ನ ವ್ಯವಸ್ಥಾಪಕ ಸಂಚಾಲಕ ಮುದ್ದಾಸರ್ ಮೀರಿ ಇವರು, ಕೊಲ್ಲಿ ದೇಶದಲ್ಲಿನ ಕಂಪನಿಗಳಲ್ಲಿ ಇನ್ನು ಮುಂದೆ ಪಾಕಿಸ್ತಾನದ ಕಾರ್ಮಿಕರು ಅಥವಾ ತಂತ್ರಜ್ಞರನ್ನು ನೇಮಿಸಲು ಇಷ್ಟಪಡುವುದಿಲ್ಲ; ಕಾರಣ ಪಾಕಿಸ್ತಾನದಿಂದ ಬರುವ ಕಾರ್ಮಿಕರಲ್ಲಿ ಕಾರ್ಯಕ್ಷಮತೆ ಇರುವುದಿಲ್ಲ ಈಗ ಇದು ಅವರಿಗೆ ತಿಳಿಯಿತು.
ಸಂಪಾದಕೀಯ ನಿಲುವುಪಾಕಿಸ್ತಾನದ ಮಾನಸಿಕತೆ ನೋಡಿದರೆ ಪಾಕಿಸ್ತಾನದ ಮೇಲೆ ಜಗತ್ತೇ ನಿಷೇಧ ಹೇರಿ ಅದನ್ನು ಬಹಿಷ್ಕರಿಸುವುದು ಆವಶ್ಯಕವಾಗಿದೆ ! ಕೊಲ್ಲಿ ದೇಶಗಳಲ್ಲಿನ ಇಸ್ಲಾಮಿ ದೇಶಗಳು ಏನು ಮಾಡುತ್ತಿವೆಯೋ ಅದನ್ನು ಭಾರತ ಕೂಡ ಮಾಡುವುದು ಆವಶ್ಯಕವಾಗಿದೆ ! |