ಮಹಾಕುಂಭ ಮೇಳದ ನಿಮಿತ್ತ ತ್ರಿವೇಣಿ ಸಂಗಮ ಸೇರಿದಂತೆ, ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟ ಧಾಮವನ್ನು ಅಲಂಕರಿಸಲಾಗುವುದು !

ಪ್ರಯಾಗರಾಜ ಮಹಾಕುಂಭ ಮೇಳ 2025

ಪ್ರಯಾಗರಾಜ – ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ ಮೇಳದ ನಿಮಿತ್ತ ಪ್ರಯಾಗರಾಜದಲ್ಲಿನ ತ್ರಿವೇಣಿ ಸಂಗಮ ಸೇರಿದಂತೆ ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟ ಧಾಮಗಳನ್ನೂ ಅಲಂಕರಿಸಲಾಗುವುದು. ಈ ತೀರ್ಥಕ್ಷೇತ್ರಗಳ ಅಭಿವೃದ್ಧಿಗಾಗಿ ಸರಕಾರವು ವಿಶೇಷ ಯೋಜನೆಯನ್ನು ರೂಪಿಸಿದೆ. ಪ್ರಯಾಗರಾಜನಲ್ಲಿರುವ ತ್ರಿವೇಣಿ ಸಂಗಮ ಪ್ರದೇಶ, ಅಯೋಧ್ಯೆಯ ಶ್ರೀರಾಮ ಮಂದಿರ ಪ್ರದೇಶ, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಪ್ರದೇಶ ಮತ್ತು ಚಿತ್ರಕೂಟದ ಕಾಮದಗಿರಿ ಪ್ರದಕ್ಷಿಣಾ ಮಾರ್ಗದ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಈ ಸ್ಥಳದಲ್ಲಿ, ಸಾರಿಗೆ ವ್ಯವಸ್ಥೆ, ವಸತಿ ಸೌಲಭ್ಯಗಳು, ನೈರ್ಮಲ್ಯ, ಕುಡಿಯುವ ನೀರಿನ ಸೌಲಭ್ಯಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಭದ್ರತಾ ನಿರ್ವಹಣೆ ಇತ್ಯಾದಿಗಳ ಮೇಲೆ ಕೇಂದ್ರೀಕರಿಸಲಾಗಿದೆ. ಈ ಎಲ್ಲಾ ಸ್ಥಳಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಎಲ್ಲ ಧಾರ್ಮಿಕ ಸ್ಥಳಗಳಿಗಾಗಿ ರಾಜ್ಯದ ನಗರಾಭಿವೃದ್ಧಿ ಇಲಾಖೆ ಅಂದಾಜು 65 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದ್ದು, ಈ ಕಾಮಗಾರಿಗಳ ಮೇಲ್ವಿಚಾರಣೆಗೆ ವಿಭಾಗೀಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ.