ಚೀನಾದಿಂದ ಲಡಾಖ ಗಡಿಯಲ್ಲಿ 50 ಸಾವಿರ ಸೈನಿಕರ ನೇಮಕ

ಡ್ರೋನ್ ಮೂಲಕ ಭಾರತದ ಮೇಲೆ ನಿಗಾ ಇಡುವ ಪ್ರಯತ್ನ

ಚೀನಾದ ಜೊತೆ ಇಂದಿಲ್ಲ ನಾಳೆ ಕೈ ಕೈ ಮಿಸಲಾಯಿಸುವುದರ ತನಕ ಭಾರತಕ್ಕೆ ಶಾಂತಿ ಸಿಗಲು ಸಾಧ್ಯವಿಲ್ಲ, ಎಂಬುದು ವಸ್ತುಸ್ಥಿತಿಯಾಗಿದೆ. ಆ ದೃಷ್ಟಿಯಿಂದ ಭಾರತವು ಚೀನಾದ ವಿರುದ್ಧ ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ !

ನವ ದೆಹಲಿ – ಚೀನಾದ ಸೈನ್ಯವು ಲಡಾಖನ ಗಡಿಯಲ್ಲಿನ ದೌಲತ್ ಬೇಗ ಒಲ್ಡಿ ಸೆಕ್ಟರ್, ಗೋಗರಾ ಹೈಟ್ಸ್ ಈ ಭಾಗದಲ್ಲಿ ಚಲನವಲನ ನಡೆಸುತ್ತಿದೆ. ಇಲ್ಲಿಯ ಪ್ರತ್ಯಕ್ಷ ನಿಯಂತ್ರಣ ರೇಖೆಯ ಮೇಲೆ ಚೀನಾವು 50 ಸಾವಿರಕ್ಕಿಂತಲೂ ಹೆಚ್ಚಿನ ಸೈನಿಕರನ್ನು ನೇಮಕ ಮಾಡಿದ್ದು ಭಾರತೀಯ ಚೌಕಿಗಳ ಹತ್ತಿರದಿಂದ ಡ್ರೋನ್‍ಗಳು ಹಾರಾಡುತ್ತಿವೆ. ಹಾಗೂ ಗಡಿಯ ಹತ್ತಿರ ಯುದ್ಧ ವಿಮಾನಗಳ ನಿಲ್ದಾಣಗಳನ್ನು ಸಿದ್ಧ ಮಾಡುತ್ತಿರುವುದು ಮತ್ತು ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ನೇಮಕ ಮಾಡಲಾಗಿದೆ. ಚೀನಾ ಸೈನ್ಯದ ಈ ಚಲನವಲನದ ಮೇಲೆ ಭಾರತೀಯ ಸೇನೆಯು ನಿಗಾ ಇಟ್ಟಿದೆ. ಭಾರತೀಯ ಸೈನ್ಯವು ದೊಡ್ಡ ಪ್ರಮಾಣದಲ್ಲಿ ಡ್ರೋನ್ ನೇಮಕ ಮಾಡಿ ಶೀಘ್ರವೇ ಆ ಸ್ಥಳದಲ್ಲಿ ಇಸ್ರೈಲ್ ಮತ್ತು ಭಾರತದ ಡ್ರೋನ್ ಕಳಿಸಲಾಗುವುದು.