ಉಗ್ರಗಾಮಿಗಳನ್ನು ಪೋಷಿಸುತ್ತದೆ ಮತ್ತು ಲಾಡೆನ್ ನನ್ನು ಹುತಾತ್ಮ ಎನ್ನುವ ಪಾಕಿಸ್ತಾನ !

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ!

ಕಾನೂನುಬಾಹಿರವಾಗಿ ಕಬಳಿಸಿರುವ ಪಾಕ್ ವ್ಯಾಪ್ತ ಕಾಶ್ಮೀರವನ್ನು ಮುಕ್ತಗೊಳಿಸಬೇಕೆಂಬ ಬೇಡಿಕೆಯಿಟ್ಟ ಭಾರತ

ಪಾಕವ್ಯಾಪ್ತ ಕಾಶ್ಮೀರವನ್ನು ಮುಕ್ತಗೊಳಿಸಬೇಕೆಂಬ ಬೇಡಿಕೆಯಿಂದ ಪಾಕಿಸ್ತಾನವು ಅದನ್ನು ಸ್ವತಂತ್ರಗೊಳಿಸುವುದಿಲ್ಲ, ಆದ್ದರಿಂದ ಭಾರತೀಯ ಸೈನ್ಯವು ಕಾರ್ಯಾಚರಣೆ ನಡೆಸಿಯೇ ಅದನ್ನು ಸ್ವತಂತ್ರಗೊಳಿಸಬೇಕಾಗಿದೆ ! – ಸಂಪಾದಕರು 

ನವ ದೆಹಲಿ – ಉಗ್ರಗಾಮಿಗಳಿಗೆ ಪ್ರೋತ್ಸಾಹ ಹಾಗೂ ಸಹಾಯ ಮಾಡುವ ಪಾಕಿಸ್ತಾನದ ಇತಿಹಾಸವು ಸಂಯುಕ್ತ ರಾಷ್ಟ್ರದ ಸದಸ್ಯ ದೇಶಗಳಿಗೆ ತಿಳಿದೇ ಇದೆ. ಪಾಕಿಸ್ತಾನವು ಸಂಯುಕ್ತ ರಾಷ್ಟ್ರದ ವೇದಿಕೆಯನ್ನು ನಿಯಮಿತವಾಗಿ ಭಾರತದ ವಿರುದ್ಧ ಸುಳ್ಳು ಹೇಳಲು ಹಾಗೂ ಜಗತ್ತಿನ ಗಮನವನ್ನು ಬೇರೆ ಕಡೆ ತಿರುಗಿಸಲು ಉಪಯೋಗಿಸಿಕೊಂಡಿದೆ. ಪಾಕಿಸ್ತಾನವು ಹೀಗೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. ಭಯೋತ್ಪಾದಕರು ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದು ಒಸಾಮಾ ಬಿನ್ ಲಾಡೆನ್ ನಿಗೆ ಪಾಕಿಸ್ತಾನವೇ ಆಶ್ರಯ ನೀಡಿತ್ತು. ಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಆ ದೇಶದಲ್ಲಿ ‘ಹುತಾತ್ಮಾ’ ಎಂದು ಉಲ್ಲೇಖಿಸಲಾಗುತ್ತದೆ. ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಸ್ವಚ್ಛಂದವಾಗಿ ತಿರುಗಾಡುತ್ತಾರೆ; ಆದರೆ ಸಾಮಾನ್ಯ ನಾಗರಿಕರು ವಿಶೇಷವಾಗಿ ಅಲ್ಪಸಂಖ್ಯಾತರ ಪರಿಸ್ಥಿತಿಯು ಶೋಚನೀಯವಾಗಿದೆ, ಎಂಬ ಶಬ್ದ್ಧಗಳಲ್ಲಿ ಭಾರತವು ಪಾಕಿಸ್ತಾನದ ಬಗ್ಗೆ ಅನ್ನು ಸಂಯುಕ್ತ ರಾಷ್ಟ್ರದ ಮಹಾಸಭೆಯಲ್ಲಿ ವಾಗ್ದಾಳಿ ನಡೆಸಿದೆ. ಪಾಕಿಸ್ತಾನದ ಪ್ರಧಾನಮಂತ್ರಿಗಳಾದ ಇಮ್ರಾನ ಖಾನರವರು ಸಂಯುಕ್ತ ರಾಷ್ಟ್ರದ ಮಹಾಸಭೆಯನ್ನು ಸಂಬೋಧಿಸುವಾಗ ಕಾಶ್ಮೀರದ ವಿಷಯದಲ್ಲಿ ಅಂಶಗಳನ್ನು ಉಪಸ್ಥಿತ ಪಡಿಸುತ್ತಾ ‘ದಕ್ಷಿಣ ಏಷ್ಯಾದಲ್ಲಿ ಶಾಶ್ವತಸ್ವರೂಪದಲ್ಲಿ ಶಾಂತಿಯು ಜಮ್ಮು-ಕಾಶ್ಮೀರ ವಿವಾದವು ಪರಿಹಾರವಾಗುವುದರ ಮೇಲೆ ಅವಲಂಬಿಸಿದೆ’, ಎಂದು ಹೇಳಿದ್ದರು. ಅದಕ್ಕೆ ಭಾರತದ ಸಂಯುಕ್ತ ರಾಷ್ಟ್ರದಲ್ಲಿನ ಸಚಿವರಾದ ಸ್ನೇಹಾ ದುಬೆಯವರು ಮೇಲಿನ ಶಬ್ದಗಳಲ್ಲಿ ಪ್ರತ್ಯುತ್ತರವನ್ನು ನೀಡಿದರು. ‘ಅಕ್ರಮವಾಗಿ ವಶಪಡಿಸಿಕೊಂಡಿರುವ ಪಾಕಿಸ್ತಾನ ವ್ಯಾಪ್ತ ಕಾಶ್ಮೀರದ ಭಾಗವನ್ನು ತಕ್ಷಣ ಖಾಲಿ ಮಾಡಿ’, ಎಂದು ಕೂಡ ದುಬೆಯವರು ಪಾಕಿಸ್ತಾನಕ್ಕೆ ದೃಢವಾಗಿ ಹೇಳಿದರು. ಸಾಮಾಜಿಕ ಮಾಧ್ಯಮಗಳಿಂದ ಭಾರತದ ಭೂಮಿಕೆಯ ಬಗ್ಗೆ ಪ್ರಶಂಸೆಯಾಗುತ್ತಿದೆ.

ಸಂಯುಕ್ತ ರಾಷ್ಟ್ರದ ಮಹಾಸಭೆಯನ್ನು ಸಂಬೋಧಿಸುವಾಗ ಇಮ್ರಾನ್ ಖಾನ್ ರು ಭಾರತದ ಮೇಲೆ ಕೆಲವು ಗಂಭೀರ ಆರೋಪಗಳನ್ನು ಹೋರಿಸಿದರು. ಅವರು ಅಮೇರಿಕಾದಲ್ಲಿನ ಸೆಪ್ಟೆಂಬರ 11 2001 ರ ದಾಳಿಯ ನಂತರ ಜಗತ್ತಿನಾದ್ಯಂತ ಬಲಪಂಥೀಯ ವಿಚಾರಸರಣಿಯವರು ಮುಸಲ್ಮಾನರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. (ಒಂದು ವೇಳೆ ಆ ರೀತಿ ಆಕ್ರಮಣಗಳಾಗುತ್ತಿದ್ದರೆ, ಅದು ಏಕೆ ನಡೆಯುತ್ತಿದೆ, ಎಂಬ ಬಗ್ಗೆ ಇಮ್ರಾನ ಖಾನರು ಏಕೆ ವಿಚಾರ ಮಾಡುವುದಿಲ್ಲ? – ಸಂಪಾದಕರು) ಅದರಲ್ಲಿ ಎಲ್ಲದ್ದಕ್ಕಿಂತ ದೊಡ್ಡ ಪ್ರಭಾವವು ಭಾರತ ದೇಶದಲ್ಲಿ ನೋಡಲು ಸಿಕ್ಕಿತು. ಭಾರತದಲ್ಲಿ ರಾ. ಸ್ವ. ಸಂಘ ಹಾಗೂ ಭಾಜಪದವರು ಮುಸಲ್ಮಾನರನ್ನು ಗುರಿ ಮಾಡುತ್ತಿದ್ದಾರೆ. (ಕಳೆದ 74 ವರ್ಷಗಳಿಂದ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಯಾವ ವಿಚಾರಸರಣಿಯ ಜನರು ದಾಳಿ ಮಾಡಿ ಅವರ ವಂಶ ಸಂಹಾರ ನಡೆಸುತ್ತಿದ್ದಾರೆ, ಎಂಬುದನ್ನು ಇಮ್ರಾನ ಖಾನರು ಎಂದಾದರೂ ಹೇಳುವರೇ? ಪಾಕಿಸ್ತಾನದ ಹಿಂದೂಗಳು ಯಾವತ್ತೂ ಮುಸಲ್ಮಾನರ ಮೇಲೆ ದಾಳಿ ನಡೆಸಿದ ಘಟನೆಯೇ ಇಲ್ಲ. ಹೀಗಿದ್ದರೂ ಹಿಂದೂಗಳ ಮೇಲೆ ಹಾಗೂ ಅವರ ದೇವಾಲಯಗಳ ಮೇಲೆ ಏಕೆ ಆಕ್ರಮಣಗಳು ನಡೆಯುತ್ತಿವೆ? ಹಿಂದೂಗಳ ಹೆಣ್ಣುಮಕ್ಕಳ ಅಪಹರಣ, ಮತಾಂತರ ಹಾಗೂ ಬಲವಂತವಾಗಿ ವಿವಾಹ ಮಾಡಲಾಗುತ್ತದೆ, ಎಂಬುದನ್ನು ಇಮ್ರಾನ್ ಖಾನ್ ರು ಯಾವಾಗ ಹೇಳಲಿದ್ದಾರೆ? – ಸಂಪಾದಕರು) ಮುಸಲ್ಮಾನರಲ್ಲಿ ಭೇದಭಾವ ಮಾಡಲಾಗುತ್ತಿದೆ. ಭಾರತವು ಒಮ್ಮುಖ ಹೆಜ್ಜೆಗಳಿಡುತ್ತಾ ಕಾಶ್ಮೀರವನ್ನು ಬಲಪೂರ್ವಕ ನಿಯಂತ್ರಿಸುತ್ತಿದೆ ಎಂದು ಹೇಳಿದರು (ಕಳ್ಳನಾದರೂ ಬಲೆ ಜೋರು’ ಎಂಬ ವೃತ್ತಿಯ ಪಾಕಿಸ್ತಾನದ ಪ್ರಧಾನಮಂತ್ರಿ ! – ಸಂಪಾದಕರು)