ದೆಹಲಿಯಲ್ಲಾದ ದಂಗೆ ಪೂರ್ವನಿಯೋಜಿತ! – ದೆಹಲಿ ಉಚ್ಚ ನ್ಯಾಯಾಲಯ

* ದೆಹಲಿ ದಂಗೆ ಮಾತ್ರವಲ್ಲ, ಭಾರತದಲ್ಲಿ ಮತಾಂಧರಿಂದ ನಡೆಸಲಾಗುವ ಎಲ್ಲಾ ದಂಗೆಗಳು ಪೂರ್ವನಿಯೋಜಿತವೇ ಇರುತ್ತವೆ ಮತ್ತು ಯಾವಾಗಲೂ ಅವುಗಳನ್ನು ಕ್ಷುಲ್ಲಕ ಕಾರಣಗಳಿಂದ (ನೆಪ) ನಡೆಸಲಾಗುತ್ತವೆ ಎಂಬುದನ್ನು ಗಮನದಲ್ಲಿಡಿ!- ಸಂಪಾದಕರು 

* ನ್ಯಾಯಾಲಯವು ದಂಗೆ ನಡೆಸಿದಂತಹ ಮತಾಂಧರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದು ಜನತೆಗೆ ಅನಿಸುತ್ತದೆ! – ಸಂಪಾದಕರು 

ನವದೆಹಲಿ – ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಾದ ದಂಗೆಯು ಯಾವುದೇ ಘಟನೆಯ ಪ್ರತಿಕ್ರಿಯೆಯಾಗಿರಲಿಲ್ಲ, ಅದನ್ನು ಪೂರ್ವನಿಯೋಜಿತ ಪದ್ಧತಿಯಿಂದ ನಡೆಸಲಾಗಿತ್ತು ಎಂದು ದೆಹಲಿ ಉಚ್ಚ ನ್ಯಾಯಾಲಯವು ಹೇಳಿದೆ. ಈ ದಂಗೆಯನ್ನು ನಾಗರಿಕತ್ವ ಸುಧಾರಣಾ ಕಾನೂನನ್ನು ವಿರೋಧಿಸಲು ನಡೆಸಲಾಗಿತ್ತು. ಇದರಲ್ಲಿ 53 ಜನರು ಸಾವಿಗೀಡಾಗಿದ್ದರು.

1. ನ್ಯಾಯಾಲಯವು ಇದರ ಬಗ್ಗೆ ಮುಂದಿನಂತೆ ಹೇಳಿದೆ – ದೂರುದಾರರು ನ್ಯಾಯಾಲಯದಲ್ಲಿ ಸಾದರಪಡಿಸಿದ ವಿಡಿಯೋಕ್ಕನುಸಾರ ಅದರಲ್ಲಿ ಆಂದೋಲನಕಾರರ ವರ್ತನೆಯಿಂದ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ ಸರಕಾರ ಮತ್ತು ನಗರದ ಜನರ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಲಿಕ್ಕಾಗಿ ಈ ದಂಗೆಯನ್ನು ಆಯೋಜನಾಬದ್ಧವಾಗಿ ನಡೆಸಲಾಗಿತ್ತು. ದಂಗೆಕೋರರು ಸಿಸಿಟಿವಿ ಕೆಮರಾಗಳನ್ನು ಸ್ಥಗಿತಗೊಳಿಸುವುದು ಇದು ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಗೆಸಹಲು ಮಾಡಿದಂತಹ ಪೂರ್ವನಿಯೋಜಿತ ಷಡ್ಯಂತ್ರ ಎಂಬುದಕ್ಕೆ ಪುಷ್ಟಯನ್ನು ನೀಡುತ್ತದೆ. ದಂಗೆಕೋರರು ಪೊಲೀಸ್ ಅಧಿಕಾರಿಗಳ ಮೇಲೆ ಲಾಠಿಗಳಿಂದ ನಿರ್ದಯವಾಗಿ ಆಕ್ರಮಣ ನಡೆಸುತ್ತಿರುವುದು ಸಹ ಸ್ಪಷ್ಟವಾಗಿದೆ. ಈ ದಂಗೆಯು ಅಕಸ್ಮಾತ್ತಾಗಿ ಘಟಿಸಿರದೇ ಪೂರ್ವನಿಯೋಜಿತ ತಂತ್ರವೇ ಆಗಿತ್ತು.

2. ಈ ದಂಗೆಯಲ್ಲಿ ಆರೋಪಿ ಮಹಮದ್ ಇಬ್ರಾಹಿಮ್ ಇವನು ತನ್ನ ಕೈಯಲ್ಲಿ ತಲವಾರನ್ನು ಹಿಡಿದುಕೊಂಡಿದ್ದನು. ಈ ಘಟನೆಯಲ್ಲಿ ಹರಿತವಾದ ಶಸ್ತ್ರಗಳ ಹೊಡೆತದಿಂದ ಪೊಲೀಸ್ ಹವಾಲ್ದಾರ ರತನಲಾಲರ ಮೃತ್ಯುವಾಗಿತ್ತು. ಈ ಸಮಯದಲ್ಲಿ ಇಬ್ರಾಹಿಮ್ ನ ನ್ಯಾಯವಾದಿಗಳು ಯುಕ್ತಿವಾದವನ್ನು ಮಾಡುವಾಗ ಪೊಲೀಸ್ ಹವಾಲ್ದಾರ ರತನಲಾಲರ ಮೃತ್ಯುವು ವರದಿಯಲ್ಲಿದ್ದಂತೆ ಹರಿತವಾದ ತಲವಾರಿನ ಹೊಡೆತದಿಂದ ಆಗಿರಲಿಲ್ಲ. ಆರೋಪಿಯು ಕೇವಲ ತನ್ನ ಸ್ವಂತದ ಮತ್ತು ಕುಟುಂಬದ ರಕ್ಷಣೆಗಾಗಿ ತಲವಾರನ್ನು ಬೀಸಿದನು ಎಂದು ವಾದಿಸಿದ್ದರು.

3. ಇದಕ್ಕೆ ನ್ಯಾಯಾಲಯವು ಆರೋಪಿಗಳ ಕೈಯಲ್ಲಿರುವ ಶಸ್ತ್ರವು ನ್ಯಾಯಾಲಯಕ್ಕೆ ಆರೋಪಿಯ ಸೆರೆಮನೆ ವಾಸದ ಅವಧಿಯನ್ನು ಹೆಚ್ಚಿಸಲು ಇರುವಂತಹ ನಿರ್ಣಾಯಕ ಸಾಕ್ಷಿಯಾಗಿದೆ. ಅವರು ಉಪಯೋಗಿಸಿದ ಶಸ್ತ್ರದಿಂದ ಗಂಭೀರ ಸಾವುನೋವುಗಳಾಗುವ ಸಾಧ್ಯತೆಯಿದೆ. ಹಾಗಾಗಿ ಅವನಿಗೆ ಜಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.