ಮಲಬಾರ (ಕೇರಳ) ಇಲ್ಲಿ 1921 ರಲ್ಲಿ ಮತಾಂಧರಿಂದ ಆಯೋಜನಾಬದ್ಧವಾಗಿ ಹಿಂದೂಗಳ ನರ ಸಂಹಾರ ಮಾಡಲಾಯಿತು ! – ಯೋಗಿ ಆದಿತ್ಯನಾಥ

ನವ ದೆಹಲಿ – ಕೇರಳದ ಮಲಬಾರಿನಲ್ಲಿ 1921 ರಲ್ಲಿ ಮೊಪಲಾ ಹತ್ಯಾಕಾಂಡದ ಮೂಲಕ ಆಯೋಜನಾಬದ್ಧವಾಗಿ ಹಿಂದೂಗಳ ನರ ಸಂಹಾರ ಮಾಡಲಾಯಿತು. ಉಗ್ರರು 10 ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳನ್ನು ಹತ್ಯೆಗೈದರು, ಅನೇಕ ದೇವಸ್ಥಾನಗಳನ್ನು ಕೆಡವಿದರು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹೇಳಿದರು. ಅವರು ಇಲ್ಲಿ ‘ಪಾಂಚಜನ್ಯ’ ನಿಯತಕಾಲಿಕೆಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ‘ಡಾ. ಬಾಬಾಸಾಹೇಬ್ ಅಂಬೇಡ್ಕರ ಇವರ ‘ಪಾಕಿಸ್ತಾನ ಅಂಡ್ ದ ಪಾರ್ಟೇಶನ್ ಆಫ್ ಇಂಡಿಯಾ’ ಈ ಪುಸ್ತಕದಲ್ಲಿ ಈ ಘಟನೆಯ ಉಲ್ಲೇಖವಿದೆ’, ಎಂದು ಸಹ ಯೋಗಿ ಆದಿತ್ಯನಾಥ್ ಇವರು ಹೇಳಿದರು.