Shivalinga Tension : ಜೌನ್ಪುರ (ಉತ್ತರ ಪ್ರದೇಶ) ಇಲ್ಲಿನ ಕಬ್ರದಲ್ಲಿರುವ ಶಿವಲಿಂಗದಿಂದಾಗಿ ಉದ್ವಿಗ್ನತೆ

15 ವರ್ಷಗಳ ಹಿಂದೆಯೂ ಶಿವಲಿಂಗದ ವಿಚಾರದಲ್ಲಿ ವಿವಾದವಾಗಿತ್ತು

ಜೌನ್ಪುರ (ಉತ್ತರ ಪ್ರದೇಶ) – ಇಲ್ಲಿನ ಕಬ್ರಸ್ತಾನದಲ್ಲಿರುವ ಶಿವಲಿಂಗದಿಂದಾಗಿ ನಿರ್ಮಾಣವಾಗಿರುವ ವಿವಾದದಿಂದ ಜೌನ್ಪುರ ನಗರ ಕೊತವಾಲಿ ಪ್ರದೇಶದ ಮುಲ್ಲಾ ಟೋಲಾದಲ್ಲಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿತ್ತು. ಈ ಅವಧಿಯಲ್ಲಿ ಎರಡೂ ಕಡೆಗಳಲ್ಲಿ ಶಾಂತಿ ಕಾಪಾಡಲು ವಿಶೇಷ ಪ್ರಯತ್ನಗಳನ್ನು ಮಾಡಲಾಯಿತು. ‘ಇಂತಹ ವಿವಾದ 15 ವರ್ಷಗಳ ಹಿಂದೆಯೂ ನಡೆದಿತ್ತು, ಅದನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲಾಗಿತ್ತು’ ಎಂದು ಜನರು ಹೇಳಿದರು.

1. ಮುಲ್ಲಾ ಟೋಲಾದ ನಿವಾಸಿ ರಾಧೇಶ್ಯಾಮ ಇವರು ಮಾತನಾಡಿ, ಆಲದ ಮರದಿಂದ ಹೊರ ಹೊಮ್ಮಿದ ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕುವ ವಿಚಾರವಾಗಿ ಇಲ್ಲಿ ವಿವಾದ ಉಂಟಾಯಿತು. ಆಗಿನಿಂದ ಇಲ್ಲಿ ಶಾಶ್ವತ ಬೇಲಿಯನ್ನು ಹಾಕಲಾಗಿಲ್ಲ.

2. ಅಬ್ದುಲ ಕಲಾಂ ಅವರು ಮಾತನಾಡಿ, ಶಾಹಿ ಈದ್ಗಾದ ಇಮಾಮ್ ಮೌಲಾನಾ ಜಫರ ಅಹ್ಮದ ಸಿದ್ದಿಕಿ ಅವರ ಮುಂದೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರಲ್ಲಿ ಶಿವಲಿಂಗದ ಗಡಿಯ ಬಗ್ಗೆ ವಿವಾದ ಉಂಟಾಗಿತ್ತು. ‘ಇಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುವುದಿಲ್ಲ’ ಎಂದು ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಯಿತು. ಯಾರಿಗೆ ಜಲ ಅರ್ಪಿಸಿ ಪೂಜೆ ಮಾಡುವುದಿದ್ದರೆ, ಅವರು ಮಾಡಬಹುದು, ಅವರಿಗೆ ಯಾವುದೇ ರೀತಿಯ ನಿಷೇಧವಿಲ್ಲ. ಅದು ಹೇಗಿದೆಯೋ, ಹಾಗೆಯೇ ಉಳಿಯುತ್ತದೆ.

3. 2 ದಿನಗಳ ಹಿಂದೆ ಶಿವಲಿಂಗ ಧ್ವಂಸಗೊಳಿಸಿರುವ ಆರೋಪವನ್ನು ಮಾಡಿ ಹಿಂದೂಗಳು ಮತ್ತೊಮ್ಮೆ ಕಟ್ಟಡ ನಿರ್ಮಿಸುವಂತೆ ಕೋರಿದ್ದಾರೆ. ತದನಂತರ ಈ ಪ್ರಕರಣ ಮತ್ತಷ್ಟು ಹೆಚ್ಚಾಯಿತು. ಈ ದೃಷ್ಟಿಯಿಂದ ಈ ಸ್ಥಳದಲ್ಲಿ ಪೊಲೀಸರನ್ನು ನೇಮಿಸಲಾಗಿದೆ.

4. ಇಲ್ಲಿನ ಪೊಲೀಸ ಅಧಿಕಾರಿ ಮಿಥಿಲೇಶ ಮಿಶ್ರಾ ಇವರು, ಮುಲ್ಲಾ ಟೋಲಾದ ಶಿವಲಿಂಗದ ಸ್ಥಳದಲ್ಲಿ ಪೂರ್ಣ ಶಾಂತಿಯಿದೆ. ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೇೇನಾ ತುಕಡಿಯನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಕಬ್ರದಲ್ಲಿ ಶಿವಲಿಂಗವಿದೆ ಅಂದರೆ ಈ ಭೂಮಿ ಹಿಂದೂಗಳಿಗೆ ಸೇರಿದ್ದು ಮತ್ತು ಅದನ್ನು ಮುಸ್ಲಿಮರು ಒತ್ತುವರಿ ಮಾಡಿ ಕಬ್ರ ನಿರ್ಮಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ !