ವಿಶ್ವ ಹಿಂದೂ ಪರಿಷತ್ತು ಡಿಸೆಂಬರ್ ೨೧ ರಿಂದ ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ದೇಶವ್ಯಾಪಿ ‘ಜನಜಾಗರಣ ಆಂದೋಲನವನ್ನು ಮಾಡಲಿದೆ!

ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ತು ೨೧ ಡಿಸೆಂಬರ್‌ನಿಂದ ದೇಶವ್ಯಾಪಿ ‘ಜನಜಾಗರಣ ಆಂದೋಲನ ಪ್ರಾರಂಭಿಸಲಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳನ್ನು ಎಚ್ಚರಿಸಲಿದ್ದಾರೆ.

ಬಂಗಾಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವವರ ಟ್ವಿಟರ್ ಖಾತೆ ತಾತ್ಕಾಲಿಕ ಬಂದ್

ಬಂಗಾಲದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಟ್ವಿಟರ್ ಈ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ‘ಸ್ಟೋರೀಸ್ ಆಫ್ ಬಂಗಾಲಿ ಹಿಂದೂಸ್’ ಹೆಸರಿನ ಬಳಕೆದಾರರ ಖಾತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ದೆಹಲಿಯ ಮಾಲಿನ್ಯವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯದಿಂದ ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ೨೪ ತಾಸುಗಳ ಗಡುವು

ಒಂದು ವೇಳೆ ನೀವು ಮಾಲಿನ್ಯವನ್ನು ತಡೆಯಲು ಕ್ರಮ ವಹಿಸದಿದ್ದರೆ ನಾವು ನಾಳೆ ಕಠಿಣ ಕಾರ್ಯಾಚರಣೆ ನಡೆಸುವೆವು. ನಾವು ನಿಮಗೆ ೨೪ ತಾಸುಗಳ ಗಡುವು ನೀಡುತ್ತಿದ್ದೇವೆ. ಈ ಗಡುವಿನೊಳಗೆ ಉಪಾಯ ಹುಡುಕದಿದ್ದರೆ ನಾವು ಹೆಜ್ಜೆಯನ್ನಿಡುವೆವು ಎಂದು ಸರ್ವೋಚ್ಚ ನ್ಯಾಯಾಲಯವು ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ.

೨೦೨೧ ರಲ್ಲಿ ದೇಶದಲ್ಲಿ ೫ ಸಾವಿರದ ೫೭೯ ರೈತರ ಆತ್ಮಹತ್ಯೆ

೨೦೨೦ ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ೫ ಸಾವಿರದ ೫೭೯ ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಕೆಂದ್ರಿಯ ಕೃಷಿ ಸಚಿವ ನರೇಂದ್ರ ತೋಮರ ಇವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು.

ಚಿಕಿತ್ಸೆಯ ಸಮಯದಲ್ಲಿ ರೋಗಿ ಮೃತಪಟ್ಟರೆ ವೈದ್ಯರನ್ನು ತಪ್ಪಿತಸ್ಥ ಎಂದು ತಿಳಿಯಲಾಗದು ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಚಿಕಿತ್ಸೆಯ ಸಮಯದಲ್ಲಿ ರೋಗಿಯು ಮೃತಪಟ್ಟರೆ ಅದಕ್ಕಾಗಿ ವೈದ್ಯರನ್ನು ತಪ್ಪಿತಸ್ಥರು ಎಂದು ಹೇಳಲಾಗದು, ಎಂಬ ಮಹತ್ವಪೂರ್ಣ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ‘ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ಅವನ ಆಯುಷ್ಯದ ಬಗ್ಗೆ ಯಾವುದೇ ವೈದ್ಯರು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರು ಕೇವಲ ತಮ್ಮ ವತಿಯಿಂದ ಅತ್ಯುತ್ತಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಬಹುದು’, ಎಂದು ನ್ಯಾಯಾಲಯವು ಈ ಸಮಯದಲ್ಲಿ ಹೇಳಿದೆ. ಮುಂಬಯಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಇದರ ಒಂದು ಪ್ರಕರಣದ ಅರ್ಜಿಯನ್ನು ಆಲಿಸುವಾಗ ‘ರಾಷ್ಟ್ರೀಯ … Read more

‘ಟ್ವಿಟರ್’ನಲ್ಲಿ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡಲು ಸಾಧ್ಯವಿಲ್ಲ ! – ‘ಟ್ವಿಟರ್’ನ ಹೊಸ ನಿಯಮ

‘ಟ್ವಿಟರ್’ ಸಂಸ್ಥೆಯು ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ. ಅದಕ್ಕನುಸಾರ ಈಗ ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ ‘ಶೇರ್’ ಮಾಡಲು ಸಾಧ್ಯವಿಲ್ಲ.

ರೈತರ ಮೃತ್ಯುವಿನ ಯಾವುದೇ ನೋಂದಣಿ ಇಲ್ಲದ ಕಾರಣ ನಷ್ಟ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ! – ಕೇಂದ್ರೀಯ ಕೃಷಿ ಸಚಿವಾಲಯದಿಂದ ಸ್ಪಷ್ಟೀಕರಣ

ಕೃಷಿ ವಿಷಯದ ಕಾನೂನು ಹಿಂಪಡೆಯುವ ಆಂದೋಲನದಲ್ಲಿ ರೈತರ ಮೃತ್ಯುವಿನ ಪ್ರಕರಣದಲ್ಲಿ ಅವರ ಕುಟುಂಬದವರಿಗೆ ನಷ್ಟ ಪರಿಹಾರ ನೀಡಬೇಕು, ಈ ಒತ್ತಾಯದ ಬಗ್ಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಿದೆ.

ಚೀನಾದ ಮಹಾ ಗೋಡೆ ಇದು ಅದರ ಮೂಲಗಡಿ ಹಾಗೂ ಉಳಿದಿರುವ ಚೀನಾವು ಅದರ ವಿಸ್ತಾರವಾದಿ ! – ಡಾ. ಇಂದ್ರೇಶ ಕುಮಾರ, ಪ್ರಚಾರಕರು, ರಾ.ಸ್ವ.ಸಂಘ

ಚೀನಾದ ಮೂಲಗಡಿ ಚೀನಾದ ಮಹಾ ಗೋಡೆಯಾಗಿದೆ. ಅದನ್ನು ಬಿಟ್ಟು ಪ್ರಸ್ತುತ ಚೀನಾದ ಕ್ಷೇತ್ರಫಲ ಏನಿದೆಯೋ ಅದು ಚೀನಾದ ವಿಸ್ತಾರವಾದವಾಗಿದೆ, ಇಂದು ರಾ.ಸ್ವ. ಸಂಘದ ಪ್ರಚಾರಕರಾದ ಡಾ. ಇಂದ್ರೇಶ ಕುಮಾರ ಇವರು ಇಲ್ಲಿಯ ರಾಷ್ಟ್ರೀಯ ಸುರಕ್ಷಾ ಜಾಗರಣ ಮಂಚ್‍ನಿಂದ ಆಯೋಜಿಸಲಾದ ಒಂದು ಸಮ್ಮೇಳನದಲ್ಲಿ ಮಾತನಾಡಿದರು.

ದೆಹಲಿಯಲ್ಲಿ ‘ಪ್ರಾರ್ಥನಾ ಸಭೆ’ಯ ಮೂಲಕ ಆಗುವ ಹಿಂದೂಗಳ ಮತಾಂತರ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿಭಟನೆ

ದ್ವಾರಕಾ ಪ್ರದೇಶದಲ್ಲಿನ ಮಟಿಯಾಲಾ ಗ್ರಾಮದಲ್ಲಿನ ಒಂದು ಗೋದಾಮ್‍ನನ್ನು ಪ್ರಾರ್ಥನಾ ಸ್ಥಳವನ್ನಾಗಿಸಿ ಅಲ್ಲಿ ಕ್ರೈಸ್ತ ಮಿಶನರಿಗಳು `ಪ್ರಾರ್ಥನಾ ಸಭೆ’ಯ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಮಾಹಿತಿಯು ಹಿಂದುತ್ವನಿಷ್ಠ ಸಂಘಟನೆಗಳು ಸಿಕ್ಕಿದ ನಂತರ ಇಲ್ಲಿ ಆಂದೋಲನ ಮಾಡಿದರು.

ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದು

ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !