ಮಹಂತ ಯತಿ ನರಸಿಂಹಾನಂದ ಸರಸ್ವತಿಯವರ ಹತ್ಯೆಯ ಸಂಚು ರೂಪಿಸಿದ ಕಾಶ್ಮೀರಿ ಮತಾಂಧನ ಬಂಧನ

ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್‍ನ ಡಾಸನಾದಲ್ಲಿನ ದೇವಸ್ಥಾನವೊಂದರಲ್ಲಿ ಮಹಂತ ಯತಿ ನರಸಿಂಹಾನಂದ ಸರಸ್ವತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಡಾರ್ ಅಲಿಯಾಸ್ ಜಹಾಂಗೀರ್ ಅವರನ್ನು ಒಂದು ಹೋಟೆಲ್‍ನಿಂದ ಬಂಧಿಸಿದ್ದಾರೆ.

ಚೀನಾದಲ್ಲಿ ಲಿಕ್ವಿಡ್ ಆಕ್ಸಿಜನ್ ಇಲ್ಲವೆಂದು ಈಗ ಭಾರತದಿಂದ ಕೇಳುತ್ತಿರುವ ನೇಪಾಳ !

ಭಾರತದಂತೆಯೇ ನೇಪಾಳದಲ್ಲಿಯೂ ಕೊರೊನಾ ಕೋಲಾಹಲವೆಬ್ಬಿಸಿದೆ. ಪ್ರತಿದಿನ ಸಾವಿರಾರು ಜನರು ಕೊರೊನಾದ ಸೋಂಕಿಗೆ ಒಳಗಾಗುತ್ತಿದ್ದು, ನೂರಾರು ಜನರು ಸಾಯುತ್ತಿದ್ದಾರೆ. ಅಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಅಂತಹ ಸಮಯದಲ್ಲಿ, ನೇಪಾಳವು ಭಾರತದ ಬಳಿ ಸಹಾಯದ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ.

ಕೊರೋನಾ ಪೀಡಿತ ತನ್ನ ತಂದೆಗಾಗಿ ಆಮ್ಲಜನಕ ಸಿಲಿಂಡರ್ ಹುಡುಕುತಿದ್ದ ಹುಡುಗಿಗೆ ಮೊತ್ತದ ಬದಲು ಲೈಂಗಿಕ ಸಂಬಂಧದ ಬೇಡಿಕೆ

ಇಂತಹ ಕಾಮುಕರಿಗೆ ಸರಕಾರವು ಜೀವಾವಧಿ ಜೈಲು ಶಿಕ್ಷೆ ವಿಧಿಸಬೇಕು ! ಇಂತಹ ಸಮಯದಲ್ಲಿ ಪೊಲೀಸರು ಸ್ವಃತ ಅಪರಾಧವನ್ನು ನೋಂದಾಯಿಸಿ ಆರೋಪಿಗಳನ್ನು ಏಕೆ ಬಂಧಿಸುವುದಿಲ್ಲ? ಅಥವಾ ಅವರಿಗೆ ಈ ಬಗ್ಗೆ ಏನೂ ಅನಿಸುವುದಿಲ್ಲವೇ ?

ನಟಿ ಪ್ರಿಯಾಂಕಾ ಚೋಪ್ರಾ ಧರಿಸಿರುವ ಜಾಕೆಟ್‌ನ ಹಿಂಭಾಗದಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರ

ನಟಿ ಪ್ರಿಯಾಂಕಾ ಚೋಪ್ರಾ ಅವರ ಒಂದು ಛಾಯಾಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಧರಿಸಿರುವ ಜಾಕೆಟ್‌ನ ಹಿಂಭಾಗದಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರವಿದೆ. ಆದ್ದರಿಂದ ಅವರನ್ನು ಸಾಮಾಜಿಕ ಮಾಧ್ಯಮದಿಂದ ಟೀಕಿಸಲಾಗುತ್ತಿದೆ.

‘ಡಿ.ಆರ್.ಡಿ.ಒ.’ನ ‘೨ ಡಿಯೋಕ್ಸಿ-ಡಿ-ಗ್ಲೂಕೋಸ್ (೨-ಡಿಜಿ) ಈ ಕೊರೋನಾ ಪ್ರತಿರೋಧಕ ಔಷಧಿಗೆ ಒಪ್ಪಿಗೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (‘ಡಿ.ಆರ್.ಡಿ.ಒ.’ವು) ಅಭಿವೃದ್ಧಿಪಡಿಸಿದ ಕೊರೊನಾ ಪ್ರತಿರೋಧಕ ‘೨ ಡಿಯೋಕ್ಸಿ-ಡಿ-ಗ್ಲೂಕೋಸ್’ (೨-ಡಿಜಿ) ಅನ್ನು ಈ ಔಷಧಿಯನ್ನು ಔಷಧ ಮಹಾನಿಯಂತ್ರಕರು ತುರ್ತು ಬಳಕೆಗಾಗಿ ಅನುಮೋದಿಸಿದ್ದಾರೆ.

ಮದ್ರಾಸ್ ಉಚ್ಚನ್ಯಾಯಾಲಯ ಮತ್ತು ಚುನಾವಣಾ ಆಯೋಗದ ನಡುವಿನ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು

ದೇಶದಲ್ಲಿ ಇತ್ತೀಚೆಗೆ ನಡೆದ ಐದು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು ಚುನಾವಣಾ ಆಯೋಗವನ್ನು ಹೊಣೆಗಾರರನ್ನಾಗಿ ಮಾಡಿ, ‘ಕೊಲೆಯ ಅಪರಾಧವನ್ನು ನೋಂದಾಯಿಸಬೇಕು’, ಎಂಬ ಶಬ್ದಗಳಲ್ಲಿ ಹೇಳಿತ್ತು.

‘ಗಾಯತ್ರಿ ಮಂತ್ರದಿಂದ ಕೊರೋನಾವನ್ನು ಗುಣಪಡಿಸಬಹುದೇ?’ ಕುರಿತು ಸಂಶೋಧನೆ ನಡೆಯಲಿದೆ !

ಕೇಂದ್ರ ವಿಜ್ಞಾನ ಸಚಿವಾಲಯವು ಗಾಯತ್ರಿ ಮಂತ್ರದಿಂದ ಕೊರೋನಾವನ್ನು ಗುಣಪಡಿಸಬಹುದೇ ? ಈ ಬಗ್ಗೆ ಸಂಶೋಧನೆಯನ್ನು ಮಾಡಲು ಹೃಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ೩ ಲಕ್ಷ ರೂಪಾಯಿ ನೀಡಿದೆ.

ಕೊರೋನಾ ವಿಪತ್ತಿನೊಂದಿಗೆ ಹೋರಾಡಲು ಟಾಟಾ ಸಮೂಹವು ೨೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ

ಟಾಟಾ ಟ್ರಸ್ಟ್​ ನ ಅಧ್ಯಕ್ಷ ರತನ ಟಾಟಾ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ನೇತೃತ್ವದಲ್ಲಿ, ಟಾಟಾ ಗ್ರೂಪ್ ‘ನೋ ಲಿಮೀಟ'(ಮಿತಿಯಿಲ್ಲದ) ಸಹಾಯಕ್ಕಾಗಿ ಯೋಜನೆಯನ್ನು ತಂದಿದೆ. ಟಾಟಾ ಸಮೂಹವು ಈ ಯೋಜನೆಗಾಗಿ ೨೦೦೦ ಕೋಟಿ ರೂಪಾಯಿ ಖರ್ಚು ಮಾಡಲಿದೆ.

ಮಾಧ್ಯಮಗಳ ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ !

ವಿಚಾರಣೆಯ ವೇಳೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಾಧ್ಯಮಗಳು ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಕಪಾಳಮೋಕ್ಷ ಮಾಡಿದೆ.

ದೇಶದಲ್ಲಿ ಕೂಡಲೇ ಸಂಚಾರ ನಿಷೇಧ ಜಾರಿಗೆ ತನ್ನಿ !

ಕೊರೋನಾ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುತ್ತದೆ. ಇಂತಹ ಸಮಯದಲ್ಲಿ ನಿಷೇಧವನ್ನು ಹೇರುವ ಮೂಲಕ ಸೋಂಕಿನ ಸರಪಳಿಯನ್ನು ಮುರಿಯುವುದು ಅತ್ಯಂತ ಯೋಗ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.