ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ
(ಟಿಪ್ಪಣಿ `ಪ್ರಾರ್ಥನಾ ಸಭೆ’ ಎಂದರೆ ಪಾದ್ರಿಗಳು ಕಾಯಿಲೆ ಇರುವವರಿಗೆ ಪ್ರಾರ್ಥನೆಯಿಂದ ಚಿಕಿತ್ಸೆ ಮಾಡಿ ಅವರನ್ನು ಕಪಟವಾಗಿ ಗುಣಮುಖ ಮಾಡುವ ಸೋಗು)
ನವ ದೆಹಲಿ – ಇಲ್ಲಿಯ ದ್ವಾರಕಾ ಪ್ರದೇಶದಲ್ಲಿನ ಮಟಿಯಾಲಾ ಗ್ರಾಮದಲ್ಲಿನ ಒಂದು ಗೋದಾಮ್‍ನನ್ನು ಪ್ರಾರ್ಥನಾ ಸ್ಥಳವನ್ನಾಗಿಸಿ ಅಲ್ಲಿ ಕ್ರೈಸ್ತ ಮಿಶನರಿಗಳು `ಪ್ರಾರ್ಥನಾ ಸಭೆ’ಯ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಮಾಹಿತಿಯು ಹಿಂದುತ್ವನಿಷ್ಠ ಸಂಘಟನೆಗಳು ಸಿಕ್ಕಿದ ನಂತರ ಇಲ್ಲಿ ಆಂದೋಲನ ಮಾಡಿದರು. ಜೊತೆಗೆ ಇಲ್ಲಿ ಹನುಮಾನ ಚಾಲೀಸಾದ ಪಠಣ ಮಾಡಿದರು. ಈ ಆಂದೋಲನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಹಿಂದೂ ಜನಜಾಗೃತಿ ಸಮಿತಿ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದರು. ಆಂದೋಲನದಿಂದ ಇಲ್ಲಿ ಪ್ರಾರ್ಥನೆಗಾಗಿ ಬಂದಿದ್ದ ಹಿಂದೂಗಳು ಅಲ್ಲಿಂದ ಹೊರಟು ಹೋದರು. ಈ ಪ್ರಾರ್ಥನಾ ಸ್ಥಳದಲ್ಲಿ ಪ್ರಾರ್ಥನಾ ಸಭೆಯ ಮೂಲಕ ಕಾಯಿಲೆ ವಾಸಿ ಮಾಡುವ ನೆಪದಲ್ಲಿ ಹಿಂದೂಗಳ ಮತಾಂತರ ಮಾಡುತ್ತಿದ್ದರು.
ಈ ಗೋದಾಮನ್ನು ಕ್ರೈಸ್ತ ಮಿಶನರಿಗಳು ಪ್ರತಿ ತಿಂಗಳು 3 ಲಕ್ಷ ರೂಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದರು. ಈ ಆಂದೋಲನದ ನಂತರ ಗೊದಾಮಿನ ಮೂಲ ಮಾಲೀಕನು ಮಿಶನರಿಗಳಿಂದ ಗೊದಾಮನ್ನು ವಶಕ್ಕೆ ಪಡೆದು ಕ್ರೈಸ್ತ ಮಿಶನರಿಗಳನ್ನು ಅಲ್ಲಿಂದ ಹೊರಟುಹೋಗಲು ಹೇಳಿದರು.