ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದು

ಚರ್ಚಿಸದೆ ಕಾನೂನು ರದ್ದು, ಮಾಡಿದ್ದರಿಂದ ವಿಪಕ್ಷಗಳಿಂದ ಗಲಾಟೆ !

ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !- ಸಂಪಾದಕರು 

ನವ ದೆಹಲಿ – ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನವು ನವೆಂಬರ್ 29 ರಿಂದ ಆರಂಭವಾಯಿತು. ಕಲಾಪ ಮೊದಲನೇ ದಿನವೇ ಸಂಸತ್ತಿನಲ್ಲಿ ಕೇಂದ್ರ ಸರಕಾರವು ಈ ಮೊದಲು ಸಂಮ್ಮತಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡುವ ಪ್ರಸ್ತಾಪಕ್ಕೆ ಸಮ್ಮತಿಸಲಾಯಿತು; ಆದರೆ ಈ ಪ್ರಸ್ತಾಪವು ಚರ್ಚಿಸದೆ ಸಂಮ್ಮತಿಸಿರುವುದರಿಂದ ವಿರೋಧಕರು ಕೋಲಾಹಲವುಂಟು ಮಾಡಿದರು. ಈ ಕೃಷಿ ಕಾನೂನು ರದ್ದುಪಡಿಸಲು ಕಳೆದ ವರ್ಷದಿಂದ ರೈತರಿಂದ ಆಂದೋಲನ ನಡೆಯುತ್ತಿತ್ತು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಕಾನೂನು ರದ್ದುಪಡಿಸಿರುವ ಘೋಷಣೆ ಮಾಡಿದ್ದರು. ತದನಂತರ ಕೇಂದ್ರೀಯ ಮಂತ್ರಿಮಂಡಲದ ಸಭೆಯಲ್ಲಿ ಇದಕ್ಕೆ ಸಮ್ಮತಿ ನೀಡಲಾಗಿತ್ತು.

ಕಾಂಗ್ರೆಸ್‍ನ ನಾಯಕ ಮತ್ತು ವಕ್ತಾರರಾದ ರಣದೀಪ ಸಿಂಗ ಸುರ್ಜೇವಾಲಾ ಇವರು ಟ್ವೀಟ್ ಮಾಡಿ, ಚರ್ಚಿಸದೆ ಮೂರು ಕಾನೂನು ರದ್ದು ಮಾಡಲಾಗಿದೆ. ಏನಾದರೂ ಚರ್ಚೆ ನಡೆದಿದ್ದರೆ ಅದಕ್ಕೆ ಉತ್ತರ ನೀಡಬೇಕಾಗುತ್ತಿತ್ತು’ ಎಂದು ಹೇಳಿದರು.