ಭಾರತೀಯ ಸೇನೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ‘ಇಫ್ತಾರ ಕೂಟ’ ಆಯೋಜನೆ

ಇಫ್ತಾರ ಕೂಟದ (ಔತಣ ಕೂಟ) ಕುರಿತು ಭಾರತೀಯ ಸೇನೆಯು ಟ್ವೀಟ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಸೇನೆಯು ಟ್ವೀಟನ್ನು ಅಳಿಸಬೇಕಾಯಿತು.

ಸಿ.ಬಿ.ಎಸ್.ಇ ಪಠ್ಯಕ್ರಮದಿಂದ ಇಸ್ಲಾಮಿ ಸಾಮ್ರಾಜ್ಯ, ಶೀತಲ ಸಮರ ಮುಂತಾದ ಪಾಠಗಳು ಕಣ್ಮರೆಯಾಗಲಿವೆ

ಕೇಂದ್ರ ಮಾಧ್ಯಮಿಕ ಶಿಕ್ಷಣ ಸಮಿತಿ (ಸಿ.ಬಿ.ಎಸ್.ಸಿ) ೧೧ ನೇ ತರಗತಿ ಮತ್ತು ೧೨ ನೇ ತರಗತಿಯ ಇತಿಹಾಸ ಮತ್ತು ರಾಜನೀತಿಯ ವಿಜ್ಞಾನ ಈ ಪುಸ್ತಕದಿಂದ ಅಲಿಪ್ತತೆ ಆಂದೋಲನ, ಶೀತಲ ಸಮರ, ಆಫ್ರಿಕಾ ಮತ್ತು ಏಶಿಯಾ ಖಂಡಗಳಲ್ಲಿ ಇಸ್ಲಾಮಿ ಸಾಮ್ರಾಜ್ಯದ ಉದಯ, ಮೊಘಲರ ಇತಿಹಾಸ, ಉದ್ಯೋಗಿಕ ಕ್ರಾಂತಿ ಈ ಸಂದರ್ಭದಲ್ಲಿರುವ ಪಾಠಗಳನ್ನು ತೆಗೆದುಹಾಕಿದೆ.

ನ್ಯಾಯ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಕಾಯಂ ಇರಿಸಲು ಆವಾಹನೆ ! – ಮುಖ್ಯ ನ್ಯಾಯಮೂರ್ತಿ

ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಅನೇಕ ಸೂತ್ರಗಳು ನಾನು ಮಂಡಿಸುತ್ತಾ ಬಂದಿದ್ದೇನೆ. ಪ್ರಸ್ತುತ ನ್ಯಾಯ ವ್ಯವಸ್ಥೆಯ ಸಹಿತ ಎಲ್ಲಾ ಸಂಸ್ಥೆಗಳ ಮುಂದೆ ಇರುವ ಮುಖ್ಯ ಸಮಸ್ಯೆಯೆಂದರೆ ಜನರ ಮನಸ್ಸಿನಲ್ಲಿ ಅದರ ಬಗ್ಗೆ ಇರುವ ವಿಶ್ವಾಸ ಕಾಯಂ ಉಳಿಸುವುದು, ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣಾ ಅವರು ಪ್ರತಿಪಾದಿಸಿದರು.

ಇನ್ನು ಮುಂದೆ ಪಾಕಿಸ್ತಾನದಲ್ಲಿ ಪಡೆದಿರುವ ಶಿಕ್ಷಣಕ್ಕೆ ಭಾರತದಲ್ಲಿ ಬೆಲೆ ಇರುವುದಿಲ್ಲ !

ಪಾಕಿಸ್ತಾನದ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಭಾರತೀಯ ಹಾಗೂ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉಚ್ಚ ಶಿಕ್ಷಣ ಮತ್ತು ಕೆಲಸದ ಅವಕಾಶಕ್ಕಾಗಿ ಯೋಗ್ಯರೆಂದು ಪರಿಗಣಿಸಲಾಗುವುದಿಲ್ಲ, ಎಂದು ವಿದ್ಯಾಪೀಠ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತೀಯ ತಂತ್ರ ಶಿಕ್ಷಣ ಪರಿಷತ್ (ಎಐಸಿಟಿಇ) ಇವರು ಸ್ಪಷ್ಟಪಡಿಸಿದ್ದಾರೆ.

ಅಮೇರಿಕಾ ಕಾಂಗ್ರೆಸ ಸದಸ್ಯರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸವನ್ನು ನಿಶೇಧಿಸಿದ ಭಾರತ

ನವ ದೆಹಲಿ – ಅಮೇರಿಕಾದ ಕಾಂಗ್ರೆಸನ ಮಹಿಳಾ ಸದಸ್ಯರಾದ ಇಲ್ಹನ ಒಮರರವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸ ಕೈಗೊಂಡಿದ್ದು ಭಾರತವು ಅದನ್ನು ನಿಷೇಧಿಸಿದೆ. ‘ಇದರಿಂದ ಒಮರವರ ಸಂಕುಚಿತ ಮಾನಸಿಕತೆ ಕಂಡು ಬರುತ್ತದೆ’, ಎಂದು ಭಾರತವು ಹೇಳಿದೆ. ಭಾರತದ ವಿದೇಶಾಂಗ ಖಾತೆಯ ವಕ್ತಾರರಾದ ಅರಿಂದಮ ಬಾಗಚಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಒಮರರವರ ಪ್ರವಾಸವನ್ನು ಟೀಕಿಸಿದ್ದಾರೆ. On April 21, India condemned the visit of US Congresswoman Ilhan Omar to Pakistan-occupied-Kashmir. Criticizing Omar, MEA spokesperson … Read more

ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು.

ಜಹಾಂಗೀರಪುರಿಯಲ್ಲಿನ ಕಾನೂನುಬಾಹಿರ ಕಟ್ಟಡಕಾಮಗಾರಿಯ ಮೇಲಿನ ಕಾರ್ಯಾಚರಣೆಯ ಮೇಲೆ ತಡೆಯಾಜ್ಞೆ !

ಸರ್ವೋಚ್ಚ ನ್ಯಾಯಾಲಯವು ಇಲ್ಲಿನ ಜಹಾಂಗೀರಪುರಿಯಲ್ಲಿನ ಅನಧೀಕೃತ ಕಟ್ಟಡಕಾಮಗಾರಿಯ ಮೇಲೆ ದೆಹಲಿ ಮಹಾನಗರಪಾಲಿಕೆಯಿಂದ ಮಾಡಲಾದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಏಪ್ರಿಲ್‌ ೨೦ರ ತೀರ್ಪನ್ನು ಮುಂದುವರಿಸಿದೆ. ‘ಕಾನೂನುಬಾಹಿರ ಕಟ್ಟಡಗಳನ್ನು ಬುಲ್ಡೋಜರಗಳಿಂದ ಕೆಡವಲಾಗುತ್ತಿದೆ.

ದೇಶದಿಂದ ೫ ಕೋಟಿ ನುಸುಳುಕೋರರನ್ನು ಹೊರಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ೫ ವರ್ಷಗಳಿಂದ ಬಾಕಿ

೫ ಕೋಟಿ ನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ೨೦೧೭ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ನೋಟಿಸ ಜಾರಿ ಮಾಡಿತ್ತು.

ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ದೊಡ್ಡ ಕಾರ್ಯಾಚರಣೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು.

ಯುನೆಸ್ಕೊದ ಪುರಾತನ ವಾಸ್ತುಗಳ ಸೂಚಿಯಲ್ಲಿ ಭಾರತದ ಕೇವಲ ೪೦ ಸ್ಥಳಗಳು !

‘ಯುನೆಸ್ಕೊ’ವು (ಯುನೈಟೆಡ್‌ ನೇಶನ್ಸ್‌ ಎಜ್ಯುಕೇಶನಲ್‌, ಸಾಯಂಟಿಫಿಕ್‌ ಎಂಡ್‌ ಕಲ್ಚರಲ್‌ ಆರ್ಗನೈಝೇಶನ’) ಜಗತ್ತಿದಾದ್ಯಂತ ಇರುವ ಪುರಾತನ ವಾಸ್ತುಗಳನ್ನು ಹುಡುಕುತ್ತ ೨೦೨೨ರ ಸೂಚಿಯನ್ನು ಘೋಷಿಸಿದೆ. ಇದರಲ್ಲಿ ಭಾರತದ ಕೇವಲ ೪೦ ವಾಸ್ತುಗನ್ನು ಸೇರಿಸಲಾಗಿದೆ.