ಯುನೆಸ್ಕೊದ ಪುರಾತನ ವಾಸ್ತುಗಳ ಸೂಚಿಯಲ್ಲಿ ಭಾರತದ ಕೇವಲ ೪೦ ಸ್ಥಳಗಳು !

ನವದೆಹಲಿ – ‘ಯುನೆಸ್ಕೊ’ವು (ಯುನೈಟೆಡ್‌ ನೇಶನ್ಸ್‌ ಎಜ್ಯುಕೇಶನಲ್‌, ಸಾಯಂಟಿಫಿಕ್‌ ಎಂಡ್‌ ಕಲ್ಚರಲ್‌ ಆರ್ಗನೈಝೇಶನ’) ಜಗತ್ತಿದಾದ್ಯಂತ ಇರುವ ಪುರಾತನ ವಾಸ್ತುಗಳನ್ನು ಹುಡುಕುತ್ತ ೨೦೨೨ರ ಸೂಚಿಯನ್ನು ಘೋಷಿಸಿದೆ. ಇದರಲ್ಲಿ ಭಾರತದ ಕೇವಲ ೪೦ ವಾಸ್ತುಗನ್ನು ಸೇರಿಸಲಾಗಿದೆ. ಇವುಗಳಲ್ಲಿ ೩೨ ಸಾಂಸ್ಕೃತಿಕ, ೭ ನೈಸರ್ಗಿಕ ಮತ್ತು ೧ ಮಿಶ್ರ ಸ್ವರೂಪದ ಜಾಗಗಳಾಗಿವೆ. ಅತ್ಯಂತ ಹೆಚ್ಚು ಅಂದರೆ ೫೮ ಪುರಾತನ ವಾಸ್ತುಗಳು ಇಟಲಿಯಲ್ಲಿ ಇರುವುದಾಗಿ ಹೇಳಲಾಗಿದೆ. ಚೀನಾದಲ್ಲಿ ೫೬, ಜರ್ಮನಿಯಲ್ಲಿ ೫೧, ಫ್ರಾನ್ಸ್‌ ಮತ್ತು ಸ್ಪೇನ್‌ ಈ ಎರಡೂ ದೇಶಗಳಲ್ಲಿ ತಲಾ ೪೯ ವಾಸ್ತುಗಳಿರುವುದಾಗಿ ಹೇಳಲಾಗಿದೆ. ಯುನೆಸ್ಕೋದ ಜಾಗತಿಕ ಪುರಾತನ ಸಮಿತಿಯ ೪೪ನೇ ಸಭೆಯು ಚೀನಾದಲ್ಲಿ ನಡೆಯಿತು.

ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದ ಕೇವಲ ೪೦ ವಾಸ್ತುಗಳ ಸೂಚಿಯನ್ನು ಪ್ರಸಿದ್ಧಗೊಳಿಸುವ ಯುನೆಸ್ಕೊಗೆ ಪುರಾತನ ವಾಸ್ತುಗಳು ಕಾಣಿಸಿದವೇ

(ಫೋಟೋ ಮೇಲೆ ಕ್ಲಿಕ್ ಮಾಡಿ)

ಹಿಂದೂ ಧರ್ಮದ ಇತಿಹಾಸವು ಲಕ್ಷಾಂತರ ವರ್ಷಗಳದ್ದಾಗಿದೆ. ಆದುದರಿಂದ ಈ ಇತಿಹಾಸದ ಜೀವಂತ ಸಾಕ್ಷಿದಾರರಾಗಿರುವ ಸಾವಿರಾರು ವಾಸ್ತುಗಳು ಭಾರತದಲ್ಲಿ ಅಸ್ತಿತ್ವದಲ್ಲಿವೆ; ಆದರೆ ದುರ್ದೈವದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ದೇಶಪೂರ್ವಕವಾಗಿ ಭಾರತದ ಈ ವೈಭವವನ್ನು ದುರ್ಲಕ್ಷಿಸುತ್ತ ಕೇವಲ ಎರಡರಿಂದ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಪಾಶ್ಚಾತ್ಯ ದೇಶಗಳಲ್ಲಿ ಯುನೆಸ್ಕೊಗೆ ಹೆಚ್ಚಿನ ‘ಪುರಾತನ’ ವಾಸ್ತುಗಳು ಕಂಡುಬರುತ್ತಿವೆ.

ಸಂಪಾದಕೀಯ ನಿಲುವು

ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದ ಕೇವಲ ೪೦ ವಾಸ್ತುಗಳ ಸೂಚಿಯನ್ನು ಪ್ರಸಿದ್ಧಗೊಳಿಸುವ ಯುನೆಸ್ಕೊಗೆ ಪುರಾತನ ವಾಸ್ತುಗಳನ್ನು ಗುರುತಿಸಲು ಬರುತ್ತದೆಯೇ ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ !