ನ್ಯಾಯ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಕಾಯಂ ಇರಿಸಲು ಆವಾಹನೆ ! – ಮುಖ್ಯ ನ್ಯಾಯಮೂರ್ತಿ

ನವದೆಹಲಿ – ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಅನೇಕ ಸೂತ್ರಗಳು ನಾನು ಮಂಡಿಸುತ್ತಾ ಬಂದಿದ್ದೇನೆ. ಪ್ರಸ್ತುತ ನ್ಯಾಯ ವ್ಯವಸ್ಥೆಯ ಸಹಿತ ಎಲ್ಲಾ ಸಂಸ್ಥೆಗಳ ಮುಂದೆ ಇರುವ ಮುಖ್ಯ ಸಮಸ್ಯೆಯೆಂದರೆ ಜನರ ಮನಸ್ಸಿನಲ್ಲಿ ಅದರ ಬಗ್ಗೆ ಇರುವ ವಿಶ್ವಾಸ ಕಾಯಂ ಉಳಿಸುವುದು, ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣಾ ಅವರು ಪ್ರತಿಪಾದಿಸಿದರು. ಅವರು ತಮಿಳುನಾಡಿನಲ್ಲಿ ನ್ಯಾಯ ವ್ಯವಸ್ಥೆಯ ಹೊಸ ಕಟ್ಟಡದ ಉದ್ಘಾಟನೆ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ೯ ಅಂತಸ್ತಿನ ಸರಕಾರಿ ಕಟ್ಟಡದ ಭೂಮಿಪೂಜೆ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮುಖ್ಯ ನ್ಯಾಯಮೂರ್ತಿಗಳು ಮಾತು ಮುಂದುವರೆಸುತ್ತಾ ಹೇಳಿದರು,

೧. ತತ್ಕಾಲ ನ್ಯಾಯ ಸಿಗುವುದುಕ್ಕಾಗಿ ನಾವು ಹೋರಾಡಿದರೆ ನಿಜವಾದ ನ್ಯಾಯ ಸಿಗುವುದರ ಮೇಲೆ ವಿಪರೀತ ಪರಿಣಾಮವಾಗುತ್ತದೆ.

೨. ನ್ಯಾಯದಾನದಲ್ಲಿ ಹೆಚ್ಚು ವ್ಯಾಪಕತೆ ತರುವುದು ಮತ್ತು ನ್ಯಾಯ ಪ್ರಕ್ರಿಯೆಯಲ್ಲಿ ಭಾಷೆಯ ಅಡಚಣೆ ದೂರಗೊಳಿಸುವುದು ಇದಕ್ಕೂ ನಾವು ಮಹತ್ವ ನೀಡುತ್ತೇವೆ.

೩. ಕಾನೂನಿನ ರಾಜ್ಯ ಕಾಯಂ ಇರಿಸುವುದು ಹಾಗೂ ಕಾರ್ಯಾಂಗ ಮತ್ತು ವಿಧಿ ಮಂಡಳ ಇವರಿಂದ ನಡೆಯುವ ದಬ್ಬಾಳಿಕೆಯ ಮೇಲೆ ನಿಯಂತ್ರಣ ಇಡುವುದು ಇಂತಹ ದೊಡ್ಡ ಕಾನೂನಾತ್ಮಕ ದಾಯಿತ್ವ ನ್ಯಾಯ ವ್ಯವಸ್ಥೆಗೆ ಒಪ್ಪಿಸಲಾಗಿದೆ.

೪. ಸಾಂವಿಧಾನಿಕ ಮೌಲ್ಯಗಳನ್ನು ಕಾಯಂಗೋಳಿಸುವುದು ಮತ್ತು ಅವನ್ನು ಜಾರಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಇದು ಒಂದು ದೊಡ್ಡ ಜವಾಬ್ದಾರಿ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಪ್ರಮಾಣವಚನ ಮಾಡಿದ ದಿನವೇ ಅದನ್ನು ಆನಂದದಿಂದ ಸ್ವೀಕರಿಸಿದ್ದೇವೆ. ಆದ್ದರಿಂದಲೇ ನ್ಯಾಯ ಸಂಸ್ಥೆಗಳನ್ನು ಶಕ್ತಿಶಾಲಿಯಾಗಿ ಮಾಡುವುದಕ್ಕೆ ನನ್ನ ಸರ್ವೋಚ್ಚ ಪ್ರಾಧಾನ್ಯತೆ ಇರುವುದು.

೫. ನ್ಯಾಯದಾನ ನೀಡುವುದು ಇದು ಕೇವಲ ಸಂವಿಧಾನಬದ್ಧ ಕರ್ತವ್ಯವಾಗಿರದೆ ಸಾಮಾಜಿಕ ಕರ್ತವ್ಯವಾಗಿದೆ.

೬. ನ್ಯಾಯದ ಪ್ರಕ್ರಿಯೆ ಮತ್ತು ಅದರ ಪ್ರಕರಣದ ಬಗ್ಗೆ ನಡೆಯುವ ಚಟುವಟಿಕೆಗಳು ಇದು ಕಕ್ಷಿದಾರರಿಗೆ ತಿಳಿಯಲೇಬೇಕು. ಯಾವುದಾದರೂ ವಿವಾಹದಲ್ಲಿ ಪಠಿಸಲಾಗುವ ಅರ್ಥವಾಗದ ಮಂತ್ರದಂತೆ ಅದು ಆಗಬಾರದು.