ದೇಶದಿಂದ ೫ ಕೋಟಿ ನುಸುಳುಕೋರರನ್ನು ಹೊರಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ೫ ವರ್ಷಗಳಿಂದ ಬಾಕಿ

ಅರ್ಜಿಯ ಬಗ್ಗೆ ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮೌನ !

ನವ ದೆಹಲಿ – ೫ ಕೋಟಿ ನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ೨೦೧೭ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ನೋಟಿಸ ಜಾರಿ ಮಾಡಿತ್ತು. ಆದರೆ ಇದುವರೆಗೂ ಉತ್ತರ ಬಂದಿಲ್ಲ. ಇದು ಕಠೋರವಾಗಿದ್ದರೂ ನೂರಕ್ಕೆ ನೂರು ಸತ್ಯ ಎಂದು ವಕೀಲ ಶ್ರೀ. ಅಶ್ವಿನಿ ಉಪಾಧ್ಯಾಯ ಟ್ವೀಟ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

  • ದೇಶದಲ್ಲಿ ಕೋಟಿಗಟ್ಟಲೆ ನುಸುಳುಕೋರರನ್ನು ದೇಶದಿಂದ ಹೊರ ಹಾಕುವಂತೆ ಮನವಿ ಸಲ್ಲಿಸಬೇಕಾಗಿರುವುದು ದೇಶಕ್ಕೆ ನಾಚಿಕೆಗೇಡಿನ ಸಂಗತಿ!
  • ಸುಪ್ರೀಂ ಕೋರ್ಟ್ ಆಡಳಿತಕ್ಕೆ ನೋಟಿಸ ಜಾರಿ ಮಾಡಿದ್ದರೂ ಉತ್ತರ ನೀಡದಿರುವುದು ಗಂಭೀರವಾಗಿದೆ. ಇದು ಈ ಅರ್ಜಿಯ ಸಂದರ್ಭದಲ್ಲಿ ಮಾತ್ರವಲ್ಲ ಇತರ ಹಲವು ಅರ್ಜಿಗಳ ಸಂದರ್ಭದಲ್ಲಿಯೂ ಸ್ಪಷ್ಟವಾಗಿದೆ. ಈಗ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ!
  • ರಾಷ್ಟ್ರೀಯ ಭದ್ರತೆಯಂತಹ ಸೂಕ್ಷ್ಮ ವಿಷಯದ ಬಗ್ಗೆ ಆಡಳಿತದ ಮೌನ ಸಮಂಜಸವಲ್ಲ. ಇಂತಹ ಪ್ರಶ್ನೆಗಳನ್ನು ವರ್ಷಗಟ್ಟಲೆ ನೆನೆಗುದಿಗಿಡುವುದರಿಂದ ಜನಸಾಮಾನ್ಯರ ಪ್ರಶ್ನೆಗಳಿಗೆ ಎಂದಾದರೂ ಸಕಾಲದಲ್ಲಿ ನ್ಯಾಯ ಸಿಕ್ಕಿದೆಯಾ? ಹೀಗೊಂದು ಪ್ರಶ್ನೆ ಮೂಡುತ್ತದೆ!