ಇನ್ನು ಮುಂದೆ ಪಾಕಿಸ್ತಾನದಲ್ಲಿ ಪಡೆದಿರುವ ಶಿಕ್ಷಣಕ್ಕೆ ಭಾರತದಲ್ಲಿ ಬೆಲೆ ಇರುವುದಿಲ್ಲ !

ಪಾಕಿಸ್ತಾನದ ಉಚ್ಚ ಶಿಕ್ಷಣ ಅಥವಾ ನೌಕರಿಯನ್ನು ಪರಿಗಣಿಸಲಾಗುವುದಿಲ್ಲ !

ನವದೆಹಲಿ – ಪಾಕಿಸ್ತಾನದ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಭಾರತೀಯ ಹಾಗೂ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉಚ್ಚ ಶಿಕ್ಷಣ ಮತ್ತು ಕೆಲಸದ ಅವಕಾಶಕ್ಕಾಗಿ ಯೋಗ್ಯರೆಂದು ಪರಿಗಣಿಸಲಾಗುವುದಿಲ್ಲ, ಎಂದು ವಿದ್ಯಾಪೀಠ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತೀಯ ತಂತ್ರ ಶಿಕ್ಷಣ ಪರಿಷತ್ (ಎಐಸಿಟಿಇ) ಇವರು ಸ್ಪಷ್ಟಪಡಿಸಿದ್ದಾರೆ.

ಚೀನಾದಲ್ಲಿ ವಿದ್ಯಾರ್ಥಿಗಳಿಂದ ಕೇವಲ ಆನ್ಲೈನ್ ಪದ್ಧತಿ ಇಂದ ಪೂರ್ಣ ಮಾಡಿರುವ ಪದವಿ ಭಾರತದಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಯುಜಿಸಿ ಮತ್ತು ಎಐಸಿಟಿಇ ಕೆಲವು ದಿನಗಳ ಮೊದಲೇ ಘೋಷಿಸಿದ್ದರು. ಅದರ ನಂತರ ಈಗ ಪಾಕಿಸ್ತಾನದಲ್ಲಿ ಎಲ್ಲಾ ಅಭ್ಯಾಸ ಕ್ರಮಗಳ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡುತ್ತಾ ಇವೆರಡೂ ಸಂಸ್ಥೆಗಳು ಸಂಯುಕ್ತ ಸುತ್ತೋಲೆಗಳ ಮೂಲಕ ಇದನ್ನು ತಿಳಿಸಿವೆ.

ಪಾಕಿಸ್ತಾನದಿಂದ ಸ್ಥಳಾಂತರಗೊಂಡ ನಾಗರಿಕರಿಗಾಗಿ ಇರುವುದು ಈ ಷರತ್ತು !

ಸ್ಥಳಾಂತರಿತ ನಾಗರಿಕರು ಮತ್ತು ಅವರ ಮಕ್ಕಳು ಪಾಕಿಸ್ತಾನದ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದಿದ್ದರೂ ಮತ್ತು ಅವರಿಗೆ ಭಾರತದಿಂದ ನಾಗರಿಕತ್ವ ನೀಡಿದ್ದರು ಕೇಂದ್ರ ಗೃಹ ಸಚಿವಾಲಯದಿಂದ ಸುರಕ್ಷಿತತೆಯ ಸಂದರ್ಭದಲ್ಲಿ ಷರತ್ತುಗಳು ಪೂರ್ಣ ಮಾಡಿದ ನಂತರ ಅವರನ್ನು ಭಾರತದಲ್ಲಿ ಕೆಲಸಕ್ಕೆ ಯೋಗ್ಯರೆಂದು ಪರಿಗಣಿಸಲಾಗುವುದು ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿದೆ.