ಭಾರತೀಯ ಸೇನೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ‘ಇಫ್ತಾರ ಕೂಟ’ ಆಯೋಜನೆ

  • ಸೇನೆಯು ಟ್ವೀಟ್ ಮಾಡಿ ಮಾಹಿತಿ ನೀಡಿದರು !

  • ವಿರೋಧದ ಬಳಿಕ ಟ್ವೀಟ ತೆಗೆದ ಸೇನೆ !

ನವದೆಹಲಿ – ಇಫ್ತಾರ ಕೂಟದ (ಔತಣ ಕೂಟ) ಕುರಿತು ಭಾರತೀಯ ಸೇನೆಯು ಟ್ವೀಟ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಸೇನೆಯು ಟ್ವೀಟನ್ನು ಅಳಿಸಬೇಕಾಯಿತು.

೧. ಜಮ್ಮು ಮತ್ತು ಕಾಶ್ಮೀರದಲ್ಲಿಯ ಡೋಡಾ ಜಿಲ್ಲೆಯಲ್ಲಿ ಸೇನೆ ಇಫ್ತಾರದ ಔತಣ ಏರ್ಪಡಿಸಿತ್ತು. ಸೇನೆಯು ಈ ಮಾಹಿತಿಯನ್ನು ಟ್ವೀಟ ಮಾಡಿ ಅದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಿತ್ತು. ಸೈನ್ಯವು ಟ್ವೀಟ್‌ನಲ್ಲಿ ‘ಜಾತ್ಯತೀತತೆಯ ಸಮಪ್ರದಾಯವನ್ನು ಜೀವಂತವಾಗಿರಿಸಿಕೊಂಡು ಭಾರತೀಯ ಸೇನೆಯು ಡೋಡಾ ಜಿಲ್ಲೆಯ ಅರ್ನೊರಾದಲ್ಲಿ ಇಫ್ತಾರದ ಆಯೋಜನೆ ಮಾಡಿತ್ತು.’

೨. ಈ ಟ್ವೀಟನ್ನು ಟೀಕಿಸುತ್ತಾ ಒಬ್ಬರು ಟ್ವೀಟ ಮಾಡಿ, ‘ಈ ರೋಗವು ಇಗ ಸೈನ್ಯದಲ್ಲಿಯೂ ಹರಡಿರುವುದು ಖೇದಕರ.’ ಎಂದು ಹೇಳಿದರು.

೩. ಈ ವಿಷಯವಾಗಿ ಸೇನೆಯಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತ ಮಾಡಿಲ್ಲ; ಮಾತ್ರ ಒಬ್ಬ ಸೇನಾಧಿಕಾರಿಯು ಹೆಸರು ಹೇಳದಿರುವ ಷರತ್ತಿನೊಂದಿಗೆ ಪತ್ರಕರ್ತರಿಗೆ, ಜನತೆಯ ಜೊತೆಗೆ ಒಳ್ಳೆಯ ಸಂಬಂಧ ನಿರ್ಮಾಣ ಮಾಡುವದಕ್ಕಾಗಿ ರಮಝಾನದ ಕಾಲದಲ್ಲಿ ಇಫ್ತಾರದ ಔತಣ ನಿಯಮಿತವಾಗಿ ಆಯೋಜನೆ ಮಾಡಲಾಗುತ್ತದೆ. ಈ ಬಾರಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಡಿಕೆಯಂತೆ ಇಂತಹ ಔತಣವನ್ನು ಆಯೋಜನೆ ಮಾಡಲಾಗಿತ್ತು.