ಸಿ.ಬಿ.ಎಸ್.ಇ ಪಠ್ಯಕ್ರಮದಿಂದ ಇಸ್ಲಾಮಿ ಸಾಮ್ರಾಜ್ಯ, ಶೀತಲ ಸಮರ ಮುಂತಾದ ಪಾಠಗಳು ಕಣ್ಮರೆಯಾಗಲಿವೆ

ಈ ಬದಲಾವಣೆಯನ್ನು ಸ್ವಾಗತಿಸಲೇಬೇಕು, ಆದರೆ ಸಿ.ಬಿ.ಎಸ್.ಸಿ ಇನ್ನು ಮುಂದೆ ಇಸ್ಲಾಮಿ ಆಕ್ರಮಣಕಾರರ ಕ್ರೂರ ಇತಿಹಾಸ ನವಪೀಳಿಗೆಗೆ ಹೇಳುವುದು ಆವಶ್ಯಕವಾಗಿದೆ. ಅದರ ಜೊತೆಗೆ ಹಿಂದೂಗಳ ಗೌರವಶಾಲಿ ಇತಿಹಾಸದ ಪಾಠ ಕಲಿಸಿ ವಾಸ್ತವಿಕ ಇತಿಹಾಸ ತಿಳಿಸುವುದು, ಇದು ಈ ಸಮಯದ ಆವಶ್ಯಕತೆಯಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಇದಕ್ಕಾಗಿ ಪ್ರಯತ್ನ ಮಾಡಬೇಕೆಂದು ಇತಿಹಾಸ ಮತ್ತು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ.

ನವದೆಹಲಿ – ಕೇಂದ್ರ ಮಾಧ್ಯಮಿಕ ಶಿಕ್ಷಣ ಸಮಿತಿ (ಸಿ.ಬಿ.ಎಸ್.ಇ) ೧೧ ನೇ ತರಗತಿ ಮತ್ತು ೧೨ ನೇ ತರಗತಿಯ ಇತಿಹಾಸ ಮತ್ತು ರಾಜನೀತಿಯ ವಿಜ್ಞಾನ ಈ ಪುಸ್ತಕದಿಂದ ಅಲಿಪ್ತತೆ ಆಂದೋಲನ, ಶೀತಲ ಸಮರ, ಆಫ್ರಿಕಾ ಮತ್ತು ಏಶಿಯಾ ಖಂಡಗಳಲ್ಲಿ ಇಸ್ಲಾಮಿ ಸಾಮ್ರಾಜ್ಯದ ಉದಯ, ಮೊಘಲರ ಇತಿಹಾಸ, ಉದ್ಯೋಗಿಕ ಕ್ರಾಂತಿ ಈ ಸಂದರ್ಭದಲ್ಲಿರುವ ಪಾಠಗಳನ್ನು ತೆಗೆದುಹಾಕಿದೆ. ಅದೇ ರೀತಿ ೧೦ ನೇ ತರಗತಿಯ ಪಠ್ಯಕ್ರಮದಿಂದ ಖಾದ್ಯ ಸುರಕ್ಷೆ ಈ ಸಂದರ್ಭದಲ್ಲಿನ ಪಾಠಗಳಲ್ಲಿ ಕೃಷಿಯಲ್ಲಿನ ಜಾಗತೀಕರಣದ ಪ್ರಭಾವ ಈ ವಿಷಯ ತೆಗೆದುಹಾಕಿದೆ. ಧರ್ಮ, ಮತಾಂಧತೆ, ರಾಜಕೀಯ ಮತಾಂಧತೆ, ಜಾತ್ಯಾತೀತ ರಾಜ್ಯ ಈ ಭಾಗದಿಂದ ಫೈಜ್ ಅಹ್ಮದ್ ಫೈಜ್ ಇವರ ೨ ಕವಿತೆಗಳ ಅನುವಾದಿತ ಭಾಗ ತೆಗೆದುಹಾಕಿದೆ. ಸಿ.ಬಿ.ಎಸ್.ಇ. ಯ ಒಟ್ಟು ಪಠ್ಯಕ್ರಮದಿಂದ ಲೋಕತಂತ್ರ ಮತ್ತು ವೈವಿಧ್ಯತೆ ಈ ಭಾಗವು ತೆಗೆದುಹಾಕಲಾಗಿದೆ.

ಈ ವಿಷಯವಾಗಿ ಸಂಬಂಧಿತ ಅಧಿಕಾರಿಗಳು ‘ಪರಿವರ್ತನೆ ಇದು ಪಠ್ಯಕ್ರಮವನ್ನು ಹೆಚ್ಚು ಒಳ್ಳೆಯ ರೀತಿ ತಯಾರಿಸುವ ಭಾಗವಾಗಿದೆ. ಹಾಗೂ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ (ಎನ್ಸಿಇಆರ್ಟಿ) ಇವರ ಶಿಫಾರಸ್ಸಿನ ಪ್ರಕಾರ ಈ ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಹೇಳಿದರು.