ಯುವ ಸಾಧಕರು ಪ್ರತಿಯೊಂದು ಕೃತಿಯನ್ನು ಸಾಧನೆ ಮತ್ತು ಧರ್ಮಾಚರಣೆ ಎಂದು ಮಾಡಲು ಪ್ರಯತ್ನಿಸಬೇಕು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ನಮ್ಮ ಸಾಧನೆಯ ವೇಗವನ್ನು ಹೆಚ್ಚಿಸಿ ಗುರುಕೃಪೆಯನ್ನು ಸಂಪಾದಿಸಬೇಕು. ಇಂದು ಎಷ್ಟೋ ಮಕ್ಕಳು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ನಮ್ಮಲ್ಲಿರುವ ಕೌಶಲ್ಯದ ಉಪಯೋಗವನ್ನು ಸಾಧನೆಗಾಗಿ ನೀಡಬೇಕು.

೨೦೩೮ ರ ವೇಳೆಗೆ ಅಸ್ಸಾಂನಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವರು !

ಅಸ್ಸಾಂನಲ್ಲಿ ಪ್ರಸ್ತುತ ಮುಸಲ್ಮಾನರ ಜನಸಂಖ್ಯೆಯ ಬೆಳವಣಿಗೆಯ ದರವು ಹೀಗೆಯೇ ಮಂದುವರಿದರೆ, ೨೦೩೮ ರ ಹೊತ್ತಿಗೆ ಅಸ್ಸಾಂನಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವರು, ಮುಸಲ್ಮಾನರು ಬಹುಸಂಖ್ಯಾತರಾಗುವರು ಎಂದು ಅಸ್ಸಾಂನಲ್ಲಿ ಬಿಜೆಪಿ ಶಾಸಕ ಮತ್ತು ಪ್ರದೇಶಾಧ್ಯಕ್ಷ ಜಯಂತ ಮಲ್ಲಾ ಬರುವಾ ಇವರು ಆತಂಕ ವ್ಯಕ್ತಪಡಿಸಿದ್ದಾರೆ.

ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ನೇಮಕಗೊಂಡ ಭಾರತೀಯ ಮೂಲದ ಸತ್ಯಾ ನಾಡೆಲ್ಲಾ !

ವಿಶ್ವದ ಸಾಫ್ಟ್‌ವೇರ್ ತಯಾರಿಕಾ ದೈತ್ಯ ‘ಮೈಕ್ರೋಸಾಫ್ಟ್ ಕಾರ್ಪೊರೇಶನ್’ನ ಅಧ್ಯಕ್ಷರಾಗಿ ಭಾರತೀಯ ಮೂಲದ ಸತ್ಯಾ ನಾಡೆಲಾ ಅವರನ್ನು ನೇಮಿಸಲಾಗಿದೆ. ೫೩ ವರ್ಷದ ನಾಡೆಲಾ ಅವರನ್ನು ೨೦೧೪ ರಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಎಂದು ನೇಮಿಸಲಾಗಿತ್ತು.

ಬಿಜೆಪಿಯನ್ನು ವಿರೋಧಿಸಿದರೆ ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಇವುಗಳಿಂದ ೧೦೦ ಕೋಟಿ ರೂಪಾಯಿ ನೀಡುವ ಪ್ರಸ್ತಾವನೆ !

ಶ್ರೀ ರಾಮಮಂದಿರಕ್ಕೆ ೨೦ ಕೋಟಿ ರೂಪಾಯಿಯ ಭೂಮಿ ಖರೀದಿಯ ಪ್ರಕರಣದಿಂದ ಬಿಜೆಪಿ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ವಿರೋಧಿಸಲು ಆಮ್ ಆದಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನಿಂದ ೧೦೦ ಕೋಟಿ ರೂಪಾಯಿಗಳ ಪ್ರಸ್ತಾವನೆ ಬಂದಿತ್ತು

ಕೊರೊನಾ ಕಾಲದಲ್ಲಿ ಭಾರತಕ್ಕೆ ಸಹಾಯ ಮಾಡುವ ಹೆಸರಿನಲ್ಲಿ ಪಾಕಿಸ್ತಾನಿ ಸಂಸ್ಥೆಯಿಂದ ಕೋಟಿಗಟ್ಟಲೆ ರೂಪಾಯಿ ಸಂಗ್ರಹ !

ಈ ಸೇವಾ ಸಂಸ್ಥೆಗಳು ಪಾಕಿಸ್ತಾನದ ಸೈನ್ಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಸೈನ್ಯದ ಹೇಳಿಕೆಗನುಸಾರ, ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಶಂಕಿಸಲಾಗಿದೆ. ಆದ್ದರಿಂದ ಇದೇ ಕೋಟಿಗಟ್ಟಲೆ ರೂಪಾಯಿಗಳನ್ನು ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸುವ ಸಾಧ್ಯತೆಯಿದೆ.

ಭಗವಾನ್ ಶಿವ ಮತ್ತು ಪಾರ್ವತಿ ಅವರ ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಆನ್‍ಲೈನ್ ಮಾರಾಟಕ್ಕಾಗಿ ಇಡುವ ಮೂಲಕ ಫ್ಲಿಪ್‍ಕಾರ್ಟ್’ನಿಂದ ಹಿಂದೂಗಳ ಧಾರ್ಮಿಕ ಭಾವನೆಗಳ ಘೋರ ಅವಮಾನ

ಹಿಂದುದ್ವೇಷಿ ‘ಫ್ಲಿಪ್‍ಕಾರ್ಟ್’ ಇತರ ಧರ್ಮಗಳ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಚಿತ್ರಗಳಿರುವ ಸಂಚಾರವಾಣಿಗಳ ‘ಕವರ್’ ಅನ್ನು ಮಾರಾಟ ಮಾಡುವ ಧೈರ್ಯವನ್ನು ತೋರಿಸಬಹುದೇ ? ಹಿಂದೂಗಳು ತಮ್ಮ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಭಯವನ್ನು ಸೃಷ್ಟಿಸಬೇಕು !

ಪೂಜ್ಯಪಾದ ಸಂತಶ್ರಿ ಅಸಾರಾಮಜಿ ಬಾಪು ಅವರಿಗೆ ಜಾಮೀನು ಏಕೆ ಇಲ್ಲ ?

ವಸಾಯಿ ಸೆಷನ್ಸ್ ನ್ಯಾಯಾಲಯವು ಪುರಿಗೆ ನೀಡಿದ ಜಾಮೀನು ನೀಡಿದಕ್ಕೆ ಪೂಜ್ಯಪಾದ ಸಂತಶ್ರೀ ಅಸಾರಾಮ ಬಾಪು ಅವರ ಭಕ್ತರು ಸಾಮಾಜಿಕ ಮಾಧ್ಯಮಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪರ್ಲ್ ಬಂಧನಕ್ಕೊಳಗಾದ ಕೇವಲ ೧೧ ದಿನಗಳಲ್ಲಿ ಅವರಿಗೆ ಹೇಗೆ ಜಾಮೀನು ಸಿಕ್ಕಿತು ? ಎಂದು ಅವರು ಪ್ರಶ್ನಿಸಿದರು.

ವಿಶಾಖಪಟ್ಟಣಂ (ಆಂಧ್ರಪ್ರದೇಶ) ದಲ್ಲಿ ಪೋಷಕರು ೩೦ ಸಾವಿರ ರೂಪಾಯಿ ಮೌಲ್ಯದ ನಾಯಿಯನ್ನು ತೆಗೆಸಿಕೊಡದೇ ಇದ್ದರಿಂದ ೧೬ ವರ್ಷದ ಬಾಲಕನ ಆತ್ಮಹತ್ಯೆ

ಮಕ್ಕಳಿಗೆ ಬಾಲ್ಯದಿಂದಲೂ ಸಾಧನೆಯನ್ನು ಕಲಿಸದೇ ಇದ್ದುದರಿಂದ, ಅವರು ಇಂತಹ ಅಶಾಶ್ವತ ವಿಷಯಗಳಲ್ಲಿ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ತ್ಯಜಿಸುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ಮೂಲಕ ಮಾನವ ಜನ್ಮದ ಉದ್ದೇಶವನ್ನು ಕಲಿಸಿ ಅವರಿಂದ ಶಾಶ್ವತ ಆನಂದವನ್ನು ನೀಡುವ ಸಾಧನೆಯನ್ನು ಮಾಡಿಸಿಕೊಳ್ಳಲಾಗುವುದು !

ಐ.ಎಂ.ಎ.ನ ಅಧ್ಯಕ್ಷ ಡಾ. ಜಾನ್‍ರೋಜ ಜಯಲಾಲ್ ಅವರ ಮನವಿಯನ್ನು ತಿರಸ್ಕರಿಸಿದ ದೆಹಲಿ ಉಚ್ಚನ್ಯಾಯಾಲಯ

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐ.ಎಂ.ಎ.ನ) ಅಧ್ಯಕ್ಷ ಡಾ. ಜಾನ್‍ರೋಜ ಆಸ್ಟಿನ್ ಜಯಲಾಲ್ ಅವರಿಗೆ ಯಾವುದೇ ಧರ್ಮದ ಪ್ರಚಾರ ಮಾಡಲು ತಮ್ಮ ಸಂಘಟನೆಯ ವೇದಿಕೆಯನ್ನು ಬಳಸದಂತೆ ಕನಿಷ್ಠ ನ್ಯಾಯಾಲಯವು ಇತ್ತಿಚೆಗೆ ಆದೇಶಿಸಿತ್ತು.

ಆದಾಯ ತೆರಿಗೆ ಇಲಾಖೆಯಿಂದ ಪಿ.ಎಫ್.ಐ.ನ ನೋಂದಣಿ ರದ್ದು !

ಆದಾಯ ತೆರಿಗೆ ಇಲಾಖೆಯು ಜಿಹಾದಿ ಸಂಸ್ಥೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.)ದ ನೊಂದಣಿಯನ್ನು ರದ್ದು ಪಡಿಸಿದೆ. ಸೆಕ್ಷನ್ ೧೨ ಅ (೩) ರ ಅಡಿಯಲ್ಲಿ ಒಂದು ಸಂಸ್ಥೆ ಅಥವಾ ಟ್ರಸ್ಟ್ ಕಾರ್ಯನಿರ್ವಹಿಸದಿದ್ದರೆ, ಅದರ ನೋಂದಣಿಯನ್ನು ರದ್ದುಗೊಳಿಸಬಹುದು.