ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ನೇಮಕಗೊಂಡ ಭಾರತೀಯ ಮೂಲದ ಸತ್ಯಾ ನಾಡೆಲ್ಲಾ !

ಸತ್ಯಾ ನಾಡೆಲಾ

ನವ ದೆಹಲಿ – ವಿಶ್ವದ ಸಾಫ್ಟ್‌ವೇರ್ ತಯಾರಿಕಾ ದೈತ್ಯ ‘ಮೈಕ್ರೋಸಾಫ್ಟ್ ಕಾರ್ಪೊರೇಶನ್’ನ ಅಧ್ಯಕ್ಷರಾಗಿ ಭಾರತೀಯ ಮೂಲದ ಸತ್ಯಾ ನಾಡೆಲಾ ಅವರನ್ನು ನೇಮಿಸಲಾಗಿದೆ. ೫೩ ವರ್ಷದ ನಾಡೆಲಾ ಅವರನ್ನು ೨೦೧೪ ರಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಎಂದು ನೇಮಿಸಲಾಗಿತ್ತು. ಸಂಸ್ಥೆಯು ಅವರ ನಾಯಕತ್ವದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದ್ದರಿಂದ ಅವರಿಗೆ ಉಡುಗೊರೆಯೇ ಸಿಕ್ಕಿದೆ. ನಾಡೆಲಾ ಅವರ ಅಧಿಕಾರಾವಧಿಯಲ್ಲಿ, ಮೈಕ್ರೋಸಾಫ್ಟ್‌ನ ಷೇರು ಬೆಲೆ ಏಳು ಪಟ್ಟು ಹೆಚ್ಚಾಗಿದೆ.
ಸತ್ಯಾ ನಾಡೆಲಾ ಭಾಗ್ಯನಗರದಲ್ಲಿ ಜನಿಸಿದರು ಮತ್ತು ಅಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಅವರು ಮಣಿಪಾಲ್ ವಿಶ್ವವಿದ್ಯಾಲಯದಿಂದ ಐಟಿ ಎಂಜಿನಿಯರಿಂಗ್ ಪದವಿ ಪಡೆದರು. ಅದೇರೀತಿ ಅಮೇರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಿಂದ ‘ಮಾಸ್ಟರ ಆಫ್ ಸೈನ್ಸ್’ ಮತ್ತು ಚಿಕಾಗೊ ವಿಶ್ವವಿದ್ಯಾಲಯದಿಂದ ‘ಎಂಬಿಎ’ ಪೂರ್ಣಗೊಳಿಸಿದರು. ೧೯೯೨ ರಲ್ಲಿ ಅವರು ಮೈಕ್ರೋಸಾಫ್ಟ್‌ಗೆ ಸೇರಿದ್ದರು.