‘ಇಡಿ’ನಿಂದ ದೇಶಾದ್ಯಂತ ೨೬ ಸ್ಥಳಗಳಲ್ಲಿ ಪಿ.ಎಫ್.ಐ.ನ ಸ್ಥಳಗಳ ಮೇಲೆ ದಾಳಿ !
ಪಿ.ಎಫ್.ಐ.ಯ ರಾಷ್ಟ್ರ ವಿರೋಧಿ ಮತ್ತು ಧರ್ಮದ್ವೇಷದ ಚಟುವಟಿಕೆಗಳನ್ನು ಗಮನಿಸಿ ಅದರ ಮೇಲೆ ಕೇಂದ್ರ ಸರಕಾರವು ನಿಷೇಧ ಹೇರುವುದು ಅಪೇಕ್ಷಿತವಿದೆ !
ನವ ದೆಹಲಿ – ಆದಾಯ ತೆರಿಗೆ ಇಲಾಖೆಯು ಜಿಹಾದಿ ಸಂಸ್ಥೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.)ದ ನೊಂದಣಿಯನ್ನು ರದ್ದು ಪಡಿಸಿದೆ. ಸೆಕ್ಷನ್ ೧೨ ಅ (೩) ರ ಅಡಿಯಲ್ಲಿ ಒಂದು ಸಂಸ್ಥೆ ಅಥವಾ ಟ್ರಸ್ಟ್ ಕಾರ್ಯನಿರ್ವಹಿಸದಿದ್ದರೆ, ಅದರ ನೋಂದಣಿಯನ್ನು ರದ್ದುಗೊಳಿಸಬಹುದು. ಪೌರತ್ವ ಸುಧಾರಣಾ ಕಾಯ್ದೆಯ ವಿರುದ್ಧ ಕಳೆದ ವರ್ಷ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಪಿ.ಎಫ್.ಐ. ಹಣಕಾಸು ಒದಗಿಸಿದೆ ಎಂದು ಆರೋಪಿಸಲಾಗಿದೆ.
PFI ಸಂಘಟನೆಗೆ ನೀಡಿದ್ದ ಸೌಲಭ್ಯ ರದ್ದು; ಆದಾಯ ತೆರಿಗೆ ಇಲಾಖೆ ಮಹತ್ವದ ನಿರ್ಧಾರ!#IncomeTax #taxbenefits #PFI #Violation #India https://t.co/gXNnjmfuE1
— Asianet Suvarna News (@AsianetNewsSN) June 15, 2021
೧. ಮತ್ತೊಂದೆಡೆ, ಜಾರಿ ನಿರ್ದೇಶನಾಲಯವು (ಇಡಿ) ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡುವಾಗ, ಕೇರಳದಲ್ಲಿ ಭಯೋತ್ಪಾದಕ ಕೇಂದ್ರಗಳನ್ನು ಸ್ಥಾಪಿಸಲು ಪಿ.ಎಫ್.ಐ. ಹಣ ಸಂಗ್ರಹಿಸಿದೆ ಅದನ್ನು ದೇಶದಲ್ಲಿ ಸಾಮಾಜಿಕ ಶಾಂತಿಯನ್ನು ಭಂಗಗೊಳಿಸಲು ಬಳಸಲಾಗುತ್ತಿದೆ. ಪಿ.ಎಫ್.ಐ. ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಬ್ಯಾಂಕ್ ಖಾತೆಗಳ ಪರಿಶೀಲನೆಯ ನಂತರ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದೆ.
೨. ಪಿ.ಎಫ್.ಐ. ಜಿಹಾದಿ ಕೇಂದ್ರಗಳನ್ನು ನಡೆಸಲಾಗುತ್ತಿತ್ತು. ಅಲ್ಲೆಲ್ಲ ತನಿಖಾ ಸಂಸ್ಥೆಗಳು ಜೂನ್ ೧೪ ರಂದು ದಾಳಿ ನಡೆಸಿವೆ. ಈ ಕೇಂದ್ರಗಳು ಕೇರಳದ ಕೊಲ್ಲಂನ ಕಾಡಿನಲ್ಲಿದ್ದವು. ಅಲ್ಲಿ ಡಿಟೊನೆಟರ ಮತ್ತು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ.
೩. ಜೂನ್ ೧೫ ರಂದು ಇ.ಡಿ.ಯು ದೇಶದ ೨೬ ಸ್ಥಳಗಳಲ್ಲಿ ಉತ್ತರ ಪ್ರದೇಶ, ದೆಹಲಿ, ಬಂಗಾಲ, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಲ್ಲಿ ದಾಳಿ ನಡೆಸಿತು. ಇದರಲ್ಲಿ ಪಿ.ಎಫ್.ಐ.ನ ಅಧ್ಯಕ್ಷ ಅಬ್ದುಲ್ ಸಲಾಮನ ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿರುವ ಮನೆಗಳೂ ಒಳಗೊಂಡಿದೆ. ಹಣಕಾಸಿನ ದುರ್ವವ್ಯಹಾರದ ದೃಷ್ಟಿಯಿಂದ ಈ ದಾಳಿಯನ್ನು ನಡೆಸಲಾಗಿದೆ.