೨೦೩೮ ರ ವೇಳೆಗೆ ಅಸ್ಸಾಂನಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವರು !

ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಜಯಂತ ಬರುವಾ ಇವರ ಆತಂಕ

ಹಿಂದೂಗಳು ಇದರ ಜವಾಬ್ದಾರಿಯನ್ನು ಬಿಜೆಪಿಗೆ ನೀಡಿರುವುದರಿಂದ, ಅದು ಜನಸಂಖ್ಯಾ ನಿಯಂತ್ರಣ ಕಾಯ್ದೆ, ಸಮಾನ ನಾಗರಿಕ ಕಾನೂನು, ಮತಾಂತರ ನಿಷೇಧ ಕಾನೂನು ಮುಂತಾದ ಕಾನೂನುಗಳನ್ನು ತಕ್ಷಣ ಅನುಮೋದಿಸುವ ಮೂಲಕ ಅದನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬೇಕು !

ಜಯಂತ ಬರುವಾ

ಗೌಹಟಿ (ಅಸ್ಸಾಂ) – ಅಸ್ಸಾಂನಲ್ಲಿ ಪ್ರಸ್ತುತ ಮುಸಲ್ಮಾನರ ಜನಸಂಖ್ಯೆಯ ಬೆಳವಣಿಗೆಯ ದರವು ಹೀಗೆಯೇ ಮಂದುವರಿದರೆ, ೨೦೩೮ ರ ಹೊತ್ತಿಗೆ ಅಸ್ಸಾಂನಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವರು, ಮುಸಲ್ಮಾನರು ಬಹುಸಂಖ್ಯಾತರಾಗುವರು ಎಂದು ಅಸ್ಸಾಂನಲ್ಲಿ ಬಿಜೆಪಿ ಶಾಸಕ ಮತ್ತು ಪ್ರದೇಶಾಧ್ಯಕ್ಷ ಜಯಂತ ಮಲ್ಲಾ ಬರುವಾ ಇವರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನಸಂಖ್ಯೆಯ ಬಗ್ಗೆ ಬರುವಾ ಮಂಡಿಸಿದ ಅಂಶಗಳು

೧. ೧೯೯೧-೨೦೦೧ ರ ಅವಧಿಯಲ್ಲಿ, ಅಸ್ಸಾಂನಲ್ಲಿ ಹಿಂದೂಗಳ ಜನಸಂಖ್ಯೆಯು ಶೇಕಡಾ ೧೪.೯ ರಷ್ಟು ಹೆಚ್ಚಾಗಿತ್ತು, ಮುಸಲ್ಮಾನರ ಜನಸಂಖ್ಯೆಯು ಶೇಕಡಾ ೨೯.೩ ರಷ್ಟು ಹೆಚ್ಚಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ದಶಕದಲ್ಲಿ ಮುಸಲ್ಮಾನರ ಜನಸಂಖ್ಯೆಯ ಬೆಳವಣಿಗೆಯ ದರವು ಹಿಂದೂಗಳಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು.

೨. ೨೦೦೧-೨೦೧೧ರ ದಶಕದಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡಾ ೧೦.೯ ರಷ್ಟು, ಮುಸಲ್ಮಾನರ ಜನಸಂಖ್ಯೆ ಶೇಕಡಾ ೨೯.೬ ರಷ್ಟು ವೇಗದಿಂದ ಏರಿಕೆಯಾಗಿದೆ. ಇದರರ್ಥ ಈ ಹೆಚ್ಚಳವು ಹಿಂದೂಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ, ಕಳೆದ ದಶಕಕ್ಕಿಂತ ಹಿಂದೂಗಳ ಜನಸಂಖ್ಯೆಯ ಗತಿಯು ಕಡಿಮೆಯಾಗಿದೆ, ಮುಸಲ್ಮಾನರ ಸಂಖ್ಯೆ ಹೆಚ್ಚಾಗಿದೆ.

೩. ಜನಗಣತಿ ವರದಿಯ ಪ್ರಕಾರ, ೧೯೭೧ ರಲ್ಲಿ ಅಸ್ಸಾಂನ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ ೭೧.೫೧ ಮತ್ತು ಮುಸಲ್ಮಾನರು ಶೇಕಡಾ ೨೪.೫೬ ರಷ್ಟಿದ್ದರು; ಆದರೆ, ೨೦೧೧ ರಲ್ಲಿ ಹಿಂದೂಗಳು ಶೇ ೬೧.೪೬ ಮತ್ತು ಮುಸಲ್ಮಾನರು ಶೇ ೩೪.೨೨ ರಷ್ಟಿದ್ದಾರೆ. ಅಂದರೆ, ಹಿಂದೂಗಳ ಜನಸಂಖ್ಯೆಯು ಕಡಿಮೆಯಾಯಿತು ಮತ್ತು ಮುಸಲ್ಮಾನರ ಜನಸಂಖ್ಯೆಯು ಹೆಚ್ಚಾಯಿತು.

೪. ೧೯೭೧ ರಲ್ಲಿ ಅಸ್ಸಾಂನಲ್ಲಿ ಕೇವಲ ಎರಡು ಜಿಲ್ಲೆಗಳು ಮುಸಲ್ಮಾನ ಬಹುಸಂಖ್ಯಾತರಾಗಿದ್ದವು; ಆದರೆ ೨೦೧೧ ರಲ್ಲಿ ಈ ಸಂಖ್ಯೆ ೧೧ ಕ್ಕೆ ಏರಿದೆ.