ಬಿಜೆಪಿಯನ್ನು ವಿರೋಧಿಸಿದರೆ ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಇವುಗಳಿಂದ ೧೦೦ ಕೋಟಿ ರೂಪಾಯಿ ನೀಡುವ ಪ್ರಸ್ತಾವನೆ !

ಶ್ರೀ ರಾಮಮಂದಿರಕ್ಕಾಗಿ ಭೂಮಿ ಖರೀದಿ ಪ್ರಕರಣ

ಅಯೋಧ್ಯೆಯ ತಪಸ್ವಿ ಛಾವಣಿಯ ಮಹಂತ ಪರಮಹಂಸ ದಾಸ್ ಇವರ ಹೇಳಿಕೆ !

ಪೊಲೀಸರು ಈ ಹೇಳಿಕೆಯನ್ನು ಪತ್ತೆ ಹಚ್ಚಿ ಒಂದುವೇಳೆ ಅದು ನಿಜವಾಗಿದ್ದರೆ, ಲಂಚ ನೀಡಲು ಯತ್ನಿಸಿದ್ದಕ್ಕಾಗಿ ಮೂರು ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !

ಅಯೋಧ್ಯೆ (ಉತ್ತರಪ್ರದೇಶ) – ಶ್ರೀ ರಾಮಮಂದಿರಕ್ಕೆ ೨೦ ಕೋಟಿ ರೂಪಾಯಿಯ ಭೂಮಿ ಖರೀದಿಯ ಪ್ರಕರಣದಿಂದ ಬಿಜೆಪಿ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ವಿರೋಧಿಸಲು ಆಮ್ ಆದಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನಿಂದ ೧೦೦ ಕೋಟಿ ರೂಪಾಯಿಗಳ ಪ್ರಸ್ತಾವನೆ ಬಂದಿತ್ತು ಎಂದು ತಪಸ್ವಿ ಛಾವಣಿಯ ಮಹಂತ ಪರಮಹಂಸ ದಾಸ ಇವರು ಆರೋಪಿಸುತ್ತಿದ್ದಾರೆ. ೨೦ ಕೋಟಿ ರೂಪಾಯಿಯ ಭೂಮಿ ಖರೀದಿಯಲ್ಲಿ ಹಗರಣ ಆಗಿದೆ ಎಂದು ಆರೋಪವನ್ನು ಆಪ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನಿಂದ ಮಾಡಲಾಗುತ್ತಿದೆ. ಮಹಂತ ಪರಮಹಂಸ ದಾಸ ಅವರು ಈ ಬಗ್ಗೆ ಹೇಳುತ್ತಾ, ಬೆಳಿಗ್ಗೆ ಇಬ್ಬರು ವ್ಯಕ್ತಿಗಳು ನನ್ನ ಬಳಿಗೆ ಬಂದು ೧೦೦ ಕೋಟಿ ರೂಪಾಯಿಯ ಪ್ರಸ್ತಾವನೆ ಮಾಡಿದರು. ನಾನು ಅವರನ್ನು ತಿರಸ್ಕರಿಸಿದಾಗ, ಅವರು, ‘ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಗೆದ್ದು ಅಧಿಕಾರಕ್ಕೆ ಬಂದರೆ, ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು’ ಎಂದು ಹೇಳಿದರು. ಅದಕ್ಕೆ ನಾನು, ‘ನಾನು ಸಂತ ಮತ್ತು ನನಗೆ ರಾಷ್ಟ್ರಹಿತವೇ ಸರ್ವಸ್ವವಾಗಿದೆ’ ಎಂದು ಹೇಳಿದೆ, ಎಂದರು.