ಪೂಜ್ಯಪಾದ ಸಂತಶ್ರಿ ಅಸಾರಾಮಜಿ ಬಾಪು ಅವರಿಗೆ ಜಾಮೀನು ಏಕೆ ಇಲ್ಲ ?

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪರ್ಲ್ ಪುರಿಗೆ ಜಾಮೀನು

ಪುಜ್ಯಪಾದ ಸಂತಶ್ರಿ ಅಸಾರಾಮಜಿ ಬಾಪು ಅವರ ಭಕ್ತರು ಸಾಮಾಜಿಕ ಮಾಧ್ಯಮದಿಂದ ಆಕ್ರೋಶ !

ನವ ದೆಹಲಿ – ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೂರಚಿತ್ರವಾಹಿನಿಯ ನಟ ಪರ್ಲ್ ಪುರಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿತ್ತು. ಅವರನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಇದೀಗ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಸಾಯಿ ಸೆಷನ್ಸ್ ನ್ಯಾಯಾಲಯವು ಪುರಿಗೆ ನೀಡಿದ ಜಾಮೀನು ನೀಡಿದಕ್ಕೆ ಪೂಜ್ಯಪಾದ ಸಂತಶ್ರೀ ಅಸಾರಾಮ ಬಾಪು ಅವರ ಭಕ್ತರು ಸಾಮಾಜಿಕ ಮಾಧ್ಯಮಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪರ್ಲ್ ಬಂಧನಕ್ಕೊಳಗಾದ ಕೇವಲ ೧೧ ದಿನಗಳಲ್ಲಿ ಅವರಿಗೆ ಹೇಗೆ ಜಾಮೀನು ಸಿಕ್ಕಿತು ? ಎಂದು ಅವರು ಪ್ರಶ್ನಿಸಿದರು.

೧. ಆಸಾರಾಮ ಬಾಪು ಅವರ ಮೇಲೆಯೂ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಇದೆ ಅವರನ್ನು ಸಹ ಪರ್ಲ್‍ನಂತೆ ಪೊಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಪರ್ಲ್ ಅವರಿಗೆ ಜಾಮೀನು ಸಿಗಬಹುದಾದರೆ, ಬಾಪು ಅವರಿಗೆ ಏಕೆ ಇಲ್ಲ ? ಇದು ಪಕ್ಷಪಾತವಾಗಿದೆ. ಎಂದು ಪೂಜ್ಯವಾದ ಸಂತಶ್ರೀ ಅಸಾರಾಮ ಬಾಪು ಅವರ ಭಕ್ತರು ಆರೋಪಿಸಿದ್ದಾರೆ.

. ಸಾಮಾಜಿಕ ಮಾಧ್ಯಮದಲ್ಲಿ ಓರ್ವ ಟ್ವೀಟ್ ಬಳಕೆದಾರನು, ನಟ ಪರ್ಲ್ ಪುರಿಗೆ ಜಾಮೀನು ಸಿಗುತ್ತದೆ. ಭಾರತವನ್ನು ಸಂತರ ಭೂಮಿ ಎಂದು ಕರೆಯುವ ಸ್ಥಳದಲ್ಲಿ, ಅದೇ ಫಾಸ್ಕೋ ಕಾನೂನಿನಡಿಯಲ್ಲಿ ಆಸಾರಾಮ ಬಾಪು ಅವರಿಗೆ ಜಾಮೀನು ದೊರೆಯುವುದಿಲ್ಲ ಎಂದು ಹೇಳಿದ್ದಾರೆ.